
|| ಶ್ರೀ ವಿಷ್ಣುಮೂರ್ತಿಯೇ ನಮಃ ||
ಹಿರಿಯಡ್ಕ : ಹಿರಿಯಡ್ಕ ಪ್ರದೇಶದ ಪುತ್ತಿಗೆಯಲ್ಲಿರುವ ಶ್ರೀ ಪುತ್ತಿಗೆ ಶ್ರೀ ವಿಷ್ಣುಮೂರ್ತಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಬೇಕೆಂದು ಆಡಳಿತ ನಡೆಸುತ್ತಿರುವ ಶ್ರೀಪುತ್ತಿಗೆ ಮಠವು ನಿರ್ಧರಿಸಿದೆ. ಆ ಪ್ರಯುಕ್ತ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥರು ಮತ್ತು ಕಿರಿಯ ಶ್ರೀಪಾದರ ಆದೇಶದ ಮೇರೆಗೆ ಶ್ರೀ ಪುತ್ತಿಗೆ ಮಠ, ಹಿರಿಯಡ್ಕದಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಪೂರ್ವಭಾವೀ ಸಭೆಯನ್ನು ನಡೆಸಲಾಯಿತು.
ಮಠದ ಆಡಳಿತಾಧಿಕಾರಿಯಾಗಿರುವ ಶ್ರೀ ನಾಗರಾಜಾಚಾರ್ಯರವರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಪ್ರತ್ಯೇಕ ವಾರ್ಡ್ ಗೆ ಪ್ರತ್ಯೇಕ ಪ್ರತ್ಯೇಕವಾಗಿ ವ್ಯಕ್ತಿಗಳನ್ನು ಗುರುತಿಸಿ ಅವರ ಮುಖೇನ ಮುಂಬರುವ ಕಾರ್ಯವನ್ನು ಕೈಗೊಳ್ಳುವ ನಿರ್ಧಾರವನ್ನು ಮಾಡಲಾಯಿತು. ಜುಲೈ 25, 26, 27 ರಂದು ನಡೆಯಲಿರುವ ಅಷ್ಟಮಂಗಲ ಪ್ರಶ್ನೆಗೆ ಎಲ್ಲಾ ಗ್ರಾಮಸ್ಥರನ್ನು ಒಟ್ಟು ಸೇರುವಂತೆ ಮನವಿ ಮಾಡಲಾಯಿತು. ಹಾಗೂ ಗ್ರಾಮಸ್ಥರಿಂದ ಸಲಹೆ ಸೂಚನೆಗಳನ್ನು ಕೋರಲಾಯಿತು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಹರ್ಷವರ್ಧನ ಹೆಗ್ಡೆ, ಸತ್ಯೇಂದ್ರ ಪೈ , ಪಳ್ಳಿ ನಟರಾಜ ಹೆಗ್ಗಡೆ, ಪ್ರಭಾಕರ ಭಟ್, ವಾಸುದೇವ ಭಟ್ ನೆಕ್ಕರ ಪಲ್ಕೆ , ಅರ್ಚಕರಾದ ಶ್ರೀ ವಿಷ್ಣು ಮೂರ್ತಿ ಭಟ್ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.