spot_img

ಹಿರಿಯಡ್ಕದಲ್ಲಿ ಗ್ಯಾಂಗ್ ಸದಸ್ಯ ಇಸ್ಹಾಕ್ ಮೇಲೆ ಗುಂಡು ಹಾರಿಸಿದ ಪೊಲೀಸರು; ಗಾಯಗೊಂಡು ಆಸ್ಪತ್ರೆಗೆ ದಾಖಲು

Date:

spot_img

ಉಡುಪಿ: ಹಿರಿಯಡ್ಕ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಶೂಟೌಟ್ ಘಟನೆಯಲ್ಲಿ ನಟೋರಿಯಸ್ ಕ್ರಿಮಿನಲ್ ಗರುಡ ಗ್ಯಾಂಗ್ ಸದಸ್ಯ ಇಸ್ಹಾಕ್ ಕಾಲಿಗೆ ಗುಂಡು ತಗಲಿ ಗಾಯಗೊಂಡಿದ್ದಾನೆ. ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಇನ್ಸ್ಪೆಕ್ಟರುಗಳು ಮತ್ತು ಒಬ್ಬ ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚೆಗೆ ಬೆಂಗಳೂರು ಪೊಲೀಸರಿಂದ ತಪ್ಪಿಸಿಕೊಂಡು ಬಂದಿದ್ದ ಇಸ್ಹಾಕ್ ಮಣಿಪಾಲದಲ್ಲಿ ಕಾಣಿಸಿಕೊಂಡಿದ್ದ. ದರೋಡೆ ಪ್ರಕರಣದ ಸಂಬಂಧದಲ್ಲಿ ಮಣಿಪಾಲ ಪೊಲೀಸರು ಇಸ್ಹಾಕ್ ಅನ್ನು ಬೆನ್ನು ಹತ್ತಿದ್ದರು. ಆದರೆ, ಪೊಲೀಸರಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅಪಘಾತಕ್ಕೊಳಗಾದ ಇಸ್ಹಾಕ್ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ. ನಂತರ ಪೊಲೀಸರು ಅವನನ್ನು ಹುಡುಕುವ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಬುಧವಾರ ಸಂಜೆ ಹಿರಿಯಡ್ಕ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಮತ್ತು ಅವರ ತಂಡ ಇಸ್ಹಾಕ್ ಮೇಲೆ ಗುಂಡು ಹಾರಿಸಿದರು. ಈ ಘಟನೆಯಲ್ಲಿ ಇಬ್ಬರು ಪೊಲೀಸ್ ಇನ್ಸ್ಪೆಕ್ಟರುಗಳು ಮತ್ತು ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಇಸ್ಹಾಕ್ ಕಾಲಿಗೆ ಗುಂಡು ತಗಲಿದ್ದು, ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರ ಪ್ರಕಟಣೆ:

ಮಣಿಪಾಲ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 35/25 ರಲ್ಲಿ ಆರೋಪಿ ಇಸ್ಹಾಕ್ ಮತ್ತು ಇತರರ ಬಂಧನಕ್ಕಾಗಿ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್, ಮಲ್ಪೆ ವೃತ್ತ ನಿರೀಕ್ಷಕರು ಮತ್ತು ಇತರ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ಈ ತಂಡವು ಆರೋಪಿಗಳ ಜಾಡನ್ನು ಹಿಡಿದು, 12/03/25 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಸ್ಹಾಕ್ ಸೇರಿದಂತೆ ನಾಲ್ಕು ಜನರನ್ನು ದಸ್ತಗಿರಿ ಮಾಡಿತು.

ಆರೋಪಿಗಳನ್ನು ಮಣಿಪಾಲಕ್ಕೆ ಕರೆತರುವಾಗ, ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ ಸುಮಾರು 7.15ಕ್ಕೆ ಇಸ್ಹಾಕ್ ತನಗೆ ತುರ್ತಾಗಿ ವಾಂತಿ ಮತ್ತು ಮೂತ್ರ ವಿಸರ್ಜನೆ ಮಾಡಲೇಬೇಕೆಂದು ಹಠ ಮಾಡಿ ವಾಹನವನ್ನು ನಿಲ್ಲಿಸಿದ. ಮೂತ್ರ ವಿಸರ್ಜನೆ ನಂತರ, ಇಸ್ಹಾಕ್ ತನ್ನ ಕೈಗೆ ಅಳವಡಿಸಲಾಗಿದ್ದ ಲೀಡಿಂಗ್ ಚೈನ್ ಅನ್ನು ಬಳಸಿ ಪೊಲೀಸ್ ಸಿಬ್ಬಂದಿಯವರ ಮೇಲೆ ದಾಳಿ ಮಾಡಿದ. ಇಬ್ಬರು ಪೊಲೀಸ್ ಇನ್ಸ್ಪೆಕ್ಟರುಗಳು ಅವನನ್ನು ಹಿಡಿಯಲು ಪ್ರಯತ್ನಿಸಿದಾಗ, ಇಸ್ಹಾಕ್ ಅವರನ್ನು ಒದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ.

ಈ ಸಮಯದಲ್ಲಿ ಇಸ್ಹಾಕ್ನ ಲೀಡಿಂಗ್ ಚೈನ್ ವಾಹನದ ಎದುರಿನ ಗ್ಲಾಸಿಗೆ ಬಡಿದು, ಗ್ಲಾಸ್ ಒಡೆದು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗಾಯಗಳಾದವು. ನಂತರ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಎಚ್ಚರಿಕೆ ನೀಡಿದರೂ, ಇಸ್ಹಾಕ್ ಕೇಳದೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಅವನ ಕಾಲಿಗೆ ಗುಂಡು ಹಾರಿಸಲಾಯಿತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಭಜನಾ ಭೀಕರ ಸ್ಮರಣೆ ದಿನ

ಶಾಂತಿ ಮತ್ತು ಐಕ್ಯತೆಯ ಪಾಠ ಕೊಡುವ ವಿಭಜನಾ ಸ್ಮರಣೆ

ಗಣಿತ ಪರೀಕ್ಷೆಯಲ್ಲಿ 2 ಅಂಕ ಕಡಿತ: ವಿದ್ಯಾರ್ಥಿಯಿಂದ ಶಿಕ್ಷಕಿಯ ಮೇಲೆ ಹಲ್ಲೆ

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಹಿಂಸಾಪ್ರವೃತ್ತಿ: ಶಿಕ್ಷಕಿಯ ಮೇಲೆ ಹಲ್ಲೆ ಪ್ರಕರಣ

ಲ್ಯಾಪ್‌ಟಾಪ್‌ನಲ್ಲಿಯೇ AI ಕ್ರಾಂತಿ: OpenAI ಯಿಂದ GPT-OSS ಮಾದರಿಗಳ ಬಿಡುಗಡೆ!

OpenAI ಯ GPT-OSS ಮಾದರಿಗಳು ಈಗ ಸಾರ್ವಜನಿಕರಿಗೆ ಲಭ್ಯ.

ಟೊಮೆಟೊ ಪ್ರಿಯರೇ ಗಮನಿಸಿ: ಅತಿಯಾದ ಸೇವನೆ ಕಿಡ್ನಿ ಮತ್ತು ಕೀಲು ನೋವಿಗೆ ಆಹ್ವಾನ

ಖಾಲಿ ಹೊಟ್ಟೆಯಲ್ಲಿ ಟೊಮೆಟೊ ತಿನ್ನುವ ಮುನ್ನ ಎಚ್ಚರ!