spot_img

ನೆಲ್ಯಾಡಿಯಲ್ಲಿ ಖಾಸಗಿ ಬಸ್ ಹಿಟಾಚಿಗೆ ಡಿಕ್ಕಿ – ಓರ್ವ ಮೃತ್ಯು, ಹಲವರಿಗೆ ಗಾಯ

Date:

spot_img

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಲಾವತ್ತಡ್ಕ ಬಳಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದರೆ, ಇತರ ಕೆಲವರು ಗಾಯಗೊಂಡ ಘಟನೆ ನಡೆದಿದೆ.

ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಸ್ಲೀಪರ್ ಬಸ್ಸು ಲಾವತ್ತಡ್ಕದ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಹಿಟಾಚಿ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಕಳ ಹೆರ್ಮುಂಡೆ ನಿವಾಸಿ ಶಂಕರ ನಾರಾಯಣ ಭಟ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಇವರು ವೃತ್ತಿಯಲ್ಲಿ ಪೌರೋಹಿತ್ಯರಾಗಿದ್ದು ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಪ್ರಯಾಣಿಸುವಾಗ ಈ ದುರಂತ ನಡೆದಿದೆ. ಮೃತರು ತಂದೆ ತಾಯಿ ಹಾಗೂ ಸಹೋದರರನ್ನು ಅಗಲಿದ್ದಾರೆ.

ಘಟನೆಯಿಂದ ಹಲವಾರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ಮಾಹಿತಿ ಪಡೆದ ನೆಲ್ಯಾಡಿ ಹೊರಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಡ್ರ‍್ಯಾಗನ್ ಫ್ರೂಟ್: ಆರೋಗ್ಯ ಪ್ರಯೋಜನಗಳು ಮತ್ತು ಅದನ್ನು ಬಳಸುವ ವಿಧಾನ

ಪಿಟಾಯ ಅಥವಾ ಪಿಟಾಹಯಾ ಎಂದೂ ಕರೆಯಲ್ಪಡುವ ಡ್ರ‍್ಯಾಗನ್ ಫ್ರೂಟ್, ಅದರ ಆಕರ್ಷಕ ನೋಟ, ಸೌಮ್ಯವಾದ ಸಿಹಿ ರುಚಿ ಮತ್ತು ಸಮೃದ್ಧ ಪೌಷ್ಟಿಕಾಂಶಗಳಿಂದ ವಿಶ್ವದಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ.

ಸಂಗೀತ ಕಲಾವಿದೆ ಮಹಿಮಾ ಬಜಗೋಳಿ ಅವರು “ಚಂದನ ಸಂಗೀತ ರತ್ನ ಪ್ರಶಸ್ತಿ” ಗೆ ಆಯ್ಕೆ

ವಿಶಿಷ್ಟ ಕಂಠದ ಸಂಗೀತಗಾರ್ತಿ, ಗಾಯಕಿ ಹಾಗೂ ನಿರೂಪಕಿಯಾದ ಮಹಿಮಾ ಬಜಗೋಳಿ ಅವರು ಹಲವಾರು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ "ಚಂದನ ಸಂಗೀತ ರತ್ನ ಪ್ರಶಸ್ತಿ" ಗೆ ಆಯ್ಕೆಯಾಗಿದ್ದಾರೆ.

ಛತ್ತೀಸ್ಗಡದಲ್ಲಿ ಬಂಧಿಸಿರುವ ಸಿಸ್ಟರ್ ಗಳ ಬಿಡುಗಡೆಗೆ ಒತ್ತಾಯ, ಕ್ರೈಸ್ತ ಸಂಘಟನೆಯ ಸಮಯ ಸಾಧಕ ನಡೆ ಖಂಡನೀಯ : ರುಡಾಲ್ಪ್ ಡಿ’ಸೋಜ

ಇತ್ತೀಚಿಗೆ ಛತ್ತೀಸ್ಗಡದಲ್ಲಿ ನಡೆದ ಎರಡು ಸಿಸ್ಟರ್ ಗಳ ಬಂಧನಕ್ಕೆ ಸಂಬಂಧಿಸಿದಂತೆ ಸರಕಾರ ಕೂಡಲೇ ತನಿಖೆಯನ್ನು ತೀವ್ರಗೊಳಿಸಿ ಬಂಧಿತರಾಗಿರುವ ಸಿಸ್ಟರ್ ಗಳನ್ನು ಶೀಘ್ರ ಬಿಡುಗಡೆಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿ'ಸೋಜ ಒತ್ತಾಯಿಸಿದ್ದಾರೆ.

ಧರ್ಮಸ್ಥಳ ಪ್ರಕರಣದ ವರದಿ ಪ್ರಸಾರಕ್ಕೆ ಹೈಕೋರ್ಟ್‌ ಗ್ರೀನ್ ಸಿಗ್ನಲ್: ಮಾಧ್ಯಮಗಳ ಮೇಲಿನ ನಿರ್ಬಂಧ ರದ್ದು!

ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತು ಹಾಕಿರುವ ಕುರಿತು ಅನಾಮಧೇಯ ಸಾಕ್ಷಿದಾರರು ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮೇಲೆ ವಿಧಿಸಲಾಗಿದ್ದ ಸುದ್ದಿ ಪ್ರಸಾರ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿ ಮಹತ್ವದ ತೀರ್ಪು ನೀಡಿದೆ.