
ಕಾರ್ಕಳ: ಕಾರ್ಕಳ ತಾಲೂಕು ರಾಜ್ಯದ ಮೊತ್ತಮೊದಲ ಒಡಿಎಫ್ ಪ್ಲಸ್ (ಬಯಲು ಬಹಿರ್ದೆಸೆ ಮುಕ್ತ, ಸುಸ್ಥಿರ ಮಾದರಿ ಗ್ರಾಮ) ತಾಲೂಕಾಗಿ ಘೋಷಣೆಯಾಗಿದೆ. ಹೆಬ್ರಿ ತಾಲೂಕು ದ್ವಿತೀಯ ಸ್ಥಾನ ಪಡೆದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ನಿರ್ಧರಿಸಿದ ಶೌಚಾಲಯ ಬಳಕೆ, ತ್ಯಾಜ್ಯ ನಿರ್ವಹಣೆ, ಮತ್ತು ಸ್ವಚ್ಛತಾ ಮಾನದಂಡಗಳನ್ನೆಲ್ಲಾ ಪೂರೈಸುವ ಮೂಲಕ ಕಾರ್ಕಳ 27 ಗ್ರಾಮ ಪಂಚಾಯತ್ಗಳ 38 ಗ್ರಾಮಗಳೊಂದಿಗೆ ಮುಂಚೂಣಿಯಲ್ಲಿದೆ. ಹೆಬ್ರಿ 9 ಗ್ರಾಮ ಪಂಚಾಯತ್ಗಳ 16 ಗ್ರಾಮಗಳೊಂದಿಗೆ ಎರಡನೇ ಸ್ಥಾನ ಗಳಿಸಿದೆ.
ಸ್ವಚ್ಛತೆಯಲ್ಲಿ ಮುಂಚೂಣಿಗೆ:
ಬಚ್ಚಲುಮನೆ ಮತ್ತು ಶೌಚಾಲಯ ನೀರು ಪುನರ್ಬಳಕೆ, ಸಾರ್ವಜನಿಕ ಶೌಚಾಲಯ ನಿರ್ಮಾಣ, ಕುಕ್ಕುಂದೂರಿನಲ್ಲಿ ಮಲ ತ್ಯಾಜ್ಯ ಘಟಕ, ನಿಟ್ಟೆಯಲ್ಲಿ ಎಂಆರ್ಎಫ್ ಘಟಕ ಈ ಸಾಧನೆಗೆ ಕಾರಣವಾಗಿದೆ.
ಉಡುಪಿ ಜಿಲ್ಲೆ ಸ್ವಚ್ಛ ಭಾರತ್ ಯೋಜನೆಯಡಿ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಕಳ ಮತ್ತು ಹೆಬ್ರಿ ಒಡಿಎಫ್ ಪ್ಲಸ್ ಪಟ್ಟ ಪಡೆಯುವುದರಲ್ಲಿ ಮುನ್ನಡೆ ಸಾಧಿಸಿವೆ.