
ಪ್ರಾಥಮಿಕ ಆರೋಗ್ಯ ಕೇಂದ್ರ ಇರ್ವತ್ತೂರು ಇಲ್ಲಿನ ಅಂಗಳಕ್ಕೆ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಇಂಟರ್ಲಾಕ್ ಅಳವಡಿಕ ಕೊಡುಗೆ ಹಸ್ತಾಂತರ ಕಾರ್ಯಕ್ರಮವು ದಿನಾಂಕ 28/02/2025ರಂದು ನೆರವೇರಿತು.
ಜಿಲ್ಲಾ ಗವರ್ನರ್ ರೂಟೇರಿಯನ್ C.A, ದೇವಾನಂದ್ ಅವರು ಪ್ರಾಥಮಿಕ ಆರೋಗ್ಯ ಕೇಂದ್ರ ಇರ್ವತ್ತೂರಿನ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಯಶೋಧರ ಎಂ ಇವರಿಗೆ ಹಸ್ತಾಂತರಿಸಿದರು.ಕಾರ್ಯಕ್ರಮದಲ್ಲಿ ಸಹಾಯಕ ಗವರ್ನರ್ ರೂಟೇರಿಯನ್ ಅನಿಲ್ ಡೇಸಾ, ವಲಯ ಸೇನಾನಿ ರೂಟೇರಿಯನ್ ಸುರೇಶ್ ನಾಯಕ್, ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರೋ.ಇಕ್ಕಾಲ್ ಅಹಮದ್, ಕಾರ್ಯದರ್ಶಿ ರೋ. ಗಣೇಶ್ ಸಾಲಿಯಾನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮೀಣ ಸರಕಾರಿ ಆಸ್ಪತ್ರೆಗಳಲ್ಲಿ ರೋಟರಿ ಕ್ಲಬ್ ಕಾರ್ಕಳ ಇದರ ದೇಣಿಗೆಗಳಿಗಾಗಿ ಸದಸ್ಯರನ್ನು ಅಭಿನಂದಿಸಲಾಯಿತು. ಗ್ರಾಮ ಪಂಚಾಯತ್ ಉಪಾದ್ಯಕ್ಷರು, ಸ್ಥಳೀಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.