
ಬೆಂಗಳೂರು: ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಗ್ಲಾಮರಸ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಬ್ಲ್ಯಾಕ್ ಜಾಕೆಟ್ ಮತ್ತು ಪ್ಯಾಂಟ್ ಧರಿಸಿ, ಸ್ಟೈಲಿಶ್ ಹಿಲ್ಸ್ ಶೂಗಳಲ್ಲಿ ಅವರು ನೀಡಿರುವ ಪೋಸ್‌ಗಳು ಅಭಿಮಾನಿಗಳನ್ನು ಆಕರ್ಷಿಸುತ್ತಿವೆ.
ಸಿನಿಮಾದಿಂದ ದೂರವಿದ್ದರೂ, ರಮ್ಯಾ ಅವರಿಗೆ ಇರುವ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಈ ಹೊಸ ಫೋಟೋಗಳಲ್ಲಿ ಅವರು ಸಖತ್ ಸ್ಲಿಮ್ ಆಗಿ ಮತ್ತು ಫಿಟ್ ಆಗಿ ಕಾಣುತ್ತಿದ್ದಾರೆ. ಅವರು ಇತ್ತೀಚೆಗೆ ಹಂಚಿಕೊಂಡಿರುವ ಎರಡು ಫೋಟೋಗಳು ಮತ್ತು ಒಂದು ವಿಡಿಯೋ, ಅವರ ಮುಂದಿನ ಹೆಜ್ಜೆಗಳ ಬಗ್ಗೆ ಕುತೂಹಲ ಮೂಡಿಸಿದೆ.
ಹೊಸ ಚಿತ್ರಕ್ಕೆ ತಯಾರಿಯೇ? ಅಥವಾ ಈ ಹೊಸ ರೂಪದ ಹಿಂದಿನ ರಹಸ್ಯವೇನು? ಎಂಬ ಪ್ರಶ್ನೆಗಳಿಗೆ ರಮ್ಯಾ ಅವರೇ ಉತ್ತರಿಸಬೇಕಿದೆ. ಆದರೆ, ಸದ್ಯಕ್ಕೆ ಅವರ ಈ ಆಕರ್ಷಕ ಲುಕ್ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.