
ಪಂಚನಬೆಟ್ಟು ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಹಳೆ ವಿದ್ಯಾರ್ಥಿ, ಪೋಷಕರ ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯರ ಕ್ರೀಡಾಕೂಟ ರವಿವಾರ ನಡೆಯಿತು.
ಶಾಲೆಯ ಟ್ರಸ್ಟಿ ಸಂತೋಷ್ ಕಾಮತ್ ಅಧ್ಯಕ್ಷತೆ ವಹಿಸಿದರು.
ನಿತ್ಯಾನಂದ ಶೆಟ್ಟಿಗಾರ್ ಉದ್ಘಾಟಿಸಿ ಶುಭ ಹಾರೈಸಿದರು.
ಟ್ರಸ್ಟ್ ನ ಸದಸ್ಯರು, ಶಾಲಾಡಳಿತ ಮಂಡಳಿ ಸದಸ್ಯರು, ಮುಖ್ಯಶಿಕ್ಷಕರು, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ನಾಯಕ್, ಸಮಿತಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಳೆ ಸಂಘದ ಅಧ್ಯಕ್ಷ ಸತೀಶ್ ಬಿ. ಶೆಟ್ಟಿಗಾರ್ ಸ್ವಾಗತಿಸಿ ವಂದಿಸಿದರು. ಶಾಲಾ ಉಸ್ತುವಾರಿ ನರಸಿಂಹ ನಾಯಕ್ ನಿರೂಪಿಸಿದರು.