spot_img

ಉಡುಪಿ ಶ್ರೀಕೃಷ್ಣ ಮಠದ ಮುಂಭಾಗದಲ್ಲಿ ಪ್ರಿ ವೆಡ್ಡಿಂಗ್ ಚಿತ್ರೀಕರಣ ನಿಷೇಧ!

Date:

spot_img

ಉಡುಪಿ: ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಹಾಗೂ ದೇವಸ್ಥಾನದ ಮುಂಭಾಗದಲ್ಲಿ ಪ್ರಿ ವೆಡ್ಡಿಂಗ್ ಫೋಟೋ ಹಾಗೂ ವಿಡಿಯೋ ಚಿತ್ರೀಕರಣವನ್ನು ನಿಷೇಧಿಸಲಾಗಿದೆ. ಪರ್ಯಾಯ ಪುತ್ತಿಗೆ ಮಠದಿಂದ ಈ ನಿಷೇಧದ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

“ದೇವಾಲಯಗಳ ರಥಬೀದಿಗಳು ಪವಿತ್ರತೆ ಮತ್ತು ಶ್ರದ್ಧೆಯ ಪ್ರತೀಕವಾಗಿವೆ. ಅಲ್ಲಿ ಉತ್ಸವ, ಭಜನೆ, ಪೀಠಾಧಿಪತಿಗಳ ಸಂಚರಣೆ ನಡೆಯುತ್ತದೆ. ಆ ಜಾಗದಲ್ಲಿ ಪ್ರೀತಿಯ ದೃಶ್ಯಗಳು ಅಥವಾ ಅಶಿಸ್ತು ವಿಡಿಯೋಗಳನ್ನು ಶೂಟ್ ಮಾಡುವುದರಿಂದ ಪವಿತ್ರತೆಯ ಅವಮಾನವಾಗುತ್ತಿದೆ” ಎಂದು ಮಠದ ವಿದ್ವಾನ್ ಗೋಪಾಲ ಆಚಾರ್ಯರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ, ಪರ್ಯಾಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥರು ಈ ಕೃತ್ಯವನ್ನು ಖಂಡಿಸಿ, ಮಠದ ಎಲ್ಲಾ ಭಕ್ತ ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದು, ಇನ್ನುಮುಂದೆ ಮಠದ ಮುಂಭಾಗ, ರಥದ ಬಳಿ ಮತ್ತು ರಥಬೀದಿಯಲ್ಲಿ ಯಾವುದೇ ರೀತಿಯ ಪ್ರಿ ವೆಡ್ಡಿಂಗ್ ಚಿತ್ರೀಕರಣ ನಿಷಿದ್ಧವಾಗಿದೆ ಎಂದು ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಡ್ರ‍್ಯಾಗನ್ ಫ್ರೂಟ್: ಆರೋಗ್ಯ ಪ್ರಯೋಜನಗಳು ಮತ್ತು ಅದನ್ನು ಬಳಸುವ ವಿಧಾನ

ಪಿಟಾಯ ಅಥವಾ ಪಿಟಾಹಯಾ ಎಂದೂ ಕರೆಯಲ್ಪಡುವ ಡ್ರ‍್ಯಾಗನ್ ಫ್ರೂಟ್, ಅದರ ಆಕರ್ಷಕ ನೋಟ, ಸೌಮ್ಯವಾದ ಸಿಹಿ ರುಚಿ ಮತ್ತು ಸಮೃದ್ಧ ಪೌಷ್ಟಿಕಾಂಶಗಳಿಂದ ವಿಶ್ವದಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ.

ಸಂಗೀತ ಕಲಾವಿದೆ ಮಹಿಮಾ ಬಜಗೋಳಿ ಅವರು “ಚಂದನ ಸಂಗೀತ ರತ್ನ ಪ್ರಶಸ್ತಿ” ಗೆ ಆಯ್ಕೆ

ವಿಶಿಷ್ಟ ಕಂಠದ ಸಂಗೀತಗಾರ್ತಿ, ಗಾಯಕಿ ಹಾಗೂ ನಿರೂಪಕಿಯಾದ ಮಹಿಮಾ ಬಜಗೋಳಿ ಅವರು ಹಲವಾರು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ "ಚಂದನ ಸಂಗೀತ ರತ್ನ ಪ್ರಶಸ್ತಿ" ಗೆ ಆಯ್ಕೆಯಾಗಿದ್ದಾರೆ.

ಛತ್ತೀಸ್ಗಡದಲ್ಲಿ ಬಂಧಿಸಿರುವ ಸಿಸ್ಟರ್ ಗಳ ಬಿಡುಗಡೆಗೆ ಒತ್ತಾಯ, ಕ್ರೈಸ್ತ ಸಂಘಟನೆಯ ಸಮಯ ಸಾಧಕ ನಡೆ ಖಂಡನೀಯ : ರುಡಾಲ್ಪ್ ಡಿ’ಸೋಜ

ಇತ್ತೀಚಿಗೆ ಛತ್ತೀಸ್ಗಡದಲ್ಲಿ ನಡೆದ ಎರಡು ಸಿಸ್ಟರ್ ಗಳ ಬಂಧನಕ್ಕೆ ಸಂಬಂಧಿಸಿದಂತೆ ಸರಕಾರ ಕೂಡಲೇ ತನಿಖೆಯನ್ನು ತೀವ್ರಗೊಳಿಸಿ ಬಂಧಿತರಾಗಿರುವ ಸಿಸ್ಟರ್ ಗಳನ್ನು ಶೀಘ್ರ ಬಿಡುಗಡೆಗೊಳಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿ'ಸೋಜ ಒತ್ತಾಯಿಸಿದ್ದಾರೆ.

ಧರ್ಮಸ್ಥಳ ಪ್ರಕರಣದ ವರದಿ ಪ್ರಸಾರಕ್ಕೆ ಹೈಕೋರ್ಟ್‌ ಗ್ರೀನ್ ಸಿಗ್ನಲ್: ಮಾಧ್ಯಮಗಳ ಮೇಲಿನ ನಿರ್ಬಂಧ ರದ್ದು!

ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತು ಹಾಕಿರುವ ಕುರಿತು ಅನಾಮಧೇಯ ಸಾಕ್ಷಿದಾರರು ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಮೇಲೆ ವಿಧಿಸಲಾಗಿದ್ದ ಸುದ್ದಿ ಪ್ರಸಾರ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿ ಮಹತ್ವದ ತೀರ್ಪು ನೀಡಿದೆ.