spot_img

ಶಾಂತಿಯುತ ಬಕ್ರೀದ್‌ಗೆ ಮುನ್ನೆಚ್ಚರಿಕೆ ಕ್ರಮ: ಅನಧಿಕೃತ ಜಾನುವಾರು ವಧೆ ಹಾಗೂ ಸಾಗಾಣಿಕೆಗೆ ಕಡಿವಾಣ – ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ

Date:

spot_img

ಉಡುಪಿ: ಬರುವ ಬಕ್ರೀದ್ ಹಬ್ಬದ ಆಚರಣೆಯ ವೇಳೆ ಜಾನುವಾರುಗಳ ಅನಧಿಕೃತ ವಧೆ ಹಾಗೂ ಸಾಗಾಣಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರು, ತಾಲೂಕು ಹಾಗೂ ಜಿಲ್ಲಾ ಮಟ್ಟದ ಸಮಿತಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಅನುಮತಿ ಕಡ್ಡಾಯ:
ಅಧಿಕೃತವಾಗಿ ಜಾನುವಾರು ಸಾಗಣೆ ಮಾಡುವವರಿಗೆ ಪಶುಸಂಗೋಪನಾ ಇಲಾಖೆಯ ಅನುಮತಿ ಮತ್ತು ಪೊಲೀಸ್ ಠಾಣೆಗಳ ಅನುಮತಿ ಕಡ್ಡಾಯವಾಗಿರುತ್ತದೆ. ತಪಾಸಣಾ ತಂಡಗಳು ರಚನೆಯಾಗಿದ್ದು, ಇವು ಎಲ್ಲಾ ಪ್ರದೇಶಗಳಲ್ಲಿ ನಿಯಮ ಉಲ್ಲಂಘನೆ ತಡೆಗಟ್ಟಲು ಕಾರ್ಯನಿರ್ವಹಿಸಲಿದೆ.

ಜಾನುವಾರುಗಳ ರಕ್ಷಣೆ ಮತ್ತು ಆರೈಕೆ:
ಅಕ್ರಮ ಸಾಗಣೆ ವೇಳೆ ವಶಪಡಿಸುವ ಜಾನುವಾರುಗಳನ್ನು ಸ್ಥಳೀಯ ಗೋಶಾಲೆಗಳಿಗೆ ಸ್ಥಳಾಂತರಿಸಿ, ಅವರಿಗೆ ಅಗತ್ಯ ಚಿಕಿತ್ಸೆ, ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಪಶುಸಂಗೋಪನಾ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಶಾಂತಿಯುತ ಹಬ್ಬಕ್ಕೆ ಕ್ರಮ:
ತಾಲೂಕು ಮಟ್ಟದ ತಹಶೀಲ್ದಾರರು ಶಾಂತಿ ಸಭೆ ನಡೆಸಬೇಕು. ನಗರ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಇಲಾಖೆ 24×7 ತಪಾಸಣಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲಿದ್ದು, ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದವರು:
ಈ ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ. ರೆಡ್ಡಪ್ಪ, ನಗರಸಭೆ ಆಯುಕ್ತ ಮಹೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

165.9 ಕೋಟಿ ನಿಮಿಷ ವೀಕ್ಷಣೆ ಕಂಡ ಸ್ಮೃತಿ ಇರಾನಿ ಧಾರಾವಾಹಿಯ ಹೊಸ ದಾಖಲೆ

ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅಭಿನಯದ ಧಾರಾವಾಹಿ 'ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ' ಯ ಎರಡನೇ ಆವೃತ್ತಿಯು ಪ್ರಸಾರವಾದ ಮೊದಲ ವಾರದಲ್ಲೇ ಭಾರಿ ಯಶಸ್ಸು ಗಳಿಸಿದೆ.

ಅಮೆರಿಕದ ಆರ್ಥಿಕ ಧಮ್ಕಿಗೆ ಕ್ಯಾರೆ ಎನ್ನದ ಭಾರತ , ರಷ್ಯಾದೊಂದಿಗೆ ಹೊಸ ಒಪ್ಪಂದಕ್ಕೆ ಸಹಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ಬೆದರಿಕೆ ಹಾಕಿದ ನಡುವೆಯೇ, ಭಾರತ ಮತ್ತು ರಷ್ಯಾ ದೇಶಗಳು ತಮ್ಮ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

ಧರ್ಮಸ್ಥಳ ಹೋರಾಟಗಾರರಿಗೂ ಎಸ್‌ಡಿಪಿಐಗೂ ಏನು ಸಂಬಂಧ? ಏನಿದರ ಮರ್ಮ? : ವಿ.ಸುನಿಲ್ ಕುಮಾರ್ ಪ್ರಶ್ನೆ

ಧರ್ಮಸ್ಥಳ ಹೋರಾಟಗಾರರಿಗೂ ಎಸ್‌ಡಿಪಿಐಗೂ ಏನು ಸಂಬಂಧ? ಏನಿದರ ಮರ್ಮ? ಎಂದು ವಿ.ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

ಪರ್ಕಳ “ಯೂತ್ ಬೆಸ್ಟ್ ಫ್ರೆಂಡ್ಸ್” ಇದರ ಅಧ್ಯಕ್ಷರಾಗಿ ಚೇತನ್ ಕುಲಾಲ್, ಕಾರ್ಯದರ್ಶಿಯಾಗಿ ಪ್ರಕೃತ್ ಹೆಗ್ಡೆ ಅವಿರೋಧ ಆಯ್ಕೆ

"ಯೂತ್ ಬೆಸ್ಟ್ ಫ್ರೆಂಡ್ಸ್, ಪರ್ಕಳ" ಸಂಘದ ನೂತನ ಸಾಲಿನ ಅಧ್ಯಕ್ಷರಾಗಿ ಶ್ರೀ ಚೇತನ್ ಕುಲಾಲ್ ಬಡಗಬೆಟ್ಟು ಹಾಗೂ ಕಾರ್ಯದರ್ಶಿಯಾಗಿ ಶ್ರೀ ಪ್ರಕೃತ್ ಹೆಗ್ಡೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.