
ಬೆಂಗಳೂರು, ಏಪ್ರಿಲ್ 9: ಐಪಿಎಲ್ 2025 ನಲ್ಲಿ ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವುಗಳ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್‌ಸಿಬಿ, ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಹುಟ್ಟುಹಾಕಿದೆ.
ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ದೇವದತ್ ಪಡಿಕ್ಕಲ್, ಮತ್ತು ನಾಯಕ ರಜತ್ ಪಾಟಿದಾರ್ ಸಹಿತ ಆಟಗಾರರು ತಂಡಕ್ಕೆ ಮೌಲ್ಯವರ್ಧನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಆರ್‌ಸಿಬಿ ಟ್ರೆಂಡಿಂಗ್‌ನಲ್ಲಿ ಇದೆ.
ಇದರ ನಡುವೆಯೇ, WWE ದಿಗ್ಗಜ ಜಾನ್ ಸೀನ ಅವರು ವಿರಾಟ್ ಕೊಹ್ಲಿಯ ಫೋಟೋವೊಂದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಕ್ರಿಕೆಟ್ ಮತ್ತು ಕುಸ್ತಿ ಅಭಿಮಾನಿಗಳ ನಡುವೆ ಭಾರೀ ಸದ್ದು ಮಾಡುತ್ತಿದೆ. ಕೊಹ್ಲಿ ಇತ್ತೀಚೆಗೆ ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಟಿ20 ವಿಶ್ವಕಪ್ ರಿಂಗ್ ಹಾಕಿಕೊಂಡು ‘You Can’t See Me’ ಶೈಲಿಯನ್ನು ಅನುಕರಿಸಿದ ಕ್ಷಣವೊಂದು ಆರ್‌ಸಿಬಿಯ ಅಧಿಕೃತ ಪೇಜ್‌ನಲ್ಲಿ ವೈರಲ್ ಆಗಿತ್ತು. ಈ ಕ್ಷಣವೇ ಇದೀಗ ಜಾನ್ ಸೀನ ಅವರಿಂದ ಶೇರ್ ಆಗಿದೆ!
ಆರ್‌ಸಿಬಿ ಅಭಿಮಾನಿಗಳು ಸಂತಸದಿಂದ ಥ್ರಿಲ್ ಆಗಿದ್ದು, ಫೋಟೋಕ್ಕೆ ಲಕ್ಷಾಂತರ ಲೈಕ್ಸ್ ಮತ್ತು ಸಾವಿರಾರು ಕಾಮೆಂಟ್‌ಗಳು, ಶೇರ್‌ಗಳು ಧಾರಾಳವಾಗಿ ಬಂದಿವೆ. ಜಾನ್ ಸೀನ ಮತ್ತು ಕೊಹ್ಲಿಯ ನಡುವಿನ ಕ್ರಾಸ್-ಸ್ಪೋರ್ಟ್ ಗೌರವಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಜಾನ್ ಸೀನ ಅವರು ಏ.20ರಂದು ನೆವಾಡಾದಲ್ಲಿ ನಡೆಯುವ ರೆಸಲ್‌ಮೇನಿಯಾ 41 ನಲ್ಲಿ ಕೋಡಿ ರೋಡ್ಸ್ ವಿರುದ್ಧ ಅನ್‌ಡಿಸ್ಪ್ಯೂಟೆಡ್ ಚಾಂಪಿಯನ್‌ಶಿಪ್ ಗೆ ಸ್ಪರ್ಧಿಸಲಿದ್ದಾರೆ.
ಆರ್‌ಸಿಬಿ ತಂಡ ಮುಂದಿನ ಪಂದ್ಯದಲ್ಲಿ ಏ.10ರಂದು ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಅಭಿಮಾನಿಗಳು ಮತ್ತೊಮ್ಮೆ ವಿಜೃಂಭಣೆಯ ಆಟವನ್ನು ನಿರೀಕ್ಷಿಸುತ್ತಿದ್ದಾರೆ.