
ಪರ್ಕಳ : ಹೆರ್ಗ ಗ್ರಾಮದ ಅಗ್ರಹಾರದಲ್ಲಿರುವ ಶ್ರೀ ಮಹಾವಿಷ್ಣುಮೂರ್ತಿ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸಿಂಹಮಾಸದ ವಿಶೇಷ ಪೂಜೆಯಾದ ಸೋಣಾರತಿಯು ನಾಳೆಯಿಂದ ಆರಂಭಗೊಳ್ಳಲಿದೆ. ಆಗಸ್ಟ್ 17ರಿಂದ ಒಂದು ತಿಂಗಳ ಕಾಲ ಈ ಪೂಜೆಯು ಪ್ರತಿದಿನ ರಾತ್ರಿ 7:30ಕ್ಕೆ ನಡೆಯಲಿದೆ.
ಸೋಣಾರತಿ ಸೇವೆ ಸಲ್ಲಿಸಲು ಭಕ್ತರಿಗೆ ಆಹ್ವಾನ
ದೇವಸ್ಥಾನದ ಆಡಳಿತ ಮಂಡಳಿಯು ಈ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಭಕ್ತಾದಿಗಳಿಗೆ ಆಹ್ವಾನ ನೀಡಿದೆ. ತಮ್ಮ ವತಿಯಿಂದ ಸೋಣಾರತಿ ಅಥವಾ ದೀಪಾರಾಧನೆ ಸೇವೆ ಸಲ್ಲಿಸಲು ಇಚ್ಛಿಸುವವರು ದೇವಸ್ಥಾನವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಕರೆ ಮಾಡಬಹುದು: 9663526389