ಮುದ್ರಾಡಿಯಲ್ಲಿ ಬಲ್ಲಾಡಿ ದೇವಸ್ಥಾನದ ಜೀರ್ಣೋದ್ದಾರ ಪ್ರಯುಕ್ತ ಪೂರ್ವಭಾವಿ ಸಭೆ

Date:

spot_img

ಹೆಬ್ರಿ : ಮುದ್ರಾಡಿ ಗ್ರಾಮದ ಅತೀ ಪುರಾತನ ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಅಬ್ಬಗ ದಾರಗ ದೇವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ದಾರ ಕುರಿತು ಪೂರ್ವಭಾವಿ ಸಭೆಯು ಮುದ್ರಾಡಿ ಸಮುದಾಯ ಭವನದಲ್ಲಿ ಜೂ. 22 ರಂದು ನಡೆಯಿತು.

ದೇವಸ್ಥಾನ ಮತ್ತು ಗರಡಿಯನ್ನು ನೂತನವಾಗಿ ನಿರ್ಮಿಸುವ ಉದ್ದೇಶದಿಂದ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ದಾರ ಸಮಿತಿಗಳ ಪದಾಧಿಕಾರಿಗಳು ಜೀರ್ಣೋದ್ದಾರ ಕಾರ್ಯಗಳನ್ನು ಮಾಡುವ ಬಗ್ಗೆ ಗ್ರಾಮಸ್ಥ ರೊಂದಿಗೆ ಸಮಾಲೋಚನೆ ನಡೆಸಿದರು.

ಹಿರಿಯ ಗ್ರಾಮ ಪಂಚಾಯತ್ ಸದಸ್ಯರಾದ ಗಣಪತಿ ಎಂ. ಮಾತನಾಡಿ ಗ್ರಾಮಸ್ಥರೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಎಲ್ಲರೂ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳಬೇಕು. ಪ್ರಥಮವಾಗಿ ಬಾಕಿ ಉಳಿದ ಪ್ರಾಯಶ್ಚಿತ ಕಾರ್ಯವನ್ನು ಮೊದಲು ಮಾಡಿಕೊಂಡು, ವಾಸ್ತುತಜ್ಞರ ಮಾರ್ಗದರ್ಶನದಲ್ಲಿ ಮತ್ತು ತಂತ್ರಿಗಳ ನೇತೃತ್ವದಲ್ಲಿ, ಅರ್ಚಕರ ಪೂಜಾ ವಿಧಾನ ದೊಂದಿಗೆ ನಡೆಸಲಾಗುವುದು. ಆರ್ಥಿಕ ಕ್ರೋಡೀಕರಣ, ಶ್ರಮದಾನ, ಆಮಂತ್ರಣ ಪತ್ರಿಕೆ ಹಂಚಿಕೆ,ಇನ್ನಿತರ ವ್ಯವಸ್ಥೆ ಮಾಡುವ ಬಗ್ಗೆ ಗ್ರಾಮದ ವಾರ್ಡ್ ಅನುಸಾರ ತಂಡ ಮಾಡಿಕೊಂಡು ಒಬ್ಬ ನಿಷ್ಠಾವಂತ ನಾಯಕರ ಮುಂದಾಳತ್ವದಲ್ಲಿ ನಡೆಸುವುದು. ಹಾಗೂ ದಾನಿಗಳಿಂದ ದೇಣಿಗೆ ಸಂಗ್ರಹಿಸುವ ಕಾರ್ಯವಾಗ ಬೇಕು.ನಮ್ಮ ಊರಿನ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಿ ಕೊನೆಯವರೆಗೂ ಭಾಗಿಗಳೋಣ ಎಂದರು.

ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ದಿವ್ಯ ಸಾಗರ ದಿವಾಕರ ಶೆಟ್ಟಿಯವರು ವಹಿಸಿ ಮಾತನಾಡಿ ಜುಲೈ 31 ಮತ್ತು ಆಗೋಷ್ಟು 1ರಿಂದ 3 ತಾರೀಕಿನವರೆಗೆ ಪ್ರಾಯಶ್ಚಿತ, ಮುಷ್ಟಿ ಕಾಣಿಕೆ ಕಾರ್ಯಕ್ರಮವಿದೆ. ಅದರಲ್ಲಿ ಎಲ್ಲರೂ ಭಾಗವಹಿಸಿ, ಮುಂದೆ ನಡೆಯುವ ಜೀರ್ಣೋದ್ದಾರ ಕಾರ್ಯದಲ್ಲೂ ತೊಡಗಿಸಿಕೊಂಡು ನಮ್ಮ ಊರಿನ ದೇವರ ಸೇವೆ ಮಾಡುವುದರ ಮೂಲಕ ತನು ಮನ ಧನ ನೀಡಿ ದೇವರ ಕೃಪೆಗೆ ಪಾತ್ರರಾಗೋಣ ಎಂದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶುಭಧರ ಶೆಟ್ಟಿ, ಮುದ್ರಾಡಿ ಬೆಳಗುಂಡಿ ಶ್ರೀ ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಗರಡಿ ಮುಕ್ಕಾಲು ಶೆಟ್ರು ಜಯಕರ ಶೆಟ್ಟಿ ಬಲ್ಲಾಡಿ, ಗರಡಿ ಅರ್ಚಕರಾದ ಸಂತೋಷ ಆರ್. ಪೂಜಾರಿ ಬಲ್ಲಾಡಿ, ದೇವಸ್ಥಾನ ಅರ್ಚಕರಾದ ಶ್ರೀಶ ಭಟ್ ರವರು ಸಲಹೆ ಸೂಚನೆ ನೀಡಿ ಮಾತನಾಡಿದರು.

ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಪೂಜಾರಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಗುರು ಪ್ರಸಾದ್ ಕೊಳಂಬೆ ಉಪಸ್ಥಿತರಿದ್ದರು. ಶ್ರೀಧರ್ ಹೆಬ್ಬಾರ್ ಕಾಪೋಳಿ ಸ್ವಾಗತಿಸಿ ವಂದಿಸಿದರು. ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿದರು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಚೆನ್ನಮ್ಮ ದೇವೇಗೌಡ ನಿಧನ: ಡಾ ಮಂಜುನಾಥ್ ಭಾವುಕ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ನಿಧನರಾಗಿದ್ದು, ಅಳಿಯ ಡಾ. ಸಿ.ಎನ್. ಮಂಜುನಾಥ್ ಭಾವುಕರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕ್ರಿಯೇಟಿವ್ ಪುಸ್ತಕಧಾರೆ 2026: ಕಾರ್ಕಳದಲ್ಲಿ 25 ಕೃತಿಗಳ ಬಿಡುಗಡೆ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಪುಸ್ತಕಧಾರೆ 2026 ಕಾರ್ಯಕ್ರಮ ಸಡಗರದಿಂದ ಜರುಗಿದ್ದು, ಒಟ್ಟು 25 ಕೃತಿಗಳು ಲೋಕಾರ್ಪಣೆಗೊಂಡಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸುರತ್ಕಲ್‌ನಲ್ಲಿ ಅಣ್ಣನಿಂದ ತಮ್ಮನ ಹತ್ಯೆ; ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಸುರತ್ಕಲ್‌ನ ಚೊಕ್ಕಬೆಟ್ಟಿನಲ್ಲಿ ಸ್ವಂತ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳದ ಶಿವಪ್ರಸಾದ್ ರಾವ್ ಶ್ರದ್ಧಾಂಜಲಿ ಸಭೆ

ಕಾರ್ಕಳದಲ್ಲಿ ದಕ್ಷ ಕಂದಾಯ ನಿರೀಕ್ಷಕ ಶಿವಪ್ರಸಾದ್ ವಿ. ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.