
ಹೆಬ್ರಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೆಬ್ರಿಯ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಜನಾರ್ಧನ್ ಎಚ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.ಆಮಂತ್ರಣ ಪತ್ರಿಕೆಯನ್ನು ಹೆಬ್ರಿಯ ಧಾರ್ಮಿಕ ಮುಂದಾಳು ಎಚ್ ಭಾಸ್ಕರ್ ಜೋಯಿಸ್ ಹಾಗೂ ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಾರಾನಾಥ್ ಎಸ್ ಬಂಗೇರ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಗಣೇಶೋತ್ಸವ ಸಮಿತಿ ಉಪಾಧ್ಯಕ್ಷರಾದ ಎಚ್ ಕೆ ಸುಧಾಕರ , ದಿವಾಕರ್ ಶೆಟ್ಟಿ ,ಪ್ರಕಾಶ್ ಮಲ್ಯ, ಪ್ರಧಾನ ಕಾರ್ಯದರ್ಶಿಯಾದ ರಾಜೇಶ್ ಆಚಾರ್ಯ, ಮಹಿಳಾ ಸಮಿತಿ ಸಂಚಾಲಕಿ ಬಾನು ಪಿ ಬಲ್ಲಾಳ್, ಜೊತೆ ಕಾರ್ಯದರ್ಶಿಯಾದ ಶಂಕರ್ ಸೇರಿಗಾರ್ , ಹೆಬ್ರಿ ವಿ ಎಸ್ ಎಸ್ ಸಂಘ( ನಿ) ಇದರ ಅಧ್ಯಕ್ಷರಾದ ನವೀನ್ ಕೆ ಅಡ್ಯಂತಾಯ , ಉಪಾಧ್ಯಕ್ಷರಾದ ಹರೀಶ್ ಬಿ ಪೂಜಾರಿ , ಉಪ ಸಮಿತಿಗಳ ಸಂಚಾಲಕರುಗಳಾದ ಪ್ರಕಾಶ್ ಶೆಟ್ಟಿ ಕಲ್ಲಿಲ್ಲು , ನಾಗರಾಜ್ ಜೋಯಿಸ್ , ದಯಾನಂದ್ ಶೆಟ್ಟಿ , ವಸಂತ ಶೆಟ್ಟಿ ನಡುಬೀಡು , ಪ್ರಸಾದ್ ಶೆಟ್ಟಿ , ಸಂತೋಷ್ ನಾಯಕ್ , ಸಮಿತಿಯ ಸದಸ್ಯರಾದ ಭಾರ್ಗವಿ ಐತಾಳ್, ಕೆ ಕೃಷ್ಣ ಶೆಟ್ಟಿ , ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕರಾದ ಉದಯ್ , ಸೇವಾ ಪ್ರತಿನಿಧಿಗಳು , ಅರುಣ್ ಶೆಟ್ಟಿ ಕನ್ಯಾನ , ರವಿಚಂದ್ರ ಹೆಗ್ಡೆ ಮಾಡಿಗೆ , ಶಂಕರ್ ಚಾರ ಮುಂತಾದವರು ಉಪಸ್ಥಿತರಿದ್ದರು .

ಸಂಚಾಲಕ ಟಿ ಜಿ ಆಚಾರ್ಯ ನಿರೂಪಿಸಿದರು ಹಾಗೂ ಪ್ರಸಾದ್ ಶೆಟ್ಟಿ ವಂದಿಸಿದರು.