
ಚಂಡೀಗಢ: ಸೋಶಿಯಲ್ ಮೀಡಿಯಾದ ರೀಲ್ಸ್ ಹುಚ್ಚು ಜನರ ಮೇಲೆ ಹಬ್ಬಿದಂತೆಯೇ, ಅನೇಕರು ಸಾರ್ವಜನಿಕ ಸ್ಥಳಗಳನ್ನೇ ರಂಗಮಂದಿರವನ್ನಾಗಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ, ಚಂಡೀಗಢದಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಪತ್ನಿ ರಸ್ತೆ ಮಧ್ಯೆ ನೃತ್ಯ ಮಾಡಿ ವಿಡಿಯೋ ಮಾಡಿದ್ದು, ತೀವ್ರ ಟ್ರಾಫಿಕ್ ಜಾಮ್ ಉಂಟಾಗಿದೆ. ಮಹಿಳೆ ಹರಿಯಾಣದ ಜನಪ್ರಿಯ ಹಾಡಿಗೆ ಜೀಬ್ರಾ ಕ್ರಾಸಿಂಗ್ ಮೇಲೆ ನೃತ್ಯ ಮಾಡುತ್ತಿದ್ದರೆ, ಸಿಗ್ನಲ್ ಹಸಿರು ಬಿದ್ದರೂ ದಾರಿ ಬಿಡಲಿಲ್ಲ. ಇದರಿಂದ ವಾಹನಗಳು ಅಸ್ಥಿರಗೊಂಡು ದಟ್ಟಣೆ ಉಂಟಾಗಿದೆ.
ಈ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ, ಚಂಡೀಗಢ ಪೊಲೀಸರು ಮಹಿಳೆ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಟ್ರಾಫಿಕ್ ಅಡ್ಡಿಪಡಿಸುವ ಕೃತ್ಯಕ್ಕೆ ಕಾನೂನು ಕ್ರಮ ಕೈಗೊಳ್ಳಲಾಗಿದ್ದು, ಇಂತಹ ಅಕ್ರಮ ಕ್ರಿಯೆಗಳ ವಿರುದ್ಧ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.