
ಗೋವಿಂದೂರು : ಇಂದು ಮದ್ಯಾಹ್ನ 3:00 ಸುಮಾರಿಗೆ ಬಿರುಸಿನ ಗಾಳಿ ಮಳೆಗೆ ಕಾರ್ಕಳದ ಗೋವಿಂದೂರಿನ ಅಯ್ಯಪ್ಪ ಶಿಬಿರದ ಮೇಲ್ಚಾವಣಿ ಗಾಳಿಯ ರಭಸಕ್ಕೆ ಹಾರಿ ನುಚ್ಚುನೂರಾಗಿದೆ.

ಅದೃಷ್ಟವಶಾತ್, ಘಟನೆ ಸಂಭವಿಸಿದ ಸಮಯದಲ್ಲಿ ಶಿಬಿರದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ದುರಂತದಲ್ಲಿ ಮೇಲ್ಚಾವಣಿ ಸಂಪೂರ್ಣವಾಗಿ ಧರೆಗೆ ಕುಸಿದಿದ್ದು ಅಂದಾಜು 2 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
