ಉಡುಪಿ : ನಗರದ ಮಿತ್ರ ಆಸ್ಪತ್ರೆಯ ಸಮೀಪ ಇಂದು ಬೆಳಗಿನ ಜಾವ ಮಾನಸಿಕ ಅಸ್ವಸ್ಥ ಯುವಕನೋರ್ವ ಸಾರ್ವಜನಿಕರ ಮನೆಗಳಿಗೆ ಪ್ರವೇಶಿಸಿ ಆತಂಕ ಸೃಷ್ಟಿಸಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ವಿಶು ಶೆಟ್ಟಿ ಅಂಬಲಪಾಡಿ ಅವರು ಯುವಕನನ್ನು ರಕ್ಷಿಸಿ, ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಟ್ಟಡದ ಪೈಪೊಂದನ್ನು ಏರಿ ಅಪಾಯಕಾರಿ ವರ್ತನೆ ತೋರುತ್ತಿದ್ದ ಯುವಕನನ್ನು ಕಂಡು ಸ್ಥಳೀಯರು ಗಾಬರಿಗೊಂಡಿದ್ದರು. ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಯುವಕ ಹುಬ್ಬಳ್ಳಿ ಮೂಲದ ಸುಧಾಕರ ಪವಾರ್ ಎಂದು, ತಂದೆ ಬಸವಪ್ಪ, ವಿದ್ಯಾನಗರ ಎಂದು ಅಸ್ಪಷ್ಟವಾಗಿ ಮಾಹಿತಿ ನೀಡಿದ್ದಾನೆ.

ನಗರ ಠಾಣೆಯ ಪೊಲೀಸ್ ರಮೇಶ್ ಅವರು ಈ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ. ಯುವಕನ ಸಂಬಂಧಿಕರು ಅಥವಾ ಆತನ ಬಗ್ಗೆ ಮಾಹಿತಿ ಇರುವವರು ಉಡುಪಿ ನಗರ ಠಾಣೆ ಅಥವಾ ಬಾಳಿಗಾ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ಮನವಿ ಮಾಡಿದ್ದಾರೆ.