spot_img

ಸ್ಲಾಬ್ ಪರಿಶೀಲನೆ ವೇಳೆ ಕ್ರೇನ್ ತೊಟ್ಟಿಲಿನಿಂದ ಆಯ ತಪ್ಪಿ ಬಿದ್ದು ಓರ್ವನ ಸಾವು, ಮಹಿಳೆ ಗಂಭೀರ

Date:

spot_img

ಉಡುಪಿ : ಉಡುಪಿಯ ಕೋರ್ಟ್ ಹಿಂಭಾಗದ ಲೋಕೋಪಯೋಗಿ ಇಲಾಖೆ (PWD) ಕಚೇರಿ ಬಳಿ ನಡೆದ ಕ್ರೇನ್ ದುರ್ಘಟನೆ ಒಂದರಲ್ಲಿ ಹಿರಿಯ ನಾಗರಿಕರು ಸಾವಿಗೀಡಾಗಿದ್ದು, ಜೊತೆಗೆ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಫ್ರಾನ್ಸಿಸ್ ಫುರ್ಟಾಡೊ (65) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಶಾರದಾ (35) ಎಂಬ ಕೆಲಸದಾಕೆಯನ್ನು ತಕ್ಷಣವೇ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವಿವರಗಳ ಪ್ರಕಾರ, ಫ್ರಾನ್ಸಿಸ್ ಫುರ್ಟಾಡೊ ಅವರು ತಮ್ಮ ಸಹೋದರನ ಮನೆಯಲ್ಲಿ ಸ್ಲ್ಯಾಬ್ ಸೋರಿಕೆಯನ್ನು ಪರಿಶೀಲಿಸಲು ಕ್ರೇನ್ ಅನ್ನು ಕರೆಸಿದ್ದರು. ಅವರು ಕೆಲಸದಾಕೆ ಶಾರದಾ ಅವರೊಂದಿಗೆ ಕ್ರೇನ್ ತೊಟ್ಟಿಲಿಗೆ ಏರಿ ಮೇಲ್ಮಹಡಿಗೆ ಹೋಗಿದ್ದಾಗ, ತೊಟ್ಟಿಲಿನ ಬೆಲ್ಟ್ ತುಂಡಾಗಿ ವಾಲಿಕೊಂಡು , ಇಬ್ಬರೂ ಆಕಸ್ಮಿಕವಾಗಿ ನೆಲಕ್ಕುರುಳಿದರು.

ಘಟನೆ ಕುರಿತು ಮಾಹಿತಿ ತಿಳಿದ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ತಕ್ಷಣವೇ ತಮ್ಮ ಅಂಬುಲೆನ್ಸ್‌ನಲ್ಲಿ ಗಾಯಾಳುಗಳನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಆದರೆ ದಾರಿ ಮಧ್ಯೆ ಫ್ರಾನ್ಸಿಸ್ ಫುರ್ಟಾಡೊ ಅವರು ಮೃತರಾದರೆಂದು ವೈದ್ಯರು ದೃಢಪಡಿಸಿದರು. ಶಾರದಾ ಅವರ ಸ್ಥಿತಿಯು ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಘಟನೆಯ ನಂತರ ಕ್ರೇನ್ ಚಾಲಕ ಸ್ಥಳದಿಂದ ಪರಾರಿಯಾದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಆತನು ಗಾಯಾಳುಗಳಿಗೆ ಸಹಾಯ ಮಾಡದೆ ಓಡಿ ಹೋಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಧರ್ಮಸ್ಥಳ ಪ್ರಕರಣ : 15 ವರ್ಷಗಳ UDR ದಾಖಲೆ ನಾಶ; ಪೊಲೀಸರ ವಿರುದ್ಧ ವ್ಯಾಪಕ ಟೀಕೆ

ಧರ್ಮಸ್ಥಳದಲ್ಲಿ 2000ದಿಂದ 2015ರ ಅವಧಿಯಲ್ಲಿ ದಾಖಲಾಗಿದ್ದ ಅಪರಿಚಿತ ಸಾವಿನ ಪ್ರಕರಣಗಳ ಪ್ರಮುಖ ದಾಖಲೆಗಳು (UDR - Unidentified Death Report) ಡಿಲೀಟ್ ಆಗಿರುವುದು ಬೆಳಕಿಗೆ ಬಂದಿದೆ.

ಕಾರ್ಕಳ ಜ್ಞಾನಸುಧಾ : ಎನ್.ಎಸ್.ಎಸ್ ಕಾರ್ಯಚಟುವಟಿಕೆಗಳ ಉದ್ಘಾಟನೆ

ಎನ್.ಎಸ್.ಎಸ್ ನ ಧ್ಯೇಯೋದ್ದೇಶ ವ್ಯಕ್ತಿತ್ವ ವಿಕಸನ. ಇದರ ಸ್ವಯಂ ಸೇವಕ ವಿದ್ಯಾರ್ಥಿಗಳು ಉತ್ತಮ ಕೇಳುಗರಾದರೆ ಶ್ರೇಷ್ಠ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲರಾದ ಶ್ರೀವರ್ಮ ಅಜ್ರಿ ಎಂ ಮಾತನಾಡಿದರು.

ಶ್ರೀ ಶೀರೂರು ಪರ್ಯಾಯ ಮಹೋತ್ಸವ ಸ್ವಾಗತ ಸಮಿತಿಯ ಪ್ರಥಮ ಸಭೆ

ಆಗಸ್ಟ್ 2ರಂದು ಶನಿವಾರ ಸಂಜೆ ಗಂಟೆ 4.30ಕ್ಕೆ ಉಡುಪಿ ಶ್ರೀ ಕೃಷ್ಣಾಪುರ ಮಠದ 'ಶ್ರೀಕೃಷ್ಣ ಸಭಾ ಭವನ'ದಲ್ಲಿ ಶ್ರೀ ಶಿರೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಅಂಗವಾಗಿ ಸ್ವಾಗತ ಸಮಿತಿಯ ಪದಾಧಿಕಾರಿಗಳ ಪ್ರಥಮ ಸಭೆಯನ್ನು ಆಯೋಜಿಸಲಾಗಿದೆ.

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು : ಶ್ರೀ ಕ್ಷೇತ್ರದಲ್ಲಿ ನಡೆಯುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ ಪೂರ್ವಭಾವಿ ಸಭೆ

ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ ಪೂರ್ವಭಾವಿ ಸಭೆಯು ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ-ಅಂಬಲಪಾಡಿ ಪ್ರಗತಿ ಸೌಧ ಸಭಾಂಗಣದಲ್ಲಿ ನಡೆಯಿತು.