spot_img

ಪರಶುರಾಮ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ಮುನಿಯಾಲು ಉದಯಕುಮಾರ್ ಶೆಟ್ಟಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಅತ್ಯಂತ ಹಾಸ್ಯಾಸ್ಪದ -‌ ನವೀನ್‌ ನಾಯಕ್

Date:

spot_img
naveen nayak11

ಕಾರ್ಕಳ, ಜು:30 : ಪರಶುರಾಮ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದು ಅತ್ಯಂತ ಹಾಸ್ಯಾಸ್ಪದ ಸಂಗತಿಯಾಗಿದ್ದು, ಕೊಲೆಗಾರ ಶಾಂತಿಮಂತ್ರ ಪಠಿಸಿದಂತಾಗಿದೆ. ಪರಶುರಾಮ ಥೀಂ ಪಾರ್ಕ್ ಬಗ್ಗೆ ಇಲ್ಲಸಲ್ಲದ ಅಪಸ್ವರ ಎತ್ತಿ ಯೋಜನೆಯ ಅನುಷ್ಠಾನ ವಿಳಂಬವಾಗುವುದಕ್ಕೆ ಹಾಗೂ ಪ್ರವಾಸೋದ್ಯಮ ಕುಂಟಿತಗೊಳ್ಳುವುದಕ್ಕೆ ಉದಯಕುಮಾರ್ ಶೆಟ್ಟಿಯವರ ರಾಜಕೀಯ ಅವಕಾಶವಾದಿತನವೇ ಕಾರಣವಾಗಿದ್ದು, ಕಾರ್ಕಳದ ಜನತೆ ಈ ದ್ರೋಹವನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ.

ಪ್ರತಿಮೆ ವಿಚಾರದಲ್ಲಿ ದಾಖಲಾಗಿದ್ದ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿ ಕಾರ್ಕಳ ನ್ಯಾಯಾಲಯದಲ್ಲಿ ಸಲ್ಲಿಸಿದ ಆರೋಪಪಟ್ಟಿ ಉದಯಕುಮಾರ್ ಶೆಟ್ಟಿ ಇದುವರೆಗೆ ಮಾಡಿಕೊಂಡು ಬಂದಿದ್ದ ಟೂಲ್ ಕಿಟ್ ರಾಜಕಾರಣವನ್ನು ಬಟಾಬಯಲು ಮಾಡಿದೆ. ಪೈಬರ್ ಪ್ರತಿಮೆ ಎಂಬ ಉದಯಕುಮಾರ್ ಶೆಟ್ಟಿ ಆರೋಪ ಶುದ್ಧಸುಳ್ಳು ಎಂಬುದು ಸಾಬೀತಾಗುತ್ತಿದ್ದಂತೆ ಉದಯಕುಮಾರ್ ಶೆಟ್ಟಿ ಈಗ ಸಾರ್ವಜನಿಕ ಹಿತಾಸಕ್ತಿಯ ನಾಟಕ ಪ್ರಾರಂಭಿಸಿದ್ದಾರೆ.

ಪರಶುರಾಮ ಪ್ರತಿಮೆ ಹಾಗೂ ಥೀಂ ಪಾರ್ಕ್ ವಿಚಾರದಲ್ಲಿ ಶಾಸಕ ಸುನೀಲ್ ಕುಮಾರ್ ಅವರ ನಿಲುವು ಪ್ರಾರಂಭದಿಂದಲೂ ಸ್ಥಿರವಾಗಿಯೇ ಇದೆ. ಪ್ರಾರಂಭದಿಂದಲೂ ಯೋಜನೆಗೆ ಹಣ ಬಿಡುಗಡೆ ಮಾಡಿ ಪ್ರವಾಸೋದ್ಯಮಕ್ಕೆ ಮುಕ್ತಗೊಳಿಸಿ ಎಂದೇ ಅವರು ಆಗ್ರಹಿಸುತ್ತಿದ್ದಾರೆ. ಆದರೆ ಉದಯಕುಮಾರ್ ಶೆಟ್ಟಿ ಪದೇ ಪದೇ ನಿಲುವು ಬದಲಾಯಿಸಿದ್ದಾರೆ. ಪ್ರಕರಣ ದಾಖಲಿಸಿದ್ದು, ಪ್ರತಿಭಟನೆ ನಡೆಸಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದೆಲ್ಲಾ ಆದ ಮೇಲೆ ಈಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿರುವುದೂ ಅನುಮಾನಾಸ್ಪದ ನಡೆಯೇ ಆಗಿದೆ.

ಪರಶುರಾಮ ಪ್ರತಿಮೆ ಸ್ಥಾಪನೆಯಾಗಬೇಕೆಂದು‌ ಉದಯಕುಮಾರ್ ಶೆಟ್ಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಉದ್ದೇಶ ಶುದ್ದಿಯ ಬಗ್ಗೆ ಹಲವು ಅನುಮಾನಗಳಿವೆ. ಇವರಿಗೆ ಬೇಕಿರುವುದು ಪ್ರತಿಮೆಯೂ ಅಲ್ಲ, ಪ್ರವಾಸೋದ್ಯಮವೂ ಅಲ್ಲ. ರಾಜಕೀಯ ಲಾಭ ಹಾಗೂ ಮುಖ ಉಳಿಸಿಕೊಳ್ಳುವ ಪ್ತಯತ್ನ ಮಾತ್ರ ಇದರ ಹಿಂದೆ ಇದೆ.

ಪೈಬರ್ ಪ್ರತಿಮೆ ಎಂದು ಅಪಪ್ರಚಾರ ಮಾಡಿದ ಉದಯಕುಮಾರ್ ಶೆಟ್ಟಿ ಗ್ಯಾಂಗ್ ಥೀಂ ಪಾರ್ಕ್ ಗೆ ಕಳೆದ ಎರಡು ವರ್ಷದಿಂದ ನಯಾ ಪೈಸೆ ಹಣ ಬಿಡುಗಡೆಯಾಗುವುದಕ್ಕೆ ಬಿಟ್ಟಿಲ್ಲ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಧಕ್ಕೆಯಾಗಿರುವುದು ಮಾತ್ರವಲ್ಲ ಕರಾವಳಿ ಜನರ‌ ನಂಬಿಕೆಯ ಮೇಲೂ ಗದಾಪ್ರಹಾರ ಉಂಟಾಗಿದೆ.

ಈ ಪ್ರತಿಮೆ ನಿರ್ಮಾಣ ಕಾರ್ಯ ಮುಂದಿನ ಚುನಾವಣೆಯವರೆಗೂ ಹೀಗೆ ಸ್ಥಗಿತವಾಗಿರಬೇಕು.‌ಇದೊಂದು ಚುನಾವಣಾ ಸರಕಾಗಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮೂಲಕ ಹೇಳಿಕೆ ಕೊಡಿಸಿದ್ದ ಉದಯಕುಮಾರ್ ಶೆಟ್ಟಿ ಈಗ ಇದ್ದಕ್ಕಿದ್ದಂತೆ ಪ್ರತಿಮೆ ಪರ ನಿಲ್ಲುತ್ತಾರೆಂದರೆ ನಂಬಲು ಸಾಧ್ಯವೇ ? ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿಂದೆ ಕಾರ್ಕಳ ಕಾಂಗ್ರೆಸ್ ಮುಖಂಡರ ಹಿತಾಸಕ್ತಿ ಅಡಕವಾಗಿದ್ದು ಇಂಥ ಅವಕಾಶವಾದಿ ರಾಜಕಾರಣವನ್ನು ಪ್ರಜ್ಞಾವಂತ‌ ಜನತೆ ಯಾವ ಮುಲಾಜು ಇಲ್ಲದೇ ತಿರಸ್ಕರಿಸುತ್ತಾರೆಂಬ ನಂಬಿಕೆ ಇದೆ. ಪ್ರತಿಮೆ ಹಾಗೂ ಯೋಜನೆ ವಿಚಾರದಲ್ಲಿ ಅಪಪ್ರಚಾರ ನಡೆಸಿದ ಉದಯಕುಮಾರ್ ಶೆಟ್ಟಿ ಹಾಗೂ ಆತನ ಪಟಾಲಂ ವಿರುದ್ಧ ಸುಳ್ಳು ಸುದ್ದಿ ಹಾಗೂ ದ್ವೇಷ ಹಂಚಿಕೆಯ ಪ್ರಕರಣ ದಾಖಲಿಸಿ ಕಾಂಗ್ರೆಸ್ ಸರ್ಕಾರ ಜೈಲಿಗಟ್ಟಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷರಾದ ನವೀನ್‌ ನಾಯಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಡಿಕೇರಿ: ಸಂಪಾಜೆ ಹೆದ್ದಾರಿ ತಡೆಗೋಡೆಯಲ್ಲಿ ಭಾರಿ ಬಿರುಕು; 2018ರ ದುರಂತದ ನೆನಪು, ಜನರ ಸ್ಥಳಾಂತರ

ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಡಿಕೇರಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿದ್ದ ಬೃಹತ್ ತಡೆಗೋಡೆಯು ಬಿರುಕು ಬಿಟ್ಟಿದೆ

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ದೂರುದಾರರು ಗುರುತಿಸಿದ್ದ 6ನೇ ಸ್ಥಳದಲ್ಲಿ ಅಸ್ಥಿಪಂಜರ ಪತ್ತೆ

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂತಿಟ್ಟಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಶೇಷ ತನಿಖೆಯು (ಎಸ್.ಐ.ಟಿ) ಮಹತ್ವದ ಹಂತ ತಲುಪಿದೆ.

ರಿಷಬ್ ಶೆಟ್ಟಿಯವರ ಬಹುನಿರೀಕ್ಷಿತ ಹೊಸ ಯೋಜನೆ: ಪೋಸ್ಟರ್ ಲೋಕಾರ್ಪಣೆ, ಅಭಿಮಾನಿಗಳಲ್ಲಿ ಸಮ್ಮಿಶ್ರ ಭಾವನೆಗಳು

"ಕಾಂತಾರ-1" ಚಿತ್ರದ ಬಿಡುಗಡೆಯ ಸಿದ್ಧತೆಗಳಲ್ಲಿ ನಿರತರಾಗಿರುವ ನಟ ಹಾಗೂ ಚಲನಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಅವರು, ತಮ್ಮ ನೂತನ ಮಹತ್ವಾಕಾಂಕ್ಷೆಯ ಚಿತ್ರವೊಂದನ್ನು ಪ್ರಕಟಿಸಿದ್ದಾರೆ

ವಿಶ್ವಕರ್ಮ ಯುವತಿಗೆ ನ್ಯಾಯ: ಸಂತ್ರಸ್ತೆಯ ಸಂಧಾನಕ್ಕೆ ಪ್ರಭಾಕರ್ ಭಟ್, ಕಟೀಲ್ ಮೊರೆ ಹೋದ ವಿಶ್ವಕರ್ಮ ಮಹಾಸಭಾ

ಪುತ್ತೂರು ತಾಲೂಕಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಾದ ವಿಶ್ವಕರ್ಮ ಸಮುದಾಯದ ಯುವತಿ ಮತ್ತು ಆಕೆಯ ನವಜಾತ ಶಿಶುವಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷರಾದ ಕೆ.ಪಿ. ನಂಜುಂಡಿ ವಿಶ್ವಕರ್ಮ ಅವರು ಆಗಸ್ಟ್ 1ರ ಶುಕ್ರವಾರದಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.