
ವ್ಯಾಟಿಕನ್: ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಸೋಮವಾರ ನಿಧನ ಹೊಂದಿದ ನಂತರ, ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಶುಕ್ರವಾರ ಮುಗಿಯಿತು. ಶನಿವಾರ ಬೆಳಗ್ಗೆ 10 ಗಂಟೆಗೆ ವ್ಯಾಟಿಕನ್‌ನ ಸಂತ ಮರಿಯಾ ಬೆಸಿಲಿಕಾ ದಲ್ಲಿ ಅಂತ್ಯಕ್ರಿಯೆ ವಿಧಿವಿಧಾನ ನಡೆಯಲಿದೆ.
ಅಂತ್ಯಕ್ರಿಯೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಭಾರತದಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಾಜರಿರಲಿದ್ದಾರೆ.
ಹಿಂದಿನ ಪೋಪ್‌ಗಳಂತೆ ಮೂರು ಶವಪೆಟ್ಟಿಗೆಯ ವಿಧಾನ ಬಳಸದೇ, ಪೋಪ್ ಫ್ರಾನ್ಸಿಸ್ ಅವರ ಅಂತಿಮ ಆಸೆಯಂತೆ, ಸರಳವಾಗಿ ಒಂದೇ ಶವಪೆಟ್ಟಿಗೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಅಂತ್ಯಕ್ರಿಯೆಯ ಪ್ರಕ್ರಿಯೆ ಹೀಗಿದೆ:
- ಶವಪೆಟ್ಟಿಗೆ ಮುಚ್ಚುವ ಮೊದಲು ಪೋಪ್ ಫ್ರಾನ್ಸಿಸ್ ಕುರಿತ 1 ಪುಟದ ಟಿಪ್ಪಣಿಯ ಪಠಣ ನಡೆಯಲಿದೆ.
- ಪೋಪ್ ಅವರ ಕಾಲದಲ್ಲಿ ನಿರ್ಮಿತ ನಾಣ್ಯಗಳ ಚೀಲವನ್ನೂ ಶವಪೆಟ್ಟಿಗೆಯೊಳಗೆ ಇರಿಸಲಾಗುತ್ತದೆ.
- ಶನಿವಾರ ಬೆಳಿಗ್ಗೆ ಸಂತ ಪೀಟರ್ ಬೆಸಿಲಿಕಾದಲ್ಲಿ ವಿವಿಧ ಭಾಷೆಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ.
ಬಳಿಕ ಪಾರ್ಥಿವ ಶರೀರವನ್ನು ಸಂತ ಮರಿಯಾ ಬೆಸಿಲಿಕೆಗೆ ತರಲಾಗುತ್ತಿದ್ದು, ಅಂತಿಮ ವಿಧಿವಿಧಾನದ ನಂತರ ಅಂತ್ಯಕ್ರಿಯೆ ನಡೆಯಲಿದೆ.