spot_img

ನಮ್ಮ ಪ್ರಧಾನಿ ನಮ್ಮ ಹೆಮ್ಮೆ.ಉಗ್ರರ ವಿರುದ್ಧದ ಆಪರೇಷನ್ ಸಿಂಧೂರ ಶ್ಲಾಘನೀಯ: ರಮಿತಾ ಶೈಲೇಂದ್ರ ಕಾರ್ಕಳ

Date:

ಸಿಂಧೂರ ಹೇಳುವಂತದ್ದು ಭಾರತೀಯ ಮಹಿಳೆಯರ ಮುತ್ತೈದೆ ಸೌಭಾಗ್ಯ.

15 ದಿನಗಳ ಹಿಂದೆ ಪಹಲ್ಗಾಮನಲ್ಲಿ ಪ್ರವಾಸಕ್ಕೆ ತೆರಳಿದ್ದ ಭಾರತೀಯರ ಮೇಲೆ ನಡೆದಿರುವ ದಾಳಿಯಿಂದಾಗಿ 26 ತಾಯಂದಿರು ವಿಧವೆ ಆಗುವಂತಹ ಸನ್ನಿವೇಶ ಎದುರಾಗಿದ್ದು ಇದು ನಮ್ಮ ನೆರೆಯ ರಾಷ್ಟ್ರವಾಗಿರುವ ಪಾಕಿಸ್ತಾನದ ಷಡ್ಯಂತರವೆಂಬುವಂತದ್ದು ನಾಚಿಕೆಯ ವಿಷಯವಾಗಿತ್ತು. ಇಡೀ ಭಾರತದ ಜನತೆಗೆ ಇದು ಆತಂಕ ಕೆಡಿಸುವ ವಿಷಯವಾಗಿದ್ದರೂ ಸಮರ್ಥ ನಾಯಕನಿದ್ದರೆ ಪ್ರಜೆಗಳ ಹಿತಾಶಕ್ತಿಯನ್ನು ಬಯಸುವಂತಹ ಪ್ರಧಾನಿ ಇದಕ್ಕೆ ಪ್ರತ್ಯುತ್ತರವನ್ನು ನೀಡುವ ಮೂಲಕ ಸಿಂಧೂರ ಕಳಕೊಂಡವರ ಸಹೋದರನಾಗಿ ನಿಂತು ಭಾರತೀಯ ಸೇನೆಯಿಂದ ಉತ್ತರ ಕೊಟ್ಟಿದ್ದಾರೆ. ಇಡೀ ಭಾರತೀಯರು ಅಲ್ಲದೆ ಪ್ರಪಂಚದ ಇತರ ರಾಷ್ಟ್ರಗಳು ಭಾರತದತ್ತ ಒಮ್ಮೆ ತಿರುಗಿ ನೋಡುವಂತೆ ಮಾಡಿದ್ದಂತು ಸುಳ್ಳಲ್ಲ, ಪಾಕ್ ನ ಉಗ್ರರನ್ನು ಸದೆಬಡೆಯುವ ಮೂಲಕ ಭಾರತೀಯ ಸೇನೆಯ ಶೌರ್ಯವನ್ನು ತೋರಿಸಿಕೊಟ್ಟರೆ ,ಇನ್ನೊಂದು ಕಡೆಯಲ್ಲಿ ಭಾರತೀಯ ಹೆಣ್ಣುಮಕ್ಕಳ ತಂಟೆಗೆ ಬಂದಲ್ಲಿ ಅವರ ಸ್ಥಿತಿಗತಿಗಳು ಏನಾಗುತ್ತದೆ ಎಂಬುವಂತ ಪರಂಪರೆಯನ್ನು ಪುನರ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಭಾರತದ ಹೆಣ್ಣು ಮಕ್ಕಳ ನಾರಿ ಶಕ್ತಿಯನ್ನು ಯುದ್ಧದ ಮಾಹಿತಿ ಪತ್ರಿಕಾಗೋಷ್ಠಿಯಲ್ಲಿ ಸಿಂಹಿಣಿಯರ ಮೂಲಕ ಹೇಳಿಸಿರುವಂತದ್ದು ಭಾರತದ ಪ್ರತಿಯೊಂದು ಮಹಿಳೆಯು ಹೆಮ್ಮೆಪಡುವಂತಹ ವಿಷಯ. ನಮ್ಮ ಆಯ್ಕೆಗಳು ಸ್ಪಷ್ಟವಾಗಿದ್ದಲ್ಲಿ ಒಬ್ಬ ಸಮರ್ಥ ನಾಯಕ ದೇಶವನ್ನಾಳಲು ಸಾಧ್ಯ.

ರಮಿತಾ ಶೈಲೇಂದ್ರ ಕಾರ್ಕಳ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಾವಣಗೆರೆಯಲ್ಲಿ ರಾಜ್ಯಮಟ್ಟದ “ಕುಪ್ಮಾ” ಸಮಾವೇಶ

ಕುಪ್ಮಾದ ರಾಜ್ಯಮಟ್ಟದ ದ್ವಿತೀಯ ಸಮಾವೇಶವು 2025ರ ಸೆಪ್ಟೆಂಬರ್ ತಿಂಗಳಲ್ಲಿ ದಿನಾಂಕ 12 ಮತ್ತು 13ರಂದು 'ಎಸ್. ಎಸ್. ಮಲ್ಲಿಕಾರ್ಜುನ ಕಲ್ಚರಲ್ ಸೆಂಟರ್, ಬಿಐಇಟಿ, ದಾವಣಗೆರೆ, ಇಲ್ಲಿ ನಡೆಯಲಿದೆ.

ನೇಪಾಳದಲ್ಲಿ ಭುಗಿಲೆದ್ದ ಪ್ರತಿಭಟನೆ: ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ

ನೇಪಾಳದಲ್ಲಿ ಭುಗಿಲೆದ್ದ ಭ್ರಷ್ಟಾಚಾರ ವಿರೋಧಿ ಮತ್ತು ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದ ಹಿನ್ನೆಲೆಯಲ್ಲಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದ್ದಾರೆ.

ಆಲ್ ಇಂಡಿಯಾ ಕರಾಟೆ ಸ್ಪರ್ಧಾಕೂಟದಲ್ಲಿ ಮಿಂಚಿದ ನಚಿಕೇತ ವಿದ್ಯಾಲಯ : ಒಟ್ಟು 6 ಪದಕಗಳ ಸಾಧನೆ

ಆಲ್ ಇಂಡಿಯಾ ಕರಾಟೆ ಸ್ಪರ್ಧಾಕೂಟದಲ್ಲಿ ನಚಿಕೇತ ವಿದ್ಯಾಲಯದ ವಿದ್ಯಾರ್ಥಿಗಳು ಒಟ್ಟು 6 ಪದಕಗಳನ್ನು ಪಡೆದಿರುತ್ತಾರೆ.

‘ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆ’: ಶಾಸಕ ಸಂಗಮೇಶ್ವರ್

ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ನೀಡಿದ ಹೇಳಿಕೆಯೊಂದು ಸಂಚಲನ ಮೂಡಿಸಿದೆ. ಮುಸ್ಲಿಂ ಸಮುದಾಯದ ಪ್ರೀತಿಗೆ ಪಾತ್ರನಾಗಿರುವ ತಾನು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆಯಿದೆ ಎಂದು ಅವರು ಹೇಳಿದ್ದಾರೆ.