spot_img

ಪಂಡಿತ್ ದೀನದಯಾಳ್ ಉಪಾಧ್ಯಾಯ ಜೀವನಾದರ್ಶ ಎಲ್ಲರಿಗೂ ಪ್ರೇರಣಾದಾಯಕ : ಕಿಶೋರ್ ಕುಮಾರ್ ಕುಂದಾಪುರ

Date:

spot_img

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರು ಭಾರತೀಯ ಜನತಾ ಪಾರ್ಟಿಗೆ ಬಹುದೊಡ್ಡ ಆದರ್ಶ ವ್ಯಕ್ತಿಯಾಗಿದ್ದಾರೆ. ಸಂಘಟನೆಗೆ ಭದ್ರ ಬುನಾದಿಯನ್ನು ಹಾಕಿಕೊಡುವಲ್ಲಿ ಅವರ ಸೇವೆ ಅನನ್ಯ. ಪಂಡಿತ್ ಜೀ ಅವರ ಬಲಿದಾನ ದಿನದಂದು ಅವರ ಉದಾತ್ತ ತತ್ವ ಸಿದ್ಧಾಂತಗಳನ್ನು ನೆನಪಿಸಿಕೊಂಡು ಅವರನ್ನು ಸ್ಮರಿಸುವುದು ಪಕ್ಷದ ಕಾರ್ಯಕರ್ತರ ಆದ್ಯ ಕರ್ತವ್ಯ. ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜೀವನಾದರ್ಶ, ಜೀವನ ಸ್ಫೂರ್ತಿ ಎಲ್ಲರಿಗೂ ಪ್ರೇರಣಾದಾಯಕವಾಗಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.

ಅವರು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸಮರ್ಪಣಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ನಿಧಿ ಸಮರ್ಪಿಸಿ ಮಾತನಾಡಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಜನ ಸಂಘದ ಸಂಸ್ಥಾಪಕರಲ್ಲೊಬ್ಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಸಾರ್ಥಕ ಬದುಕಿನ ವಿವಿಧ ಅವಿಸ್ಮರಣೀಯ ಘಟನೆಗಳನ್ನು ವಿಶ್ಲೇಷಿಸಿ ಅವರ ತತ್ವಾದರ್ಶಗಳು ಮತ್ತು ತ್ಯಾಗ, ಬಲಿದಾನದ ವಿಸ್ತ್ರತ ಮಾಹಿತಿಯನ್ನು ನೀಡಿ ಉಪನ್ಯಾಸವನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಪಕ್ಷದ ಪ್ರಮುಖರಾದ ರವಿ ಅಮೀನ್, ಮೋಹನ ಉಪಾಧ್ಯಾಯ, ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲಪಾಡಿ, ರಾಘವೇಂದ್ರ ಕುಂದರ್, ವಿಜಯಕುಮಾರ್ ಉದ್ಯಾವರ, ಶ್ರೀನಿಧಿ ಹೆಗ್ಡೆ, ದಿನೇಶ್ ಅಮೀನ್, ಜಗದೀಶ್ ಆಚಾರ್ಯ, ರುಡಾಲ್ಫ್ ಡಿಸೋಜ, ಟಿ.ಜಿ. ಹೆಗ್ಡೆ, ಶ್ಯಾಮಲಾ ಎಸ್. ಕುಂದರ್, ಪ್ರಿಯದರ್ಶಿನಿ ದೇವಾಡಿಗ, ಸುಮಿತ್ರಾ ಆರ್. ನಾಯಕ್, ವೀಣಾ ಎಸ್. ಶೆಟ್ಟಿ, ನಳಿನಿ ಪ್ರದೀಪ್ ರಾವ್, ಕಲ್ಪನಾ ಸುಧಾಮ, ದೇವೇಂದ್ರ ಪ್ರಭು, ಡಾ! ವಿಜಯೇಂದ್ರ ವಸಂತ್, ಡಾ! ವಿದ್ಯಾಧರ ಶೆಟ್ಟಿ, ಮಧುಕರ ಮುದ್ರಾಡಿ, ಅಶೋಕ್ ನಾಯ್ಕ್, ಮಂಜುನಾಥ್ ಮಣಿಪಾಲ, ರಶ್ಮಿತಾ ಬಿ. ಶೆಟ್ಟಿ, ಶೋಭಾ ಶೆಟ್ಟಿ, ಸುಮಾ ಶೆಟ್ಟಿ, ಪ್ರೀತಿ, ವೆಂಕಟರಮಣ ಕಿದಿಯೂರು, ರಾಜೇಂದ್ರ ಪಂದುಬೆಟ್ಟು, ಆನಂದ್ ಸುವರ್ಣ, ಕಿಶೋರ್ ಕರಂಬಳ್ಳಿ, ಶ್ರೀವತ್ಸ, ಚಂದ್ರಶೇಖರ ಪ್ರಭು, ಶಿವರಾಮ್ ಕಾಡಿಮಾರ್ ಮುಂತಾದವರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇನ್ನೋನೆಕ್ಸ್ಟ್ ಏರಿಯನ್ ಭಾರತ್ ಅಸ್ಟ್ರಾನೋಮಿ ಎಕ್ಸ್‌ಪೋ 1.0ಬಾಹ್ಯಾಕಾಶದ ಕೌತುಕ ಕಂಡು ಬೆರಗಾದ ವಿದ್ಯಾರ್ಥಿಗಳು

ಇನ್ನೋನೆಕ್ಸ್ಟ್ ಮೈಂಡ್ ಪ್ರೈವೇಟ್ ಲಿಮಿಟೆಡ್ (ಏರಿಯನ್ ಭಾರತ್) ಆಶ್ರಯದಲ್ಲಿ ಗುರುವಾರ ನಡೆದ ಆಸ್ಟ್ರಾನೊಮಿ ಎಕ್ಸ್‌ಪೋ 1.0ರ ಆವೃತ್ತಿ ನಗರದ ಮಂತ್ರಿ ಮಾಲ್‌ನ ಐನಾಕ್ಸ್‌ ಚಿತ್ರಮಂದಿರಲ್ಲಿ ಗುರುವಾರ ಉದ್ಘಾಟನೆಗೊಂಡಿತು.

ರೋಬೋಟ್ ‘ಶುವಾಂಗ್ ಶುವಾಂಗ್’ ಪದವಿ ಪಡೆದ ವಿಚಿತ್ರ ಘಟನೆ: ಚೀನಾದಲ್ಲಿ ತಾಂತ್ರಿಕ ಕ್ರಾಂತಿ!

ಚೀನಾದ ಫುಜಿಯನ್ ಪ್ರಾಂತ್ಯದ ಶುವಾನ್ಶಿ ಹೈಸ್ಕೂಲ್‌ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭವೊಂದು ವಿಶಿಷ್ಟ ಘಟನೆಗೆ ಸಾಕ್ಷಿಯಾಗಿದೆ. "ಶುವಾಂಗ್ ಶುವಾಂಗ್" ಹೆಸರಿನ ಮಾನವಾಕಾರದ ರೋಬೋಟ್ ಒಂದು ಸಮಾರಂಭದಲ್ಲಿ ಭಾಗವಹಿಸಿ, ವೇದಿಕೆಗೆ ನಡೆದು, ಶಿಕ್ಷಕರಿಂದ ಕೈಚಲಾವಣೆ ಮೂಲಕ ಪ್ರಮಾಣಪತ್ರ ಸ್ವೀಕರಿಸಿತು.

ಹಲಸಿನ ಹಣ್ಣು ತಿಂದು ಬ್ರೀಥಲೈಸರ್‌ನಲ್ಲಿ ಫೇಲ್: ಕೇರಳದಲ್ಲಿ ಅಚ್ಚರಿಯ ಘಟನೆ!

ಮದ್ಯಪಾನ ಮಾಡದಿದ್ದರೂ, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮೂವರು ಬಸ್ ಚಾಲಕರು ಬ್ರೀಥಲೈಸರ್ ಪರೀಕ್ಷೆಯಲ್ಲಿ ವಿಫಲರಾಗಿ, ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿರುವ ವಿಚಿತ್ರ ಘಟನೆ ವರದಿಯಾಗಿದೆ.

ದಿನ ವಿಶೇಷ – ವಿಶ್ವ ಐವಿಎಫ್ ದಿನ

ಈ ದಿನವು ಸಂತಾನೋತ್ಪತ್ತಿ ವಿಜ್ಞಾನದಲ್ಲಿನ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ ಮತ್ತು ಬಂಜೆತನದಿಂದ ಬಳಲುತ್ತಿರುವ ಅಸಂಖ್ಯಾತ ದಂಪತಿಗಳಿಗೆ ಆಶಯದ ದಾರಿಯನ್ನು ತೆರೆದ ಐವಿಎಫ್ ತಂತ್ರಜ್ಞಾನದ ಪ್ರಗತಿಯನ್ನು ಸ್ಮರಿಸುತ್ತದೆ