
ಕಾರ್ಕಳ : ಕಾರ್ಕಳ ತಾಲೂಕಿನ ನೀರೆ ಬೈಲೂರು ಗ್ರಾಮದ ಮಾರುತಿಬೆಟ್ಟುವಿನ ಶ್ರೀ ವೀರಮಾರುತಿ ಭಜನಾ ಮಂದಿರ, ಸಾಗದ ವತಿಯಿಂದ ವರ್ಷಂಪ್ರತಿ ಜರಗುವಂತೆ ಈ ಸಲದ 60ನೇ ವರ್ಷದ ಭಜನಾ ಮಂಗಲೋತ್ಸವವು ತಾ. 28-02-2026ನೇ ಶನಿವಾರ ಸಂಜೆ ಗಂಟೆ 4.00ಕ್ಕೆ ದೀಪ ಪ್ರಜ್ವಲನಗೊಳ್ಳುವ ಮೂಲಕ ಭಜನಾ ಸಂಕೀರ್ತನ ಪ್ರಾರಂಭಗೊಂಡು, ಮರುದಿನ ಸೂರ್ಯೋದಯದ ತನಕ ನಡೆಯಲಿದೆ.
ವರ್ಷಂಪ್ರತಿಯಂತೆ ರಾತ್ರಿ ಗಂಟೆ 12.00ಕ್ಕೆ ರಂಗಪೂಜೆ ನೆರವೇರಲಿದೆ. ಈ ಭಜನಾ ಕಾರ್ಯಕ್ರಮಕ್ಕೆ ತಮ್ಮೆಲ್ಲಾ ಸಂತ ಮಂಡಳಿ ಹಾಗೂ ಇಷ್ಟಮಿತ್ರ ಬಂಧು-ಬಳಗದೊಂದಿಗೆ ಪಾಲ್ಗೊಂಡು, ಭಜನಾ ಮಂಗಲೋತ್ಸವವನ್ನು ಯಶಸ್ವಿಗೊಳಿಸಿ, ಶ್ರೀ ರಾಮಚಂದ್ರ ಶ್ರೀ ಮುಖ್ಯಪ್ರಾಣ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವ್ಯವಸ್ಥಾಪಕರಾದ ಬೈಲೂರು ಸುಬ್ರಾಯ ಪ್ರಭು, ಸಾಗ ಫ್ಯಾಮಿಲಿ ಟ್ರಸ್ಟ್ (ರಿ.) ಸಾಗ , ಶ್ರೀ ಬಿ. ನಾರಾಯಣ ಪ್ರಭು ಅಧ್ಯಕ್ಷರು ,ಶ್ರೀ ಬಿ. ಮಾಧವ ಪ್ರಭು ಉಪಾಧ್ಯಕ್ಷರು, ಶ್ರೀ ಉದಯಾನಂದ ಪ್ರಭು ಕಾರ್ಯದರ್ಶಿ, ಶ್ರೀ ಬಿ. ದೇವೇಂದ್ರ ಪ್ರಭು ಕೋಶಾಧಿಕಾರಿ, ಶ್ರೀ ಹೆಚ್. ವೆಂಕಟರಮಣ ಭಟ್ ಅರ್ಚಕರು, ಶ್ರೀ ಗಣಪತಿ ಪ್ರಭು ಕಟ್ನಪಲ್ಕೆ , ಶ್ರೀ ಕೇಶವ ಪ್ರಭು ಬೇಳಿಂಜೆ, ಶ್ರೀ ಮಾಧವರಾಯ ಪ್ರಭು ಮಣಿಪಾಲ , ಶ್ರೀ ವಸಂತ ಪ್ರಭು ಸಾಗ , ಶ್ರೀ ಸುರೇಂದ್ರ ಪ್ರಭು ಸಾಗ , ಶ್ರೀ ವೀರಮಾರುತಿ ಭಜನಾ ಮಂಡಳಿ ಮತ್ತು ಹತ್ತು ಸಮಸ್ತರು ವಿನಂತಿಸಿದ್ದಾರೆ .



































