
ಕಾರ್ಕಳ : ರೊ. ಪಿ ಹೆಚ್ ಎಫ್ ಸುರೇಶ್ ನಾಯಕ್ & ಸುಮ ಎಸ್ ನಾಯಕ್ ದಂಪತಿಗಳ ಮಗ ಶ್ರೀ ಸುಹಾಸ್ ನಾಯಕ್ & ಅಂಜಲಿ ಇವರ ಪ್ರಯುಕ್ತ ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ ವಿಜೇತ ವಿಶೇಷ ಶಾಲೆಗೆ ಅವಶ್ಯಕವಿರುವ ಅಡುಗೆ ಪಾತ್ರೆಗಳನ್ನು ಹಸ್ತಾಂತರಿಸಲಾಯಿತು. ಹಾಗೂ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷರಾದ ರೊ. ನವೀನ್ ಚಂದ್ರ ಶೆಟ್ಟಿ, ಮೇಜರ್ ಡೋನರ್ ರೊ. ಮೋಹನ್ ಶೆಣೈ, ಕಾರ್ಯದರ್ಶಿ ರೊ.ಚೇತನ್ ನಾಯಕ್, ರೊ. ಅರುಣ್ ಕುಮಾರ್ ಶೆಟ್ಟಿ, ರೊ. ಶೇಖರ್ ಹೆಚ್, ರೊ.ವಸಂತ್ ಎಂ, ರೊ. ಶ್ರೀಶ ಭಟ್, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ಉಪಸ್ಥಿತರಿದ್ದರು.

ವಿಶೇಷ ಶಿಕ್ಷಕಿ ಶ್ರೀಮತಿ ಹರ್ಷಿತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಡಾ.ಕಾಂತಿ ಹರೀಶ್ ಸ್ವಾಗತಿಸಿ, ವಿಶೇಷ ಶಿಕ್ಷಕಿ ಸುಕೇತಾ ವಂದಿಸಿದರು.
