spot_img

ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ

Date:

ಉಡುಪಿ: ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾರ್ಚ್19ರವರೆಗೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಕೆ.ಜಿ. ರಾಘವೇಂದ್ರ ತಂತ್ರಿ ಮತ್ತು ಅರ್ಚಕ ಪಿ. ಕೃಷ್ಣ ಅಡಿಗ ಅವರ ನೇತೃತ್ವದಲ್ಲಿ ಜಾತ್ರಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನಡೆಯಲಿದೆ.

ಪ್ರಮುಖ ದಿನಗಳ ಕಾರ್ಯಕ್ರಮಗಳು:
🔸 ಮಾ. 13: ಧ್ವಜಾರೋಹಣ, ಅಗ್ನಿಜನನ, ಹೋಮ, ಮಹಾಪೂಜೆ, ದೀಪಾರಾಧನೆ, ಉತ್ಸವ ಬಲಿ
🔸 ಮಾ. 14: ಮೀನ ಸಂಕ್ರಮಣ, ಕಲಶಾಭಿಷೇಕ, ಗರುಡವಾಹನ, ತೆಪ್ಪೋತ್ಸವ, ರಥೋತ್ಸವ
🔸 ಮಾ. 15: ವಸಂತೋತ್ಸವ, ಬೆಳ್ಳಿ ಪಲ್ಲಕ್ಕಿ, ಚಂದ್ರಮಂಡಲ ರಥ
🔸 ಮಾ. 16: ರಥಾರೋಹಣ, ಶ್ರೀ ಮಹಾರಥೋತ್ಸವ, ಪಲ್ಲಕ್ಕಿ ಉತ್ಸವ
🔸 ಮಾ. 17: ಅವಭೃಥ ಸ್ನಾನ, ಆರಾಟೋತ್ಸವ, ಪೂರ್ಣಾಹುತಿ, ಧ್ವಜಾವರೋಹಣ
🔸 ಮಾ. 18: ಪುಣ್ಯಾಹವಾಚನ, ಮಹಾಪೂಜೆ, ಓಕುಳಿಯಾಟ
🔸 ಮಾ. 19: ಬ್ರಹ್ಮಕುಂಭಾಭಿಷೇಕ, ಮಹಾಮಂತ್ರಾಕ್ಷತೆ, ಪರಿವಾರ ದೈವಗಳ ಪೂಜೆ

ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜಾತ್ರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಗುರುರಾಜ್ ಪಿ.ಆರ್. ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

“ಆಪರೇಷನ್ ಸಿಂದೂರ 2” ಬಗ್ಗೆ ಜೋರಾದ ಊಹಾಪೋಹ: ಮುಂದಿನ ಹಂತಕ್ಕೆ ಸಜ್ಜಾಗ್ತಿದೆಯಾ ಭಾರತ?

ಪಾಕಿಸ್ತಾನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ “ಆಪರೇಷನ್ ಸಿಂದೂರ” ಬಳಿಕ ದೇಶದಲ್ಲಿ ಭವಿಷ್ಯದ ದಾಳಿಗಳ ಕುರಿತ ಊಹಾಪೋಹಗಳು ಹೆಚ್ಚಾಗಿವೆ.

ನಿವೃತ್ತ ಗ್ರಂಥಪಾಲಕ ಕೆ. ಗೋವಿಂದ ರಾವ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಇತ್ತೀಚೆಗೆ ನಿಧನರಾದ ಕಾರ್ಕಳದ ಗ್ರಂಥಾಲಯದ ನಿವೃತ್ತ ಗ್ರಂಥಪಾಲಕ ಕೆ. ಗೋವಿಂದ ರಾವ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಹಿರಿಯಂಗಡಿಯ ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಜರಗಿತು.

ಪಾಕಿಸ್ತಾನ ವಿರುದ್ಧ ಸಮರಾಭ್ಯಾಸದ ನಡುವೆ ಬೆಂಗಳೂರು ಸೇರಿದಂತೆ ದೇಶದಾದ್ಯಾಂತ ಬ್ಲ್ಯಾಕ್ ಔಟ್ ಮಾಕ್ ಡ್ರಿಲ್

ಕೇಂದ್ರ ಸರ್ಕಾರದ ನಿರ್ದೇಶನದಂತೆ ಭಾರತಾದ್ಯಂತ “ಬ್ಲ್ಯಾಕ್ ಔಟ್” ಅಣಕು ಪ್ರದರ್ಶನ (Mock Blackout Drill) ಆಯೋಜಿಸಲಾಗಿದೆ.

ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ರೋಹಿತ್ ಶರ್ಮಾ

ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿಗೆ ವಿದಾಯ ಘೋಷಿಸಿದ್ದಾರೆ.