
ಗಣಿತನಗರ : ವ್ಯಕ್ತಿತ್ವ ನಮ್ಮ ನೈತಿಕತೆಯ ಮೇಲೆ ನಿಂತಿದೆ. ನಡೆ-ನುಡಿ-ನಡವಳಿಕೆಯಿಂದ ಚಾರಿತ್ರ್ಯ, ನಿರ್ಮಾಣ ಸಾಧ್ಯ. ನಮ್ಮಲ್ಲಿ ನಮಗೆ ನಂಬಿಕೆಯಿರಲಿ ಎಂದು ಜೆ.ಸಿ.ಐ ರಾಷ್ಟ್ರೀಯ ತರಬೇತುದಾರ ಶ್ರೀ ದೀಪಕ್ ರಾಜ್ ಹೇಳಿದರು. ಅವರು ಜೆ.ಸಿ.ಐ ಕಾರ್ಕಳದ ಸಹಯೋಗದೊಂದಿಗೆ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಎನ್.ಎಸ್.ಎಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜೆ.ಸಿ.ಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್. ಜೈನ್, ಗೋಲ್ ಮತ್ತು ಡೆವಲಪ್ ಮೆಂಟ್ ಝೇನ್ ಡೈರೆಕ್ಟರ್ ಶ್ರೀ ವಿಶ್ಲೇಶ್, ಕಾರ್ಯದರ್ಶಿ ಸುಶ್ಮಿತಾ ರಾವ್, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲ ಶ್ರೀ ಸಾಹಿತ್ಯ, ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ, ಡೀನ್ ಅಕಾಡೆಮಿಕ್ಸ್ ಡಾ.ಮಿಥುನ್ ಯು, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಮಿತ್ರಾ ಹಾಗೂ ಎನ್.ಎಸ್.ಎಸ್ ಘಟಕಾಧಿಕಾರಿ ಶ್ರೀ ಶೈಲೇಶ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕಿ ಕು.ಅನಿಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



