
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಅಧಿಕೃತ ಭೇಟಿಗಾಗಿ ಮಾರಿಷಸ್‌ಗೆ ಆಗಮಿಸಿದ್ದಾರೆ. ಪೋರ್ಟ್ ಲೂಯಿಸ್ ವಿಮಾನ ನಿಲ್ದಾಣದಲ್ಲಿ ಮಾರಿಷಸ್ ಪ್ರಧಾನಿ ನವೀನ್ ರಾಮಗೂಲಂ ಅವರ ಜೊತೆಗೆ ಅವರ ಪತ್ನಿ ಸೇರಿದಂತೆ ಉನ್ನತ ಅಧಿಕಾರಿಗಳು ಮತ್ತು 200ಕ್ಕೂ ಹೆಚ್ಚು ಜನರು ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ದ್ವೀಪ ರಾಷ್ಟ್ರದ ರಾಷ್ಟ್ರೀಯ ದಿನಾಚರಣೆ
ಇಂದು ನಡೆಯುವ ಮಾರಿಷಸ್‌ನ ರಾಷ್ಟ್ರೀಯ ದಿನಾಚರಣೆಯಲ್ಲಿ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ವೇಳೆ ಉಭಯ ದೇಶಗಳ ನಡುವೆ ಆರ್ಥಿಕ ಸಂಬಂಧ ಬಲಪಡಿಸಲು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಾಗುವುದು ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೇನಾ ಪಡೆಗಳ ವಿಶೇಷ ಪ್ರದರ್ಶನ
ಪ್ರಧಾನಿ ಮೋದಿ ಅವರ ಈ ಭೇಟಿಯ ವೇಳೆ, ಭಾರತೀಯ ನೌಕಾಪಡೆಯ ಯುದ್ಧನೌಕೆ, ಭಾರತೀಯ ವಾಯುಪಡೆಯ ‘ಆಕಾಶ ಗಂಗಾ’ ಡೈವಿಂಗ್ ತಂಡ ಮತ್ತು ಸಶಸ್ತ್ರ ಪಡೆಗಳ ತುಕಡಿ ಮಾರಿಷಸ್‌ನಲ್ಲಿ ನಡೆಯುವ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿವೆ.
ನಾಯಕರು ಮತ್ತು ಭಾರತೀಯ ಸಮುದಾಯದ ಜೊತೆ ಸಂವಾದ
ಮಾರಿಷಸ್‌ನ ರಾಷ್ಟ್ರಪತಿ, ಗಣ್ಯರು ಹಾಗೂ ರಾಜಕೀಯ ಮುಖಂಡರನ್ನು ಮೋದಿ ಭೇಟಿ ಮಾಡಲಿದ್ದಾರೆ. ಈ ಭೇಟಿಯ ಬಳಿಕ ಭಾರತೀಯ ಸಮುದಾಯದೊಂದಿಗೆ ಮೋದಿ ಸಂವಾದ ನಡೆಸುವ ಸಾಧ್ಯತೆಯಿದೆ.