

ಪೆರ್ಡೂರು ಹೋಳಿಂಜೆಯ ಸಪರಿವಾರ ಶ್ರೀ ಬೊಬ್ಬರ್ಯ ದೈವಸ್ಥಾನದಲ್ಲಿ 8ನೇ ಪ್ರತಿಷ್ಠಾ ವರ್ಧಂತಿಯ ಪ್ರಯುಕ್ತ ತಾ. 27-02-2025ನೇ ಗುರುವಾರ ಬೊಬ್ಬರ್ಯ ಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ರಾತ್ರಿ ದೈವಗಳ ಸಿರಿಸಿಂಗಾರದ ನೇಮೋತ್ಸವ ಕಾರ್ಯಕ್ರಮಗಳು ಜರಗಲಿರುವುದು. ಮರುದಿನ ತಾ. 28-02-2025ನೇ ಶುಕ್ರವಾರ ರಾತ್ರಿ ಗೋಂದ್ಲು ಸೇವೆ ನಡೆಯಲಿದೆ. ಆ ಪ್ರಯುಕ್ತ ತಾವೆಲ್ಲರೂ ಬಂಧುಮಿತ್ರರೊಡಗೂಡಿ ಆಗಮಿಸಿ, ಈ ಪುಣ್ಯ ಸತ್ಕರ್ಮಗಳಲ್ಲಿ ಭಾಗಿಗಳಾಗಿ, ಸಿರಿಮುಡಿ ಗಂಧಪ್ರಸಾದಗಳನ್ನು ಸ್ವೀಕರಿಸಿ, ಶ್ರೀ ದೈವಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ,
ರವೀಂದ್ರ ಶೇಖರ ಶೆಟ್ಟಿ ಹೋಳಿಂಜೆಬೀಡು
ಆಡಳಿತ ಮೊಕ್ತೇಸರರರು
ಹಾಗೂ ಹೋಳಿಂಜೆಬೀಡು ಕುಟುಂಬಸ್ಥರು
ಅಧ್ಯಕ್ಷರು ಮತ್ತು ಸರ್ವ ಸದಸ್ಯರು
ಶ್ರೀ ಬೊಬ್ಬರ್ಯ ಹಾಗೂ ಪರಿವಾರ
ದೈವಸ್ಥಾನ ಸೇವಾ ಸಮಿತಿ,
ಹೋಳಿಂಜೆ, ಪೆರ್ಡೂರು