spot_img

ರೇಣುಕಾ ಸ್ವಾಮಿ ಪ್ರಕರಣ: ದರ್ಶನ್ ಮತ್ತು ಪವಿತ್ರಾಗೌಡ ಜಾಮೀನು ರದ್ದು ವಿಚಾರಣೆ ಏಪ್ರಿಲ್. 2ಕ್ಕೆ

Date:

ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ಜಾಮೀನು ರದ್ದು ವಿಚಾರಣೆ ಏಪ್ರಿಲ್ 2ರಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

ಪೊಲೀಸ್ ಇಲಾಖೆ ಜಾಮೀನು ರದ್ದತಿಗಾಗಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ಇನ್ನೂ ನಡೆಯದ ಕಾರಣ ವಕೀಲ ಅನಿಲ್ ಕುಮಾರ್ ನಿಶಾನಿ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಸುಪ್ರೀಂ ಕೋರ್ಟು ಏಪ್ರಿಲ್. 2ರಂದು ವಿಚಾರಣೆ ನಡೆಸಲು ಒಪ್ಪಿಗೆ ನೀಡಿದೆ.

ಈ ಪ್ರಕರಣದ ಎ2 ಆರೋಪಿ ದರ್ಶನ್ ಚಿತ್ರೀಕರಣದಲ್ಲಿ ನಿರತರಾಗಿದ್ದು, ಎ1 ಆರೋಪಿ ಪವಿತ್ರಾ ಗೌಡ ರೆಡ್ ಕಾರ್ಪೆಟ್ ಫ್ಯಾಷನ್ ಸ್ಟುಡಿಯೋದಲ್ಲಿ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

2024ರ ಜೂನ್ 9ರಂದು ಚಿತ್ರದುರ್ಗದಲ್ಲಿ ರೇಣುಕಾ ಸ್ವಾಮಿಯ ಹತ್ಯೆ ನಡೆದಿತ್ತು. ಈ ಸಂಬಂಧ ದರ್ಶನ್, ಪವಿತ್ರಾ ಗೌಡ ಸೇರಿ ಹಲವರನ್ನು ಬಂಧಿಸಲಾಗಿತ್ತು. ಆರೋಪಿ ದರ್ಶನ್, ಪವಿತ್ರಾ ಹಾಗೂ ಇತರರು 5 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಜಿರೆಯಲ್ಲಿ ಅಕ್ರಮ ಕೂಟ, ಶಾಂತಿ ಭಂಗ: ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲು!

ಉಜಿರೆಯಲ್ಲಿ ಶಾಂತಿ ಭಂಗ ಆರೋಪಕ್ಕೆ ಮಹೇಶ್ ತಿಮರೋಡಿ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲು.

ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ: ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್!

ಕರ್ನಾಟಕದ ಕರಾವಳಿ ಭಾಗದಲ್ಲಿ ಇಂದು ಭಾರೀ ಮಳೆಯ ಸಂಭವವಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಕಾಂತಾವರ : ಎ.22 ರಿಂದ ಶ್ರೀ ಕ್ಷೇತ್ರ ಕೇಪ್ಲಾಜೆ ಬ್ರಹ್ಮಕಲಶ ವರ್ಧಂತಿ ಉತ್ಸವ ಹಾಗೂ ಪಗ್ಗು ಮಾರಿಪೂಜೆ.

ಎ.22 ರಿಂದ ಶ್ರೀ ಕ್ಷೇತ್ರ ಕೇಪ್ಲಾಜೆ ಮಹಾಮ್ಮಾಯಿ ದೇವಿಗುಡಿಯಲ್ಲಿ ಬ್ರಹ್ಮಕಲಶ ವರ್ಧಂತಿ ಉತ್ಸವ ಹಾಗೂ ಪಗ್ಗು ಮಾರಿಪೂಜೆಯು ಜರಗಲಿರುವುದು.

ನಿವೃತ್ತ ಡಿಜಿ ಓಂ ಪ್ರಕಾಶ್‌ ಬರ್ಬರ ಹತ್ಯೆ: ಪತ್ನಿಯ ಮೇಲೆ ಕೊಲೆ ಆರೋಪ!

ಬೆಂಗಳೂರು ನಗರದಲ್ಲಿ ಭೀಕರ ಘಟನೆ ನಡೆದಿದೆ. ಹೆಚ್‌ಎಸ್‌ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್‌ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.