spot_img

ಕುಕ್ಕೆಹಳ್ಳಿ ಬ್ರಹ್ಮರ ಮದಗ ಕೆರೆಯಲ್ಲಿ ಗಿಡ ನಾಟಿ ಕಾರ್ಯಕ್ರಮ: ಪರಿಸರ ಸಂರಕ್ಷಣೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ

Date:

spot_img
spot_img

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಉಡುಪಿ ತಾಲೂಕಿನ ವತಿಯಿಂದ ಕುಕ್ಕೆಹಳ್ಳಿ ಬ್ರಹ್ಮರ ಮದಗ ಕೆರೆಯಲ್ಲಿ ಇಂದು (ಜುಲೈ 29, 2025) ಗಿಡ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕೆರೆ ಅಂಗಳದಲ್ಲಿ ನಡೆದ ಈ ಕಾರ್ಯಕ್ರಮ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿತು.

ಗಣ್ಯರಿಂದ ಗಿಡ ನೆಡುವ ಚಾಲನೆ

ಕಾರ್ಯಕ್ರಮದಲ್ಲಿ ‘ನಮ್ಮೂರ ನಮ್ಮ ಕೆರೆ’ ಅಧ್ಯಕ್ಷರಾದ ದಿಲೀಪ್ ಹೆಗ್ಡೆ, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುರಂದರ ಕೋಟ್ಯಾನ್, ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರಿಜೀವನ್ ಹೆಗ್ಡೆ, ಕುಕ್ಕೆಹಳ್ಳಿ ಒಕ್ಕೂಟದ ಅಧ್ಯಕ್ಷರಾದ ವಿಶಾಲಾಕ್ಷಿ, ಎ.ಒಕ್ಕೂಟದ ಕಾರ್ಯದರ್ಶಿ ನವೀನ್, ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ವಿನಯ್, ಶೌರ್ಯ ವಿಪತ್ತು ಸದಸ್ಯರು, ಕೃಷಿ ಮೇಲ್ವಿಚಾರಕರಾದ ಮಂಜುನಾಥ್ ಸರ್ ಹಾಗೂ ಸೇವಾ ಪ್ರತಿನಿಧಿ ಪ್ರಮೀಳಾ ರವರು ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗಿಡಗಳಿಗೆ ವಿಶೇಷ ರಕ್ಷಣೆ

ನೆಟ್ಟ ಗಿಡಗಳಿಗೆ ಪ್ರತ್ಯೇಕ ಮೆಶ್ ವ್ಯವಸ್ಥೆ (ರಕ್ಷಣಾ ಬೇಲಿ)ಯನ್ನು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಮಾಡಿರುತ್ತಾರೆ. ಇದು ನೆಟ್ಟ ಗಿಡಗಳು ಬೆಳೆಯಲು ಸೂಕ್ತ ರಕ್ಷಣೆಯನ್ನು ಒದಗಿಸಲಿದೆ. ಈ ಕಾರ್ಯಕ್ರಮವು ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಪರಿಸರ ಕಾಳಜಿಗೆ ಉತ್ತಮ ಉದಾಹರಣೆಯಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಫುಡ್‌ ಪಾಯ್ಸನಿಂಗ್ ಏಕೆ ಆಗುತ್ತದೆ? ಈ ಸಂದರ್ಭಗಳಲ್ಲಿ ಏನು ತಿನ್ನಬೇಕು, ಏನು ತಿನ್ನಬಾರದು?

ಫುಡ್‌ ಪಾಯ್ಸನಿಂಗ್‌ನಿಂದಾಗಿ ಆರೋಗ್ಯ ಹದಗೆಡುತ್ತದೆ, ಹೊಟ್ಟೆ ನೋವು, ಅತಿಸಾರ (ಲೂಸ್‌ಮೋಷನ್‌), ವಾಕರಿಕೆ ಮತ್ತು ವಾಂತಿಯಂತಹ ಸಮಸ್ಯೆಗಳು ಕಾಡುತ್ತವೆ.

ಆರ್‌ಎಸ್‌ಎಸ್‌ ಚಟುವಟಿಕೆ ನಿರ್ಬಂಧ: ‘ಪ್ರಿಯಾಂಕ್ ಖರ್ಗೆ ಪತ್ರದಲ್ಲಿ ತಪ್ಪೇನಿದೆ?’ – ತಮಿಳುನಾಡು ಮಾದರಿ ಪರಿಶೀಲಿಸಿ ಕ್ರಮ ಎಂದ ಸಿಎಂ ಸಿದ್ದರಾಮಯ್ಯ

ಸರ್ಕಾರಿ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ತಮಗೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, "ಅದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನಿಸಿದ್ದಾರೆ.

ನಿಟ್ಟೆಯಲ್ಲಿ ನಡೆದ ಕೇಶದಾನ

ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ನಿಟ್ಟೆ ಕಾಲೇಜಿನಿಂದ 'ಕೇಶ ದಾನ' ಅಭಿಯಾನ ನಡೆಯಿತು.

ಆರ್‌ಎಸ್‌ಎಸ್‌ ಪ್ರಶ್ನಿಸಿದ್ದಕ್ಕೆ ನಿಂದನಾ ಕರೆಗಳ ಹಿನ್ನಲೆ , ‘ಬೆದರಿಕೆಗಳಿಂದ ನನ್ನ ಬಾಯಿ ಮುಚ್ಚಿಸಲಾಗದು’ ಎಂದು ಸ್ಪಷ್ಟನೆ ನೀಡಿದ ಸಚಿವ ಪ್ರಿಯಾಂಕ್‌ ಖರ್ಗೆ

ಆರ್‌ಎಸ್‌ಎಸ್‌ ಪ್ರಶ್ನಿಸಿದ್ದಕ್ಕೆ ನಿಂದನಾ ಕರೆಗಳ ಹಿನ್ನಲೆ , 'ಬೆದರಿಕೆಗಳಿಂದ ನನ್ನ ಬಾಯಿ ಮುಚ್ಚಿಸಲಾಗದು' ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.