spot_img

ಗೋಕರ್ಣದಲ್ಲಿ ರಷ್ಯಾದ ಯೋಧ ಸೆರ್ಗೆಯ್ ಗ್ರಾಬ್ಲೆವ್‌ಗೆ ಶಾಸ್ತ್ರೋಕ್ತ ಶ್ರಾದ್ಧ ವಿಧಿ

Date:

ಗೋಕರ್ಣ : ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಗೋಕರ್ಣದಲ್ಲಿ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ವೀರಮರಣ ಹೊಂದಿದ ರಷ್ಯಾ ಯೋಧ ಸೆರ್ಗೆಯ್ ಗ್ರಾಬ್ಲೆವ್ ಅವರ ಶ್ರಾದ್ಧ ವಿಧಿ ಶಾಸ್ತ್ರೋಕ್ತವಾಗಿ ನೆರವೇರಿತು. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಪುರೋಹಿತ ವೇ. ಪ್ರಶಾಂತ ಹಿರೇಗಂಗೆ ಅವರ ನೇತೃತ್ವದಲ್ಲಿ ನಾರಾಯಣ ಬಲಿ, ಪಿಂಡ ಪ್ರದಾನ, ತರ್ಪಣ ಸೇರಿದಂತೆ ವೈದಿಕ ವಿಧಿ ವಿಧಾನಗಳು ನೆರವೇರಿದವು.

ಸೆರ್ಗೆಯ್ ಅವರ ಸಂಬಂಧಿಕರಾದ ಎಲಿನಾ ಅವರು ಈ ಕಾರ್ಯವನ್ನು ಆಯೋಜಿಸಿದ್ದರು. ರಷ್ಯಾದಲ್ಲಿರುವ ಮೃತ ಯೋಧನ ಕುಟುಂಬದವರು ವಿಡಿಯೋ ಕಾನ್ಫರೆನ್ಸ್ ಮೂಲಕ ಈ ವಿಧಿಗಳಿಗೆ ಭಾಗಿಯಾದರು. ಪ್ರಾರ್ಥನೆಯ ಮೂಲಕ ಅವರು ಸೆರ್ಗೆಯ್ ಅವರ ಆತ್ಮಕ್ಕೆ ಮೋಕ್ಷ ಸಿಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಭಾರತೀಯ ಸಂಸ್ಕೃತಿ ಮತ್ತು ಗೋಕರ್ಣದೊಂದಿಗೆ ನಂಟು:
ಸೆರ್ಗೆಯ್ ಗ್ರಾಬ್ಲೆವ್ 18 ವರ್ಷಗಳ ಹಿಂದೆ ಭಾರತ ಪ್ರವೇಶಿಸಿ ಗೋಕರ್ಣದಲ್ಲಿ ಆಧ್ಯಾತ್ಮಿಕ ಜೀವನ ನಡೆಸುತ್ತಿದ್ದರು. ವಾರಣಾಸಿಯಲ್ಲಿ ಸಂಸ್ಕೃತ ಅಧ್ಯಯನ ಮಾಡಿದ್ದ ಅವರು ವೇದಮಂತ್ರಗಳ ಅಭ್ಯಾಸ ಮಾಡುತ್ತ, ಹಿಂದೂ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದರು. ಗೋಕರ್ಣದಲ್ಲಿ ಹಲವರೊಂದಿಗೆ ಆತ್ಮೀಯ ಸಂಪರ್ಕ ಬೆಳೆಸಿದ ಅವರು ಇಲ್ಲಿ “ಸೆರ್ಗೆಯ್ ಬಾಬಾ” ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು.

ವೀರಮರಣದ ಕಥೆ:
ಸೆರ್ಗೆಯ್ ಗ್ರಾಬ್ಲೆವ್ ಅವರು 18 ವರ್ಷಗಳ ಹಿಂದೆ ರಷ್ಯಾ ಸೇನೆಯನ್ನು ತೊರೆದಿದ್ದು , 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದಾಗ ತಾಯ್ನಾಡಿನ ಕರೆಯೊಂದಿಗೆ ಪುನಃ ಸೇನೆಗೆ ಸೇರಿದ್ದರು. ಅವರು ಏಪ್ರಿಲ್ 28, 2025ರಂದು ಯುದ್ಧದಲ್ಲಿ ವೀರಮರಣ ಹೊಂದಿದರು.

ಗೋಕರ್ಣದಲ್ಲಿ ಶ್ರಾದ್ಧ ಆಯೋಜನೆಯ ಕಾರಣ:
ಅವರ ಜೀವನದ ಕೊನೆಯ ದಿನಗಳವರೆಗೆ ಗೋಕರ್ಣವನ್ನು ಆತ್ಮೀಯವಾಗಿ ಮೆಚ್ಚಿದ ಸೆರ್ಗೆಯ್ ಕುಟುಂಬವು ಭಾರತದಲ್ಲಿ ನಡೆಯುವ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ಗೌರವಿಸುವ ದೃಷ್ಟಿಯಿಂದ ಗೋಕರ್ಣದಲ್ಲಿಯೇ ಅವರ ಶ್ರಾದ್ಧ ಕಾರ್ಯವನ್ನು ಆಯೋಜಿಸಿತ್ತು. ಪವಿತ್ರ ಗೋಕರ್ಣ ಕ್ಷೇತ್ರದಲ್ಲಿ ನಡೆದ ಈ ಅಪರೂಪದ ಅಂತ್ಯಕ್ರಿಯೆ ಹಲವರ ಗಮನ ಸೆಳೆದಿದ್ದು, ಸೆರ್ಗೆಯ್ ರವರ ಆತ್ಮೀಯರು ಶ್ರದ್ಧಾಪೂರ್ವಕವಾಗಿ ಭಾಗಿಯಾಗಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಾರ್ಕಳ ಜ್ಞಾನಸುಧಾ – ಶಿಕ್ಷಕರ ದಿನಾಚರಣೆಸಾವಧಾನದ ಮನಸ್ಥಿತಿ ಗೌರವದ ಉಪಸ್ಥಿತಿ : ವಸಂತ್ ಆಚಾರ್

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ರಿ. ಇದರ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ

ಉಡುಪಿ ಜಿಲ್ಲಾ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಶನ್ ರಿ. ಇದರ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮವು ಅಧ್ಯಕ್ಷರಾದ ಶ್ರೀಯುತ ಎಮ್ ಕೆ ದಿನೇಶ್ ಮೂಡಬಿದ್ರಿಯವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುದರ ಮುಖೇನ ಉದ್ಯಾವರ ನಿತ್ಯಾನಂದ ಸಭಾಂಗಣದಲ್ಲಿ ನಡೆಯಿತು.

ಹಿಂದೂ ಹೆಣ್ಣು ಮಕ್ಕಳ ಮೇಲೆ ಪುರುಷ ಪೇದೆಯ ದೌರ್ಜನ್ಯ ಎಷ್ಟು ಸಮಂಜಸ ? ? – ಶ್ರೀಮತಿ ರಮಿತಾ ಶೈಲೇಂದ್ರ ಕಾರ್ಕಳ

ಹಿಂದೂ ಹೆಣ್ಣು ಮಕ್ಕಳ ಮೇಲೆ ಪುರುಷ ಪೇದೆಯ ದೌರ್ಜನ್ಯ ಎಷ್ಟು ಸಮಂಜಸ ?ಎಂದು ಶ್ರೀಮತಿ ರಮಿತಾ ಶೈಲೇಂದ್ರ ಕಾರ್ಕಳರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಮೇಲ್‌ನಲ್ಲಿ ಅಡಗಿರುವ 5 ಮಹತ್ವದ ವೈಶಿಷ್ಟ್ಯಗಳು: ಇಮೇಲ್ ಬಳಕೆ ಇನ್ನಷ್ಟು ಸುಲಭ

ಜಿಮೇಲ್‌ನಲ್ಲಿರುವ 5 ಮಹತ್ವದ ವೈಶಿಷ್ಟ್ಯಗಳು ನಮ್ಮ ದೈನಂದಿನ ಕೆಲಸವನ್ನು ಇನ್ನಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಿಸುತ್ತವೆ.