
ಕಾರ್ಕಳ : ನಗರದ ಎಸ್. ವಿ. ಟಿ. ಶಾಲಾ ರಸ್ತೆಯ “ಶಿವ ಧ್ಯಾನ ಮಂದಿರ”ದಲ್ಲಿ ರಕ್ಷಾ ಬಂಧನ ಕಾರ್ಯಕ್ರಮದ ಬಗ್ಗೆ ಪತ್ರಿಕಾ ಗೋಷ್ಠಿ ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಜಾಪಿತಾ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ವಲಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ನಿರ್ಮಲಾಜಿ ವಹಿಸಿದ್ದರು. ಅವರು ತಮ್ಮ ಆಶೀರ್ವಚನದಲ್ಲಿ ಇಂದು ಪ್ರಪಂಚದ ಜನರು ಪಂಚ ವಿಕಾರದ ಬಂಧನದಲ್ಲಿ ಸಿಲುಕಿದ್ದಾರೆ. ಇದರಿಂದ ಮುಕ್ತರಾಗಲು ಪರಮಾತ್ಮನ ಸ್ನೇಹದ ಸಂಬಂಧದಲ್ಲಿ ಇರಬೇಕು. ಅದಕ್ಕಾಗಿ ಧ್ಯಾನದ ಅವಶ್ಯಕತೆ ಇದೆ. ತಮ್ಮನ್ನು ತಾವು ಅರಿತು ಪ್ರತಿಯೊಬ್ಬರ ಬಗ್ಗೆ ಶುಭ ಭಾವನೆಯನ್ನು ಇಟ್ಟು ಕೊಳ್ಳಬೇಕೆಂದು ರಕ್ಷಾ ಬಂಧನದ ಸಂದೇಶವನ್ನು ನೀಡಿದರು.
ಸಮಾರಂಭದಲ್ಲಿ ಕಾರ್ಕಳ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮ ಕುಮಾರಿ ವಿಜಯಲಕ್ಷ್ಮಿ ಹಾಗೂ ಮಂಗಳೂರಿನ ಬಿ. ಕೆ. ಸ್ನೇಹ ಅಕ್ಕ ಉಪಸ್ಥಿತರಿದ್ದರು.