spot_img

ಭಾರತದ ಪ್ರತಿದಾಳಿಗೆ ಪಾಕ್ ತತ್ತರ! ಶಹಬಾಜ್ ಶರೀಫ್ ಎಲ್ಲಿ ಎಂಬ ಪ್ರಶ್ನೆ

Date:

ಹೊಸದಿಲ್ಲಿ/ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರ ರಹಸ್ಯ ಸ್ಥಾನದ ಕುರಿತು ಅನೇಕ ಅನುಮಾನಗಳು ಬೆಳೆಯುತ್ತಿವೆ. ಗುರುವಾರ ರಾತ್ರಿ ಶಹಬಾಜ್ ಅವರ ನಿವಾಸದ ಸಮೀಪ ಸ್ಫೋಟ ಸಂಭವಿಸಿದ್ದ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಂದ ಅವರನ್ನು ರಹಸ್ಯ ಬಂಕರ್‌ಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಭಾರಿ ಚರ್ಚೆಗೆ ಕಾರಣವಾಗಿದೆ.

ಇತ್ತ ಪಾಕಿಸ್ತಾನದಿಂದ ನಡೆದ ಡ್ರೋನ್ ದಾಳಿಗೆ ತಕ್ಷಣ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ ಗಡಿ ಪ್ರದೇಶಗಳಲ್ಲಿ ಪ್ರಚಂಡ ಪ್ರತಿದಾಳಿ ನಡೆಸಿದ್ದು, ಹಲವು ಪಾಕಿಸ್ತಾನ ಗುರಿಗಳನ್ನು ನಿಖರವಾಗಿ ನಾಶಪಡಿಸಿದೆ. ಇದರಿಂದ ಪಾಕಿಸ್ತಾನದ ಸೇನೆ ಮಾತ್ರವಲ್ಲದೆ ಜನತೆಯಲ್ಲಿಯೂ ತೀವ್ರ ಆತಂಕ ಶುರುವಾಗಿದೆ.

ಈ ನಡುವೆಯೇ ಶಹಬಾಜ್ ಶರೀಫ್ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡದೆ ನಾಪತ್ತೆಯಾಗಿ ಕುಳಿತಿರುವುದು, ಪಾಕ್ ಆಂತರಿಕ ವ್ಯವಸ್ಥೆಯ ಸ್ಥಿರತೆಗೆ ಪ್ರಶ್ನಿಸುವಂತಾಗಿದೆ. ಅವರು ಸೇನೆ ಹಾಗೂ ರಾಷ್ಟ್ರದ ಭದ್ರತೆಯ ಕುರಿತು ಸಭೆಗಳನ್ನು ನಡೆಸುತ್ತಿದ್ದಾರೆ ಎಂಬುದು ಕೇವಲ ಊಹಾಪೋಹವಾಗಿದ್ದು ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಇನ್ನು ಪಾಕಿಸ್ತಾನದ ರಕ್ಷಣಾ ಸಚಿವ ಖಾಜಾ ಆಸಿಫ್ ಅವರು, ಭಾರತದ ಡ್ರೋನ್ ದಾಳಿಗಳನ್ನು ತಡೆಯದಿರುವ ಕುರಿತು ನೀಡಿರುವ ಸ್ಪಷ್ಟನೆ ಇನ್ನಷ್ಟು ಗೊಂದಲ ಹುಟ್ಟಿಸಿದೆ. “ಭಾರತವು ನಮ್ಮ ಪ್ರಮುಖ ಸ್ಥಳಗಳನ್ನು ಪತ್ತೆಹಚ್ಚಬಾರದು ಎಂಬ ಕಾರಣಕ್ಕೆ ಡ್ರೋನ್ ಗಳನ್ನು ತಡೆಯಲಿಲ್ಲ” ಎಂಬ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ತಮ್ಮ ಹೇಳಿಕೆಯ ಹಿಂದೆ ತಾಂತ್ರಿಕ ಕಾರಣಗಳಿವೆ ಎಂದರೂ ಅವನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಇದರಿಂದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೆ ಗುರಿಯಾಗಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಪಾಕಿಸ್ತಾನ ಸರ್ಕಾರದ ನಿರ್ಧಾರಗಳ ಸ್ಪಷ್ಟತೆ, ಪ್ರಧಾನಿಯ ಅನುಪಸ್ಥಿತಿ ಮತ್ತು ಸೇನೆಯ ಸಿದ್ಧತೆ ಈ ಎಲ್ಲವೂ ಪಾಕಿಸ್ತಾನದಲ್ಲಿ ರಾಜಕೀಯ ಗೊಂದಲವನ್ನು ತೀವ್ರಗೊಳಿಸಿರುವುದಂತೂ ಸ್ಪಷ್ಟವಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನೆಲ್ಯಾಡಿಯಲ್ಲಿ ಮನೆಯ ಅಂಗಳದಲ್ಲೇ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ

ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಹೊರ ಠಾಣಾ ವ್ಯಾಪ್ತಿಯ ಮಾದೇರಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿಯ ವೇಳೆ ಭಯಾನಕ ಕೊಲೆ ಘಟನೆ ಸಂಭವಿಸಿದೆ.

ಕಾಶ್ಮೀರ ಭಾರತದ ಅವಿಭಾಜ್ಯ ಭಾಗ – ಸಿಎನ್‌ಎನ್ ತಪ್ಪು ಮಾಹಿತಿಗೆ ಭಾರತದ ರಾಯಭಾರಿಯಿಂದ ತೀವ್ರ ಪ್ರತಿಕ್ರಿಯೆ

ಅಮೆರಿಕದ ಸಿಎನ್‌ಎನ್ (CNN) ಸುದ್ದಿ ವಾಹಿನಿಯಲ್ಲಿ ಜಮ್ಮು-ಕಾಶ್ಮೀರದ ಕುರಿತು ನೀಡಲಾದ ತಪ್ಪು ಮಾಹಿತಿಗೆ ಭಾರತದ ರಾಯಭಾರಿ ವಿನಯ್ ಕ್ವಾತ್ರಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದ್ವೇಷ ಪ್ರಚೋದಕ ಪೋಸ್ಟ್ ಪ್ರಕರಣ: ಮಂಗಳೂರಿನಲ್ಲಿ ‘beary_royal_nawab’ ಇನ್‌ಸ್ಟಾಗ್ರಾಂ ಪುಟ ನಿಷ್ಕ್ರಿಯ

ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ವಿಷಯ ಹರಡಿದ ಆರೋಪದ ಮೇಲೆ ‘beary_royal_nawab’ ಎಂಬ ಇನ್‌ಸ್ಟಾಗ್ರಾಂ ಪುಟವನ್ನು ನಿಷ್ಕ್ರಿಯಗೊಳಿಸಲಾಗಿದೆ.

ಗಡಿ ಉದ್ವಿಗ್ನತೆ ನಡುವೆ ಬ್ಯಾಂಕಿಂಗ್ ಸೇವೆ ನಿರಂತರವಾಗಿರಲಿ: ಬ್ಯಾಂಕುಗಳಿಗೆ ನಿರ್ಮಲಾ ಸೀತಾರಾಮನ್ ನಿರ್ದೇಶನ

ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಎಚ್ಚರಿಕೆಯ ಸೂಚನೆ ನೀಡಲಾಗಿದೆ.