
ರಕ್ಷಾ ರಾಮ್‌ಚಂದ್ರ 597 ಅಂಕಗಳೊಂದಿಗೆ ರಾಜ್ಯಕ್ಕೆ 3 ನೇ ಹಾಗೂ ಜಿಲ್ಲೆಗೆ ಮೊದಲ ಸ್ಥಾನ
ಗಣಿತ ನಗರ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಮರುಮೌಲ್ಯಮಾಪನ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ನಾಯಕ್ ರಕ್ಷಾ ರಾಮಚಂದ್ರ 597 ಅಂಕ ಪಡೆದು ರಾಜ್ಯಕ್ಕೆ 3 ನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿ ಹೊರ ಹೊಮ್ಮಿರುತ್ತಾರೆ. ಇವರು ಮೂಲಗಣಿತ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕವನ್ನು, ಇಂಗ್ಲಿಷ್‌ನಲ್ಲಿ95 ಹಾಗೂ ಹಿಂದಿಯಲ್ಲಿ 99 ಅಂಕ ಪಡೆದಿದ್ದಾರೆ. ಈಕೆ ಬೈಲೂರು ನಿವಾಸಿಯಾದ ರಾಮ್‌ಚಂದ್ರ ನಾಯಕ್ ಮತ್ತು ಅನುಪಮ ನಾಯಕ್ ದಂಪತಿಗಳ ಸುಪುತ್ರಿ.
ವಿಜ್ಞಾನ ವಿಭಾಗದಲ್ಲಿ ಆಸ್ತಿ ಎಸ್ ಶೆಟ್ಟಿ 596 ಅಂಕಗಳೊಂದಿಗೆ ರಾಜ್ಯಕ್ಕೆ ನಾಲ್ಕನೇ ಹಾಗೂ ಜಿಲ್ಲೆಗೆ ಮೊದಲ ಸ್ಥಾನಿಯಾಗಿ ಹೊರಹೊಮ್ಮಿದ್ದರು. ಸಂಸ್ಥೆಯು ಮರುಮೌಲ್ಯಮಾಪನದ ಮೂಲಕ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 37 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮೊದಲ ಹತ್ತು ರ‍್ಯಾಂಕನ್ನು, 70 ವಿದ್ಯಾರ್ಥಿಗಳು ಶೇಕಡಾ 98 ಕ್ಕಿಂತ ಅಧಿಕ ಅಂಕವನ್ನು, 538 ಉತ್ತರ ಪತ್ರಿಕೆಗಳು 100 ಕ್ಕೆ 100 ಅಂಕವನ್ನು, ಪರೀಕ್ಷೆ ಬರೆದ 783 ವಿದ್ಯಾರ್ಥಿಗಳಲ್ಲಿ 727 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ದಾಖಲೆಯ ಫಲಿತಾಂಶ ಪಡೆದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.