
ಗುಜರಾತ್: ವಿಶ್ವ ವನ್ಯಜೀವಿ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 3, 2025 ರಂದು ಗುಜರಾತಿನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಅದ್ಭುತ ಲಯನ್ ಸಫಾರಿಗೆ ಚಾಲನೆ ನೀಡಿದರು.
ಈ ಜಾಗತಿಕ ಕಾರ್ಯಕ್ರಮವು ವನ್ಯಜೀವಿ ಸಂರಕ್ಷಣೆ ಮತ್ತು ಪರಿಸರ ಸಮತೋಲನದ ಮಹತ್ವವನ್ನು ಉಲ್ಲೇಖಿಸುವ ಜೊತೆಗೆ ಏಷ್ಯಾಟಿಕ್ ಸಿಂಹಗಳ ಅಭಯಾರಣ್ಯಕ್ಕೆ ಹೊಸ ಪ್ರೋತ್ಸಾಹ ನೀಡಿದೆ.
ಸಫಾರಿ ಉಡುಪಿನಲ್ಲಿ, ಕ್ಯಾಮೆರಾ ಹಿಡಿದ ಪ್ರಧಾನಿ ಮೋದಿ, ಗಿರ್ ಅರಣ್ಯದ ಆಳದಲ್ಲಿ ಸಿಂಹಗಳ ನೈಸರ್ಗಿಕ ಜೀವನಶೈಲಿಯನ್ನು ನೇರವಾಗಿ ವೀಕ್ಷಿಸಿದರು. ಸಚಿವರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಂಚರಿಸಿದ ಅವರು, ಪ್ರಕೃತಿಯ ವೈಭವವನ್ನು ಸವಿದರು.
ಸೋಮನಾಥ ದರ್ಶನದ ಬಳಿಕ, ಸಿನ್ ಸದನ ಅರಣ್ಯ ಅತಿಥಿಗೃಹದಲ್ಲಿ ರಾತ್ರಿ ತಂಗಿದ ಪ್ರಧಾನಿ, ಮುಂಜಾನೆ ಸಾಸನ್ ಗಿರ್‌ನ ಕಾಡು ಸೌಂದರ್ಯವನ್ನು ಅರಸುತ್ತಾ ಸಿಂಹ ಸಫಾರಿಗೆ ತೆರಳಿದರು.
