ಪಹಲ್ಗಾಮ್ ದಾಳಿ ಪ್ರಕರಣ : ಪಾಕಿಸ್ತಾನ ಸೇನೆಯ ಮಾಜಿ ಪ್ಯಾರಾ ಕಮಾಂಡೋ ಹಾಶಿಮ್ ಮೂಸಾ ಪ್ರಮುಖ ಶಂಕಿತ ಭಯೋತ್ಪಾದಕ

Date:

spot_img

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನ ಸೇನೆಯ ವಿಶೇಷ ಪಡೆಗಳ (ಎಸ್‌ಎಸ್‌ಜಿ) ಮಾಜಿ ಕಮಾಂಡೋ ಹಾಶಿಮ್ ಮೂಸಾ ಇರಬಹುದೆಂಬ ಅನುಮಾನವನ್ನು ಭದ್ರತಾ ಸಂಸ್ಥೆಗಳು ವ್ಯಕ್ತಪಡಿಸಿವೆ. ಲಷ್ಕರ್-ಎ-ತೈಬಾ (LeT) ಸಂಘಟನೆಯ ಪ್ರಮುಖವಾಗಿ ಮೂಸಾ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದ್ದು, ಅವನು ಪಾಕಿಸ್ತಾನ ಸೇನೆಯಿಂದ ವಜಾಗೊಳ್ಳುವ ಮುನ್ನ ಪ್ಯಾರಾ ಕಮಾಂಡೋ ಆಗಿದ್ದನು.

ಪಾಕಿಸ್ತಾನದ ಸೇನೆಯಿಂದ ಹೊರಗಾದ ನಂತರ, ಮೂಸಾ 2023ರ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ನುಸುಳಿ ಬಂದು ಲಷ್ಕರ್‌ ಸಂಘಟನೆಯ ಕಾಶ್ಮೀರ ಕಾರ್ಯಾಚರಣೆಗಳಲ್ಲಿ ತೊಡಗಿದ್ದ. ಮುಂಬೈ ಶೈಲಿಯ ತರಬೇತಿಯನ್ನು ಪಡೆದ ಈ ಕಮಾಂಡೋ, ಅಸಾಂಪ್ರದಾಯಿಕ ಯುದ್ಧ ಮತ್ತು ರಹಸ್ಯ ಕಾರ್ಯಾಚರಣೆಗಳಲ್ಲಿ ಪರಿಣತಿ ಹೊಂದಿದ್ದಾನೆ.

ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ತನಿಖಾ ಅಧಿಕಾರಿಗಳು ಈಗಾಗಲೇ ಮೂಸಾ ಸೇರಿದಂತೆ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಗುರುತಿಸಿದ್ದು, ಉಳಿದವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಯುತ್ತಿದೆ. ದಾಳಿಯಲ್ಲಿ ಸ್ಥಳೀಯರಾದ ಆದಿಲ್ ಥೋಕರ್ ಮತ್ತು ಆಸಿಫ್ ಶೇಖ್‌ ಕೂಡ ಭಾಗಿಯಾಗಿದ್ದರೆಂದು ತಿಳಿದುಬಂದಿದೆ. ಇದರಿಂದ ಲಷ್ಕರ್ ಸಂಘಟನೆಗೆ ಸ್ಥಳೀಯ ಬೆಂಬಲವೂ ಇರುವುದು ಸ್ಪಷ್ಟವಾಗಿದೆ.

ಈ ದಾಳಿಯಲ್ಲಿ ಕನಿಷ್ಠ 26 ಮಂದಿ ಸಾವಿಗೀಡಾಗಿದ್ದು, ಹೆಚ್ಚಿನವರು ಪ್ರವಾಸಿಗರಾಗಿದ್ದರು. ಹಲವರು ಗಂಭೀರವಾಗಿ ಗಾಯಗೊಂಡಿದ್ದರು. “2019ರ ಪುಲ್ವಾಮಾ ದಾಳಿಯ ನಂತರದ ಅತ್ಯಂತ ಭೀಕರ ಘಟನೆ ಎನ್ನಲಾಗಿದೆ.”

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಗ್ಯಾಜೆಟ್ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಶಿಯೋಮಿಯ ಪವರ್‌ಫುಲ್ 67W ಪವರ್ ಬ್ಯಾಂಕ್

ಶಿಯೋಮಿ ಭಾರತದಲ್ಲಿ ಹೊಸ 20000mAh ಪವರ್ ಬ್ಯಾಂಕ್ 5i ಬಿಡುಗಡೆ ಮಾಡಲಿದೆ. 67W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ ಈ ಸಾಧನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟಿ ಐಶ್ವರ್ಯ ಸಿಂಧೋಗಿಗೆ ಸೈಬರ್ ಕಿರುಕುಳ: ಪೊಲೀಸ್ ದೂರು

ನಟಿ ಐಶ್ವರ್ಯ ಸಿಂಧೋಗಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮೂಲಕ ಕಿರುಕುಳ ನೀಡಿದ ಕಿಡಿಗೇಡಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ರಾಷ್ಟ್ರೀಯ ಬಿ ಸಮ್‌ಒನ್ ದಿನ

ಜುಲೈ 21 ರ ರಾಷ್ಟ್ರೀಯ ಬಿ ಸಮ್‌ಒನ್ ದಿನವು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಅವರ ರಕ್ಷಣೆಗೆ ವಿಶ್ವಾಸಾರ್ಹ ವ್ಯಕ್ತಿಯಾಗಲು ವಯಸ್ಕರಿಗೆ ಕರೆ ನೀಡುತ್ತದೆ.

ಅಡುಗೆಮನೆಯಲ್ಲೇ ಇದೆ ಮ್ಯಾಜಿಕ್ ಲಿಕ್ವಿಡ್: ಅಕ್ಕಿ ತೊಳೆದ ನೀರನ್ನು ಅಪ್ಪಿತಪ್ಪಿಯೂ ಚೆಲ್ಲಬೇಡಿ

ಅಕ್ಕಿ ತೊಳೆದ ನೀರು ಮತ್ತು ಗಂಜಿ ನೀರಿನಿಂದ ಪಡೆಯಬಹುದಾದ ಅದ್ಭುತ ಆರೋಗ್ಯ ಹಾಗೂ ಸೌಂದರ್ಯ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.