spot_img

“ಪರೀಕ್ಷೆಗೋಸ್ಕರ ಓದುವುದಲ್ಲ ಜ್ಞಾನಕೋಸ್ಕರ ಓದುವ ಓದು ಶಾಶ್ವತವಾಗಿ ಉಳಿಯುತ್ತದೆ”- ಶ್ರೀ ಕೆ ರಾಜೇಂದ್ರ ಭಟ್

Date:

spot_img

ಕಾರ್ಕಳ : “ಇಂದು ಓದುವ ವಿಧಾನ ಬದಲಾಗಿ ವಿದ್ಯಾರ್ಥಿಗಳಿಗೆ ಓದಿದ ವಿಷಯಗಳು ಮರೆತು ಹೋಗುತ್ತಿದೆ. ಕೇವಲ ಪರೀಕ್ಷೆಗೋಸ್ಕರ ಓದದೆ ಜ್ಞಾನಕೋಸ್ಕರ ಓದುವಂತವರಾಗಬೇಕು. ಆಗ ಮಾತ್ರ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ ” ಎಂದು ಶ್ರೀ ಕೆ. ರಾಜೇಂದ್ರ ಭಟ್ ತಿಳಿಸಿದರು.

ಕ್ರಿಯೇಟಿವ್‌ ಕಾಲೇಜು ಕಾರ್ಕಳದ ಹೊಸ ಪರಿಕಲ್ಪನೆಯಿಂದ ಹುಟ್ಟಿಕೊಂಡಿರುವ ಕ್ರಿಯೇಟಿವ್ ಸ್ಫೂರ್ತಿ ಮಾತು ಸರಣಿ ಕಾರ್ಯಕ್ರಮದ 9ನೇ ಆವೃತ್ತಿಯ ಕಾರ್ಯಕ್ರಮವು ಕಲಿಯುವುದು ಒಂದು ಹಬ್ಬ- ಸಂಭ್ರಮಿಸೋಣ ಎಂಬ ಶೀರ್ಷಿಕೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಜರುಗಿತು. ರಾಷ್ಟ್ರೀಯ ಮಟ್ಟದ ಜೆಸಿಐ ತರಬೇತುದಾರರು ಹಾಗೂ ಖ್ಯಾತ ವಾಗ್ಮಿಗಳಾದ ಶ್ರೀ ಕೆ.ರಾಜೇಂದ್ರ ಭಟ್ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶರೀರದ ಒಳಗಿನಿಂದ ಎನರ್ಜಿ ಸೃಷ್ಟಿಸಿಕೊಂಡಾಗ ದೊರೆಯುವುದೇ ಸ್ಫೂರ್ತಿ, ವಿದ್ಯಾರ್ಥಿಗಳು ಪ್ರಯೋಗ ಮಾಡಬಹುದಾದ 10 ಸ್ಫೂರ್ತಿಗಳ ಬಗ್ಗೆ ಉದಾಹರಣೆಗಳನ್ನು ನೀಡುತ್ತಾ ತಿಳಿಸಿದರು. ಎಲ್ಲ ಮಕ್ಕಳು ಅದ್ಭುತವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಓದುವಿಕೆಯಲ್ಲಿ ಮೌನ ಓದುವಿನಿಂದಾಗುವ ಅನೇಕ ಲಾಭಗಳನ್ನು ತಿಳಿಸುತ್ತಾ, ಸ್ಮಾರ್ಟ್ ವರ್ಕ್ ಮಾಡಿದರೆ ಯಾವುದೇ ವಿಷಯಗಳು ಕಠಿಣವೆನಿಸುವುದಿಲ್ಲ ಕಡಿಮೆ ಪರಿಶ್ರಮ ಹಾಕಿ, ಆಸಕ್ತಿಯಿಂದ ಕೆಲಸ ಮಾಡುವುದೇ ಸ್ಮಾರ್ಟ್ ವರ್ಕ್. ಎಂದು ತಿಳಿಸುತ್ತಾ ಸುದೀರ್ಘವಾಗಿ ವಿದ್ಯಾರ್ಥಿಗಳನ್ನು ಕುರಿತು ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹ ಸಂಸ್ಥಾಪಕರಾದ ಶ್ರೀ.ಅಶ್ವತ್ ಎಲ್. ಶ್ರೀಯುತರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕ ವರ್ಗದವರು, ನಿಲಯ ಪಾಲಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಪ್ರಿಯಾಂಕ ನಿರೂಪಿಸಿ ವಂದಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಗಣೇಶ ಚತುರ್ಥಿ

ಈ ಹಬ್ಬವು ಜ್ಞಾನ, ಸಮೃದ್ಧಿ ಮತ್ತು ಶುಭದ ದೇವರಾದ ಶ್ರೀ ಗಣೇಶನಿಗೆ ಸಮರ್ಪಿತವಾಗಿದೆ

ಕಾರ್ಕಳದಲ್ಲಿ ಬಡ್ಡಿ ವ್ಯಾಪಾರಿ ಹತ್ಯೆ, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಬಂಧನ

ಕಾರ್ಕಳದ ಕುಂಟಲ್ಪಾಡಿಯಲ್ಲಿ ವ್ಯಕ್ತಿಯೊಬ್ಬರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ಬಸ್ ಚಾಲಕನನ್ನು ಬಂಧಿಸಲಾಗಿದೆ.

ಉಡುಪಿ ಉಚ್ಚಿಲ ದಸರಾ ಆಮಂತ್ರಣ ಪತ್ರಿಕೆ ಬಿಡುಗಡೆ

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಆಶ್ರಯದಲ್ಲಿ ಜರಗಲಿರುವ 4ನೇ ವರ್ಷದ ಉಡುಪಿ ಉಚ್ಚಿಲ ದಸರಾ 2025 ಉತ್ಸವದ ಆಮಂತ್ರಣ ಪತ್ರಿಕೆಯನ್ನು ಗೌರವ ಸಲಹೆಗಾರ ನಾಡೋಜ ಡಾ. ಜಿ. ಶಂಕರ್ ಅವರು ಬಿಡುಗಡೆಗೊಳಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಾಲ್ಕು ಬಾರಿ ಕರೆ ಮಾಡಿದರೂ ಉತ್ತರಿಸದ ಮೋದಿ: ವರದಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚಿನ ವಾರಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನಿಷ್ಠ ನಾಲ್ಕು ಬಾರಿ ಕರೆ ಮಾಡಿದ್ದಾರೆ. ಆದರೆ, ಮೋದಿ ಕರೆಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಜರ್ಮನ್‌ನ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.