ಪುತ್ತೂರು ಅತ್ಯಾಚಾರ ಪ್ರಕರಣ: ಸಂತ್ರಸ್ತೆಗೆ ಧೈರ್ಯ ತುಂಬಿದ ಮಹಿಳಾ ಆಯೋಗದ ಅಧ್ಯಕ್ಷೆ, ಆಕೆಯನ್ನು ಗಂಡನ ಮನೆಗೆ ಸೇರಿಸುವ ಸಂಪೂರ್ಣ ಜವಾಬ್ದಾರಿ ತನ್ನದೆಂದ ಪ್ರತಿಭಾ ಕುಳಾಯಿ

Date:

spot_img

ಪುತ್ತೂರು : ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಅವರ ಪುತ್ರನಿಂದ ಗರ್ಭಿಣಿಯಾಗಿ ಮಗುವಿಗೆ ಜನ್ಮವಿತ್ತ ಸಂತ್ರಸ್ತ ಯುವತಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ನ್ಯಾಯ ಒದಗಿಸಲು ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಈ ಮಧ್ಯೆ, ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಹಾಗೂ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರು ಸಂತ್ರಸ್ತ ಯುವತಿಯ ಮನೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಮಹಿಳಾ ಆಯೋಗದ ಅಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ವಿಷಯದ ಗಂಭೀರತೆಯನ್ನು ವಿವರಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಿಭಾ ಕುಳಾಯಿ, ಸಂತ್ರಸ್ತ ಯುವತಿಯನ್ನು ಆಕೆಯ ಗಂಡನ ಮನೆಗೆ ಸೇರಿಸುವ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಳ್ಳುವುದಾಗಿ ಘೋಷಿಸಿದ್ದಾರೆ. “ಇಲ್ಲಿಯವರೆಗೆ ಸಂತ್ರಸ್ತೆಗೆ ಒಬ್ಬಳು ತಾಯಿ ಇದ್ದರು. ಇನ್ನು ಮುಂದೆ ನಾನು ಕೂಡ ಅವಳಿಗೆ ತಾಯಿ. ಸಂತ್ರಸ್ತ ಕುಟುಂಬದ ಎಲ್ಲ ಖರ್ಚು ವೆಚ್ಚಗಳನ್ನು ನಾನು ಭರಿಸುತ್ತೇನೆ” ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದ ಅವರು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ತಮ್ಮ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡಿದ ಪ್ರತಿಭಾ ಕುಳಾಯಿ, “ನಾನು ನಿಮ್ಮೊಂದಿಗಿದ್ದೇನೆ, ಧೈರ್ಯ ಕಳೆದುಕೊಳ್ಳಬೇಡಿ. ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸಿಕೊಂಡು ಜೀವನ ಮಾಡಬೇಡಿ. ಅಂತಹ ದೊಡ್ಡ ತಪ್ಪು ನೀವೇನೂ ಮಾಡಿಲ್ಲ. ಇವತ್ತಿನಿಂದ ಮಾಸ್ಕ್ ತೆಗೆದು ಧೈರ್ಯದಿಂದ ಇರಬೇಕು” ಎಂದು ಹೇಳಿ, ಸಂತ್ರಸ್ತೆಯ ತಾಯಿ ಧರಿಸಿದ್ದ ಮಾಸ್ಕ್ ಅನ್ನು ತೆಗೆಸಿದರು. ಇಂತಹ ಘಟನೆಗಳು ನಡೆದಾಗ ಮಹಿಳೆಯರು ಧೈರ್ಯ ಕಳೆದುಕೊಳ್ಳಬಾರದು, ಬದಲಾಗಿ ಇಂತಹವರ ವಿರುದ್ಧ ಹೋರಾಡಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರೊಂದಿಗೆ ಸಂತ್ರಸ್ತೆಯ ತಾಯಿ ನಮಿತಾ ಅವರು ದೂರವಾಣಿಯಲ್ಲಿ ಮಾತನಾಡಿದ್ದು, ನ್ಯಾಯ ಒದಗಿಸುವಂತೆ ಕೇಳಿಕೊಂಡಿದ್ದಾರೆ. ನಾಗಲಕ್ಷ್ಮಿ ಅವರು ಸಂತ್ರಸ್ತೆಯ ತಾಯಿಗೆ ಧೈರ್ಯ ಹೇಳಿ, ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಟೆಕ್ ಪ್ರಿಯರ ನಿದ್ದೆಗೆಡಿಸಿದ ‘ಲೆನೊವೊ ಟ್ಯಾಬ್ ಪ್ಲಸ್ ಜೆನ್ 2’ ಜಾಗತಿಕ ಬಿಡುಗಡೆ: ಬೆಲೆ ಮತ್ತು ವೈಶಿಷ್ಟ್ಯಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಲೆನೊವೊದ ಬಿಗ್ ಬ್ಯಾಂಗ್ ಎಂಟ್ರಿ! 9 ಜೆಬಿಎಲ್ ಸ್ಪೀಕರ್, 10,200mAh ಬ್ಯಾಟರಿಯ ಅತ್ಯಾಧುನಿಕ 'ಟ್ಯಾಬ್ ಪ್ಲಸ್ ಜೆನ್ 2' ಜಾಗತಿಕ ಮಾರುಕಟ್ಟೆಗೆ ಲಾಂಚ್.

ದಿನ ವಿಶೇಷ – ಮರುಭೂಮೀಕರಣ ಮತ್ತು ಬರಗಾಲ ವಿರೋಧಿ ವಿಶ್ವ ದಿನ

ಭೂಮಿಯ ಫಲವತ್ತತೆ ರಕ್ಷಿಸಲು ಮತ್ತು ಬರಗಾಲದ ಸವಾಲುಗಳನ್ನು ಎದುರಿಸಲು ಜೂನ್ 17 ರಂದು ಆಚರಿಸಲಾಗುವ ಮರುಭೂಮೀಕರಣ ವಿರೋಧಿ ದಿನದ ಮಹತ್ವ ಹಾಗೂ ಉದ್ದೇಶಗಳ ಮಾಹಿತಿ ಇಲ್ಲಿದೆ.

ಬೆಣ್ಣೆ ತಿಂದ್ರೆ ಆರೋಗ್ಯಕ್ಕೆ ಲಾಭವೋ, ನಷ್ಟವೋ? ಅಸಲಿ ವಿಷಯ ಇಲ್ಲಿದೆ ನೋಡಿ

ಮಿತವಾಗಿ ಬೆಣ್ಣೆ ಸೇವಿಸುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಪೋಷಕಾಂಶಗಳ ಮಾಹಿತಿ ಇಲ್ಲಿದೆ.

ಸಿಎಂ ಡಿ.ಕೆ. ಶಿವಕುಮಾರ್ ಆಡಳಿತದ ಟಾಪ್ 5 ನಿರ್ಧಾರಗಳು

ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಪ್ರಮುಖ 5 ಸುಧಾರಣಾ ಕ್ರಮಗಳು ಹಾಗೂ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.