
ಉಡುಪಿ: ಮೊಬೈಲ್‌ಗೆ ಬಂದ ಅಪರಿಚಿತ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಬೀರ್‌ಪಾಲ್ ಸಿಂಗ್ ನಾಯಕ್ ಅವರು ಈ ವಂಚನೆಗೆ ಬಲಿಯಾದವರು.
ಬೀರ್‌ಪಾಲ್ ಸಿಂಗ್ ಅವರ ಮೊಬೈಲ್‌ಗೆ ಫಾರ್ವಾರ್ಡ್ ಆದ ಲಿಂಕ್ ಮೆಸೇಜ್ ಬಂದಿತ್ತು. ಅವರು ಅದನ್ನು ಕ್ಲಿಕ್ ಮಾಡಿದಾಗ, ಇ-ಸಿಮ್ ಖರೀದಿಯಾಗಿರುವ ಬಗ್ಗೆ ಜಿಯೋ ಕಂಪೆನಿಯಿಂದ ಒಂದು ಸಂದೇಶ ಬಂದಿದೆ. ಇದರ ಬೆನ್ನಲ್ಲೇ ಅವರ ಮೊಬೈಲ್ ಹ್ಯಾಕ್ ಆಗಿರುವುದಾಗಿ ತಿಳಿದುಬಂದಿದೆ.
ನಂತರ ಅವರು ಕೆನರಾ ಬ್ಯಾಂಕ್‌ಗೆ ಹೋಗಿ ತಮ್ಮ ಖಾತೆಯನ್ನು ಪರಿಶೀಲಿಸಿದಾಗ, ಅದರಿಂದ ರೂ. 3,51,400 ವಿವಿಧ ಖಾತೆಗಳಿಗೆ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.