spot_img

ಉಡುಪಿ ಜನತೆಯ ಪ್ರತಿನಿಧಿಯಾಗಿರುವ ಶಾಸಕರನ್ನು ಏಕವಚನದಲ್ಲಿ ಟೀಕಿಸುವ ಪ್ರಸಾದ್ ಕಾಂಚನ್ ಅಪ್ರಬುದ್ಧ ಹೇಳಿಕೆ ಕಾಂಗ್ರೆಸ್ ಪಕ್ಷದ ಘನತೆಗೆ ಶೋಭೆಯಲ್ಲ : ಅಜಿತ್ ಕಪ್ಪೆಟ್ಟು ಲೇವಡಿ

Date:

ಉಡುಪಿ : ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ಪ್ರಸಾದ್ ಕಾಂಚನ್ ತನ್ನ ಅಸ್ತಿತ್ವವನ್ನು ತೋರಿಸಲು ಪ್ರತೀ 3 ತಿಂಗಳಿಗೊಮ್ಮೆ ನೀಡುವ ಪತ್ರಿಕಾ ಹೇಳಿಕೆಯಲ್ಲಿ ಉಡುಪಿ ಶಾಸಕರನ್ನು ಟೀಕಿಸುವ ಭರದಲ್ಲಿ ಏಕವಚನ ಶಬ್ದ ಪ್ರಯೋಗ ಮಾಡಿರುವುದು ಅವರ ರಾಜಕೀಯ ಹತಾಶೆ ಮತ್ತು ಅಪ್ರಬುದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಹೇಳಿಕೆ ಕಾಂಗ್ರೆಸ್ ಪಕ್ಷದ ಘನತೆಗೆ ಶೋಭೆ ತರುವುದಿಲ್ಲ ಎಂದು ಬಿಜೆಪಿ ಉಡುಪಿ ನಗರ ಎಸ್.ಸಿ. ಮೋರ್ಚಾ ಅಧ್ಯಕ್ಷ ಅಜಿತ್ ಕಪ್ಪೆಟ್ಟು ಲೇವಡಿ ಮಾಡಿದ್ದಾರೆ.

ಉಡುಪಿ ಕಾಂಗ್ರೆಸ್ ನಲ್ಲಿ ಚಲಾವಣೆ ಇಲ್ಲದ ನಾಣ್ಯದಂತಿರುವ ಪ್ರಸಾದ್ ಕಾಂಚನ್ ಉಡುಪಿ ಶಾಸಕರನ್ನು ಟೀಕಿಸುವ ಮೂಲಕ ಪುಕ್ಕಟೆ ಪ್ರಚಾರ ಪಡೆಯುವುದನ್ನೇ ತನ್ನ ರಾಜಕೀಯ ಸಾಧನೆ ಎಂದು ಭಾವಿಸಿದಂತಿದೆ. ರಾಜಕೀಯದಲ್ಲಿ ತನ್ನ ಸೋಲನ್ನೇ ಅರಗಿಸಿಕೊಳ್ಳಲು ಸಾಧ್ಯವಾಗದ ವ್ಯಕ್ತಿಯಿಂದ ಉಡುಪಿಯ ಜನತೆ ಇನ್ನೇನೂ ಹೆಚ್ಚಿನದ್ದನ್ನು ನಿರೀಕ್ಷಿಸುವುದು ಅಸಾಧ್ಯವೆಂಬುದನ್ನು ಕಾಂಚನ್ ರುಜುವಾತುಪಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಡಾ! ವಿ.ಎಸ್. ಆಚಾರ್ಯ, ಆಸ್ಕರ್ ಫೆರ್ನಾಂಡೀಸ್, ಮಲ್ಪೆ ಮಧ್ವರಾಜ್, ಯು.ಆರ್. ಸಭಾಪತಿ, ಪ್ರಮೋದ್ ಮಧ್ವರಾಜ್ ರಂತಹ ವ್ಯಕ್ತಿಗಳು ಜನಪ್ರತಿನಿಧಿಗಳಾಗಿ ಸಭ್ಯತೆಯ ರಾಜಕೀಯ ಮಾಡಿದ್ದು, ತಮ್ಮ ರಾಜಕೀಯ ಸಿದ್ಧಾಂತಗಳು ಭಿನ್ನವಾಗಿದ್ದರೂ ತಮ್ಮ ವಿರೋಧಿಗಳನ್ನು ಅತ್ಯಂತ ಸಭ್ಯ ರೀತಿಯಲ್ಲಿ ಟೀಕಿಸಿ ಘನತೆ ಮೆರೆದಿದ್ದರೂ ಉಡುಪಿಯಲ್ಲಿ ಪ್ರಸಾದ್ ಕಾಂಚನ್ ರಂತಹ ವ್ಯಕ್ತಿಗಳು ಉಡುಪಿಯ ಪಾಲಿಗೆ ಕಪ್ಪು ಚುಕ್ಕೆಯಾಗಿದ್ದಾರೆ. ಸದಾ ತನ್ನನ್ನು ತಾನು ವಿದ್ಯಾವಂತ, ಯಶಸ್ವಿ ಉದ್ಯಮಿ ಎಂದು ಬಿಂಬಿಸಲು ಯತ್ನಿಸುವ ಪ್ರಸಾದ್ ಕಾಂಚನ್ ಹೇಳಿಕೆಗಳು ಮಾತ್ರ ಸದಾ ತದ್ವಿರುದ್ಧವಾಗಿರುತ್ತದೆ.

ಬಡಾನಿಡಿಯೂರು ಗ್ರಾಮದಲ್ಲಿ ಮಾಜಿ ಶಾಸಕರ ಒಡೆತನದ ಅಕ್ರಮ ರೆಸಾರ್ಟ್ ಕಾಮಗಾರಿಗೆ ಪರೋಕ್ಷ ಸಹಕಾರ ನೀಡಿ, ತನ್ನದೇ ಬಡಾನಿಡಿಯೂರು ಗ್ರಾಮದ ಜನತೆಗೆ ಅನ್ಯಾಯ ಮಾಡಿ, ಈ ಹಿಂದೆ ಪದ್ಮಪ್ರಿಯಾ ಪ್ರಕರಣ, ಸಿ.ಡಿ. ಪ್ರಕರಣ, ರೇವ್ ಪಾರ್ಟಿ ಬಗ್ಗೆ ಭಾಷಣ ಮಾಡಿ ಈಗ ಅದೇ ವ್ಯಕ್ತಿಯೊಡನೆ ಕೈಜೋಡಿಸಿ ಆಕ್ರಮಕ್ಕೆ ಸಹಕಾರ ನೀಡಿದ ತಮ್ಮ ಪಕ್ಷ ನಿಷ್ಠೆ ಸಾರ್ವಜನಿಕರ ಮುಂದೆ ಬಟ್ಟಾಬಯಲಾಗಿದೆ.

ಉಡುಪಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರವರೇ ನಿಮ್ಮ ಪಕ್ಷದ ಪರಾಜಿತ ಅಭ್ಯರ್ಥಿಯ ಕ್ಷುಲ್ಲಕ ಹೇಳಿಕೆಗಳ ಬಗ್ಗೆ ಅವರಿಗೆ ಸ್ವಲ್ಪ ಬುದ್ಧಿ ಮಾತು ಹೇಳಿ ಪಕ್ಷದ ಮರ್ಯಾದೆಯನ್ನು ಉಳಿಸಿಕೊಳ್ಳಿ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರಸಾದ್ ಕಾಂಚನ್ ಹೇಳಿಕೆಗಳು ಪಕ್ಷಕ್ಕೆ ಮುಳುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಜಿತ್ ಕಪ್ಪೆಟ್ಟು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ನಾರಾಯಣ ಗುರು ಜಯಂತಿ

ಜ್ಞಾನ ಮತ್ತು ಸಮಾನತೆಯ ಪುನರುತ್ಥಾನಕ್ಕೆ ಪ್ರೇರಣೆಯ ದಿನಪ್ರತಿ ವರ್ಷ ಸೆಪ್ಟೆಂಬರ್ 7, ಭಾರತದ ಕರಾವಳಿ ತೀರದ ಜನತೆಗೆ ಒಂದು ಪವಿತ್ರ ಮತ್ತು ಮಹತ್ವದ ದಿನ

ಧರ್ಮಸ್ಥಳ ಪ್ರಕರಣ: ಆರೋಪಿ ಚಿನ್ನಯ್ಯ ನ್ಯಾಯಾಂಗ ಬಂಧನಕ್ಕೆ, ಶಿವಮೊಗ್ಗ ಜೈಲಿಗೆ ರವಾನೆ

'ಧರ್ಮಸ್ಥಳದಲ್ಲಿ ಹೆಣ ಹೂತಿದ್ದೇನೆ' ಎಂದು ಹಲವು ದಿನಗಳ ಕಾಲ ಸುದ್ದಿಯಲ್ಲಿದ್ದ ಆರೋಪಿ ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅವಧಿ ಮುಗಿದಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಐಸಿಸಿ ಮತ್ತು Google Pay ಜಂಟಿ ಪ್ರಯತ್ನ: ಮಹಿಳಾ ವಿಶ್ವಕಪ್ ಟಿಕೆಟ್ ಮಾರಾಟಕ್ಕೆ ಹೊಸ ಡಿಜಿಟಲ್ ಸ್ಪರ್ಶ

ವಿಶೇಷ ಟಿಕೆಟ್‌ಗಳು ಗೂಗಲ್ ಪೇ ಮೂಲಕ ಸೆಪ್ಟೆಂಬರ್ 8ರವರೆಗೆ ಲಭ್ಯವಿರಲಿದ್ದು, ಸೆಪ್ಟೆಂಬರ್ 9 ರಿಂದ ಎಂದಿನಂತೆ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ ಎಂದು ICC ತಿಳಿಸಿದೆ.

ಸೈನಸ್ ಸಮಸ್ಯೆ: ಕರಿಮೆಣಸಿನ ಆವಿಯಿಂದ ಪರಿಹಾರ ಸಾಧ್ಯವೇ?

ಮೂಗು ಕಟ್ಟಿಕೊಂಡಾಗ ಅಥವಾ ಸೈನಸ್‌ಗಳಿಂದ ತಲೆನೋವು ಬಂದಾಗ ಬಿಸಿ ನೀರಿನ ಆವಿಗೆ ಕರಿಮೆಣಸು ಸೇರಿಸಿ ಉಸಿರಾಡುವುದು ಒಂದು ಜನಪ್ರಿಯ ವಿಧಾನ.