spot_img

ಪ್ರೀತಮ್ ನಾಯಕ್ ಅವರಿಗೆ ‘ಕನ್ನಡ ಸಿರಿ’ ಪ್ರಶಸ್ತಿ

Date:

spot_img

ಮುಂಬೈ : ಕನ್ನಡ ಮತ್ತು ತುಳು ನಾಟಕ ರಂಗದಲ್ಲಿ ಅಭಿನಯಿಸಿ, ಬಳಿಕ ತುಳು, ಕನ್ನಡ ಚಲನ ಚಿತ್ರಗಳ ಅಭಿನಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಉಡುಪಿ ಸಮೀಪದ ನಿಂಜೂರಿನ ಪ್ರೀತಮ್ ನಾಯಕ್ ಅವರಿಗೆ ಮುಂಬೈಯ ಕಲಾ ಜಗತ್ತು ಸಂಸ್ಥೆಯ ವತಿಯಿಂದ ಬಂಟರ ಭವನದ ಶ್ರೀಮತಿ ರಾಧಾ ಬಾಯಿ ಟಿ. ಭಂಡಾರಿ ಆಡಿಟೋರಿಯಂನಲ್ಲಿ ಕಲಾ ಜಗತ್ತು ಮುಂಬೈ ಇದರ ಅಧ್ಯಕ್ಷ ತೋನ್ಸೆ ವಿಜಯಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ‘ಕನ್ನಡ ಸಿರಿ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಲಾ ಜಗತ್ತು ಮುಂಬೈ ಕಾರ್ಯಾಧ್ಯಕ್ಷ ಡಾ! ಸುರೇಂದ್ರ ಕುಮಾರ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಕೋಶಾಧಿಕಾರಿ ಉತ್ತಮ ಶೆಟ್ಟಿಗಾರ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಪ್ರೀತಮ್ ನಾಯಕ್ ಅವರು ‘ಅಮೋಘ ಹಿರಿಯಡ್ಕ’ ಇದರ ಸಕ್ರಿಯ ಸದಸ್ಯರಾಗಿದ್ದು ಸಂಸ್ಥೆಯ ನೇತೃತ್ವದಲ್ಲಿ ನಡೆದ ಹಲವಾರು ನಾಟಕಗಳಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ಇವುಗಳಲ್ಲಿ ಉಡುಪಿ, ಕುಂದಾಪುರ, ಮಂಡ್ಯ, ಮತ್ತು ‘ಮೈಸೂರು ದಸರಾ’ ಮುಂತಾದ ಕಡೆಗಳಲ್ಲಿ ಸತತ 14 ಪ್ರದರ್ಶನಗಳನ್ನು ಕಂಡಿರುವ ‘ರೈಲು ಭೂತ’ ನಾಟಕದಲ್ಲಿ ನಟಿಸಿ ಜನಮನ್ನಣೆ ಗಳಿಸಿರುತ್ತಾರೆ. ಸಂಗೀತ ಕ್ಷೇತ್ರದಲ್ಲೂ ಪ್ರೌಡಿಮೆಯನ್ನು ಹೊಂದಿರುವ ಅವರು ನಿಸ್ವಾರ್ಥ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ 28 ರಂದು ಶಾಲಾ-ಕಾಲೇಜುಗಳಿಗೆ ರಜೆ

ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಮಳೆಯ ತೀವ್ರತೆ ಮತ್ತಷ್ಟು ಹೆಚ್ಚುವ ಸೂಚನೆ ದೊರೆತಿದೆ

ಜಾಯಿಕಾಯಿಯ 7 ಅದ್ಭುತ ಉಪಯೋಗಗಳು

ನಮ್ಮ ಪೂರ್ವಜರಿಗೆ ಜಾಯಿಕಾಯಿಯಲ್ಲಿರುವ ಔಷಧೀಯ ಗುಣಗಳ ಬಗ್ಗೆ ಚೆನ್ನಾಗಿ ತಿಳಿದಿತ್ತು. ಅಡುಗೆಯ ರುಚಿ ಹೆಚ್ಚಿಸುವ ಈ ಚಿಕ್ಕ ಮಸಾಲ ಪದಾರ್ಥವು ಆರೋಗ್ಯದ ಹಲವು ಸಮಸ್ಯೆಗಳಿಗೆ ರಾಮಬಾಣವಾಗಿದೆ.

ಪತಿ ಮತ್ತು ಪ್ರಿಯಕರನ ನಡುವೆ ಹಂಚಿಹೋದ ಹೆಂಡತಿ: ಪಂಚಾಯಿತಿಯಲ್ಲಿ ವಿಚಿತ್ರ ತೀರ್ಮಾನ.

ಪತಿ ಮತ್ತು ಪ್ರಿಯಕರನೊಂದಿಗೆ ಸಮಯವನ್ನು ಸಮಾನವಾಗಿ ಹಂಚಿಕೊಳ್ಳಲು ನಿರ್ಧರಿಸಿ, ಅದನ್ನೇ ಗ್ರಾಮ ಪಂಚಾಯಿತಿಯ ಮುಂದೆ ಘೋಷಣೆ ಮಾಡಿದ್ದಾಳೆ.

ಕೊಚ್ಚಿಯಲ್ಲಿ ಐಟಿ ಉದ್ಯೋಗಿ ಅಪಹರಣ: ನಟಿ ಲಕ್ಷ್ಮಿ ಮೆನನ್ ಸೇರಿ ಇತರರ ವಿರುದ್ಧ ಎಫ್‌ಐಆರ್

ಅಪಹರಣ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ನಟಿ ಲಕ್ಷ್ಮಿ ಮೆನನ್ ಸೇರಿದಂತೆ ಇತರರ ವಿರುದ್ಧ ಕೊಚ್ಚಿ ಪೊಲೀಸರು ದೂರು ದಾಖಲಿಸಿದ್ದಾರೆ.