spot_img

ಪ್ರತೀಕಾರದ ರಾಜಕಾರಣ ಖಂಡನೀಯ: ಕೋಮುವಾದಿ ರಾಜಕಾರಣಕ್ಕೆ ಬಿಜೆಪಿ–ಸಂಘ ಪರಿವಾರ ಕಾರಣವೆಂದು ದಿನೇಶ್ ಗುಂಡೂರಾವ್ ಆಕ್ರೋಶ

Date:

spot_img

ಶಿವಮೊಗ್ಗ:“ಒಬ್ಬನ ಹತ್ಯೆಗೆ ಪ್ರತೀಕಾರವಾಗಿ ಮತ್ತೊಬ್ಬನ ಹತ್ಯೆ ನಡೆಯುವಂತಾ ಪರಿಸ್ಥಿತಿ ಬಂದರೆ, ಸಮಾಜದಲ್ಲಿ ಬದುಕುವುದೇ ಕಷ್ಟವಾಗುತ್ತದೆ,” ತಾವು ಶಿಸ್ತು ಹಾಗೂ ಶಾಂತಿಯ ಸ್ಥಾಪನೆಗೆ ಕಟಿಬದ್ಧ ಎಂದು ಹೇಳಿಕೊಂಡಿರುವ ಸಚಿವ ದಿನೇಶ್ ಗುಂಡೂರಾವ್, ಕೋಮುವಾದದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಶಿವಮೊಗ್ಗದಲ್ಲಿ ಕೊಲೆಯಾಗಿರುವ ಸುಹಾಸ್ ಶೆಟ್ಟಿ ಒಬ್ಬ ರೌಡಿಶೀಟರ್ ಆಗಿದ್ದು, ಎರಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈಗ ಆತನ ಹತ್ಯೆಯ ಪ್ರತೀಕಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಹತ್ಯೆ ಮಾಡಲಾಗಿದೆ. ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಇಂಥ ಪ್ರತೀಕಾರದ ಸರಣಿಯಿಂದ ಸಮಾಜದಲ್ಲಿ ಅಶಾಂತಿ ಏರ್ಪಡುತ್ತಿದೆ,” ಎಂದು ಹೇಳಿದ್ದಾರೆ.

ಪೊಲೀಸರ ತನಿಖೆ ಪ್ರಗತಿಯಲ್ಲಿದೆ:
“ಕೊಲೆ ಆರೋಪಿಗಳ ಬಗ್ಗೆ ಪ್ರಾಥಮಿಕ ಸುಳಿವು ಪೊಲೀಸರಿಗೆ ದೊರಕಿದ್ದು, ಶೀಘ್ರದಲ್ಲೇ ಬಂಧನ ನಡೆಯಲಿದೆ. ತನಿಖೆಯ ನಂತರವೇ ನಿಖರ ಮಾಹಿತಿ ಲಭ್ಯವಾಗಲಿದೆ,” ಎಂದು ಗುಂಡೂರಾವ್ ತಿಳಿಸಿದರು.

ಕೋಮುವಾದಿ ವಾತಾವರಣಕ್ಕೆ ಸಂಘ ಪರಿವಾರವೇ ಕಾರಣ:
“ದಕ್ಷಿಣ ಕನ್ನಡದಲ್ಲಿ ಕೋಮುವಾದದ ವಾತಾವರಣ ಕಟ್ಟುವ ಕೆಲಸಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳು ಕಾರಣವಾಗಿವೆ. ಒಂದು ಶವ ಸಿಕ್ಕರೂ ರಾಜಕೀಯ ಮಾಡುವುದು ಇವರ ಧೋರಣೆ. ಅವರು ಮುಸಲ್ಮಾನರು ಎಂದರೆ ನಕಾರಾತ್ಮಕ ನೋಟದಿಂದಲೇ ನೋಡುತ್ತಾರೆ. ಇದರಿಂದ ಸಮಾಜದಲ್ಲಿ ತಾರತಮ್ಯ ಹಾಗೂ ಅಶಾಂತಿ ಹುಟ್ಟುತ್ತಿದೆ,” ಎಂದು ಅವರು ಟೀಕಿಸಿದರು.

ಬರ್ಬರ ಹತ್ಯೆ ಖಂಡನೀಯ:
“ಇದು ಅಮಾನವೀಯ ಹಾಗೂ ಬರ್ಬರ ಹತ್ಯೆ. ಇಂಥ ಕೃತ್ಯಗಳು ಸಮಾಜದಲ್ಲಿ ಭಯ ಹಾಗೂ ಭದ್ರತೆ ಕೊರತೆಯ ಪರಿಸ್ಥಿತಿ ನಿರ್ಮಿಸುತ್ತವೆ. ಸಮಾಜದ ಮನಸ್ಸನ್ನು ಪರಿವರ್ತಿಸಬೇಕಾಗಿದೆ . ಹತ್ಯೆ ಮಾಡಿದವರು ಯಾರು ಎಂಬುದು ಪ್ರಮುಖವಲ್ಲ, ಕಾನೂನು ತಪ್ಪಿದರೆ ಶಿಕ್ಷೆಯೂ ತಪ್ಪದು,” ಎಂದು ಸ್ಪಷ್ಟಪಡಿಸಿದರು.

ಟಾಸ್ಕ್‌ ಫೋರ್ಸ್ ರಚನೆಗೆ ಸರ್ಕಾರ ಸಜ್ಜು:
“ದಕ್ಷಿಣ ಕನ್ನಡದಲ್ಲಿ ಈಗಾಗಲೇ ಸೆಕ್ಷನ್ 144 ಜಾರಿಯಲ್ಲಿದೆ. ವಿಶೇಷ ಟಾಸ್ಕ್‌ ಫೋರ್ಸ್ ರಚನೆಯ ಬಗ್ಗೆ ಚಿಂತನೆ ನಡೆಯುತ್ತಿದೆ. ಆ್ಯಂಟಿ ಕಮ್ಯೂನಲ್ ಫೋರ್ಸ್ ರಚನೆಯು ಈಗ ಅನಿವಾರ್ಯವಾಗಿದೆ. ಪ್ರಚೋದನಾತ್ಮಕ ಭಾಷಣಗಳ ಮೇಲೆ ಕೇಸ್ ದಾಖಲಾಗಿದೆ. ಹಿಂಸಾತ್ಮಕ ಚಟುವಟಿಕೆಗಳನ್ನು ಹಿಂದುತ್ವದ ಹೆಸರಿನಲ್ಲಿ ತಡೆಯುವುದು ಅನಿವಾರ್ಯವಾಗಿದೆ,” ಎಂದು ಸಚಿವರು ತಿಳಿಸಿದರು.

ಬಿಜೆಪಿಯ ಹಿಂದುತ್ವ ರಾಜಕಾರಣ ಭಯ ಹುಟ್ಟಿಸುತ್ತಿದೆ:
“ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಬಲ ಪಡೆದು ಮರಳು ದಂಧೆ ಮಾಡುವವರು, ರೌಡಿಗಳು ಸಹ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಇಂಥವರೆಲ್ಲರನ್ನು ಕಾನೂನಿನಡಿ ತರಬೇಕಾಗಿದೆ. ಶರಣ್ ಪಂಪವೆಲ್ ನೀಡಿರುವ ಬಂದ್ ಕರೆ ಕೂಡ ಪ್ರಚೋದನಾತ್ಮಕವಾಗಿದೆ,” ಎಂದೂ ಅವರು ಹೇಳಿದರು.

“ವಿಷ ತುಂಬಿದ ಭಾಷಣಗಳಿಂದ ಸಮಾಜಕ್ಕೆ ಶಾಂತಿ ಸಿಗದು. ಮಾನವೀಯತೆ, ತರ್ಕ, ನ್ಯಾಯ, ಈ ಮೌಲ್ಯಗಳನ್ನೇ ನಾವು ಬೆಳೆಸಬೇಕು” ಎಂದು ಅವರು ಹೇಳಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಪರಾಷ್ಟ್ರಪತಿ ಸ್ಥಾನಕ್ಕೆ ಕರ್ನಾಟಕ ಮೂಲದ ನ್ಯಾಯಮೂರ್ತಿ ಅಬ್ದುಲ್ ನಝೀರ್ ಹೆಸರು ಮುಂಚೂಣಿಯಲ್ಲಿ

ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ತಮ್ಮ ಸ್ಥಾನಕ್ಕೆ ಅನಿರೀಕ್ಷಿತವಾಗಿ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, ಈ ಮಹೋನ್ನತ ಹುದ್ದೆಗೆ ಕರ್ನಾಟಕದ ಹೆಮ್ಮೆಯ ಪುತ್ರ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

ಧರ್ಮಸ್ಥಳ ದುರಂತಗಳ ಆಳಕ್ಕೆ ಇಳಿಯಲು ಸಹಾಯವಾಣಿ ಸ್ಥಾಪನೆಗೆ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಶವ ವಿಲೇವಾರಿ ಪ್ರಕರಣವು ಇದೀಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬೋಳದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಅಡ್ಡಿಪಡಿಸಿದ ಬಿಜೆಪಿ ಗ್ರಾ. ಪಂ ಸದಸ್ಯರ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

ಬಿಜೆಪಿ ಪಂಚಾಯತ್ ಸದಸ್ಯರ ದುರ್ನಡತೆಯ ವಿರುದ್ದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಬೋಳ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಜಂಟಿ ಆಶ್ರಯದಲ್ಲಿ ಬೋಳ ಗ್ರಾಮ ಪಂಚಾಯತ್ ಕಚೇರಿ ಮುಂಬಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಎಂ.ಆರ್.ಐ. ಯಂತ್ರದಿಂದ ಲೋಹದ ಆಭರಣ ಧರಿಸಿದ ವ್ಯಕ್ತಿಯ ಸಾವು!

ವೈದ್ಯಕೀಯ ಜಗತ್ತಿನಲ್ಲಿ ಅಪರೂಪದ ಆದರೆ ಅತ್ಯಂತ ಗಂಭೀರವಾದ ದುರಂತವೊಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಸಂಭವಿಸಿದ್ದು, ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂ.ಆರ್.ಐ.) ಸ್ಕ್ಯಾನ್ ಯಂತ್ರದ ಪ್ರಬಲ ಕಾಂತೀಯ ಕ್ಷೇತ್ರಕ್ಕೆ ಸೆಳೆದುಕೊಂಡು ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ