
ಬೆಂಗಳೂರು: ಮೆಟ್ರೋ ದರ ಹೆಚ್ಚಳದ ಬಿಸಿ ನೇರವಾಗಿ ಪ್ರಯಾಣಿಕರಿಗೆ ತಟ್ಟಿದ್ದು, 6 ಲಕ್ಷಕ್ಕೂ ಹೆಚ್ಚು ಜನ ಮೆಟ್ರೋ ಪ್ರಯಾಣ ತ್ಯಜಿಸಿದ್ದಾರೆ. ಫೆಬ್ರವರಿ 9 ರಿಂದ ದರ ಹೆಚ್ಚಳ ಜಾರಿಗೆ ಬಂದಿದ್ದು,ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ಮಾರ್ಗಗಳಲ್ಲಿ ದರವನ್ನು ಸ್ವಲ್ಪ ಕಡಿಮೆ ಮಾಡಲಾಯಿತಾದರೂ, ಜನರ ಅಸಮಾಧಾನ ಇನ್ನೂ ಕಡಿಮೆಯಾಗಿಲ್ಲ.
ಬಿಎಂಆರ್‌ಸಿಎಲ್ ನೀಡಿದ ಅಂಕಿಅಂಶಗಳ ಪ್ರಕಾರ, ಪರಿಷ್ಕೃತ ದರ ಜಾರಿಗೆ ಬಂದ ನಂತರ (ಫೆಬ್ರವರಿ.10 ರಿಂದ ಫೆಬ್ರವರಿ.14 ರ ವರೆಗೆ ) ಮೆಟ್ರೋ ದಿನನಿತ್ಯದ ಸರಾಸರಿ ಪ್ರಯಾಣಿಕರ ಸಂಖ್ಯೆ 7.72 ಲಕ್ಷಕ್ಕೆ ಕುಸಿದಿದೆ. ಇದಕ್ಕಿಂತ ಹಿಂದಿನ ವಾರ (ಫೆಬ್ರವರಿ.4 ರಿಂದ ಫೆಬ್ರವರಿ.8 ರ ವರೆಗೆ ) ಈ ಸಂಖ್ಯೆಯು 8.62 ಲಕ್ಷವಾಗಿತ್ತು. ಇದು ದರ ಹೆಚ್ಚಳದ ಪರಿಣಾಮ ಮೆಟ್ರೋ ಜನಪ್ರಿಯತೆ ಕಡಿಮೆಯಾಗುತ್ತಿರುವುದನ್ನು ತೋರಿಸುತ್ತದೆ.
ಪ್ರಯಾಣದ ಖರ್ಚು ಹೆಚ್ಚಾದ ಹಿನ್ನೆಲೆಯಲ್ಲಿ ನಿತ್ಯ ಮೆಟ್ರೋ ಅವಲಂಬಿಸಿದ್ದ ಪ್ರಯಾಣಿಕರು ಇದೀಗ ಬಸ್, ಟೂ ವೀಲರ್ ಹಾಗೂ ಶೇರ್ ರೈಡಿಂಗ್ ಗಳನ್ನು ಆಯ್ಕೆ ಮಾಡುತ್ತಿದ್ದಾರೆ.