spot_img

ಮಗನಿಂದ ಪತ್ನಿಯ ಕೊಲೆಯ ಕನಸನ್ನು ನಿಜವೆಂದು ನಂಬಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ವೃದ್ಧ!

Date:

ಪುತ್ತೂರು : ಪತ್ನಿಯ ಹತ್ಯೆಯ ಕನಸು ಕನಸನ್ನು ನಿಜವೆಂದು ಭಾವಿಸಿದ ವೃದ್ಧೊಬ್ಬರು ನೇರವಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಅಸಾಧಾರಣ ಘಟನೆ ಪಟ್ಟಣದ ಬೆಳಿಯೂರುಕಟ್ಟೆ ಬಳಿ ನಡೆದಿದೆ.

ಸ್ಥಳೀಯ ನಿವಾಸಿ ವೃದ್ಧರು ಬೆಳಗ್ಗೆ ಬೆಳ್ಳಂಬೆಳಗ್ಗೆ ಠಾಣೆಗೆ ಬಂದು, “ನನ್ನ ಮಗನೇ ಪತ್ನಿಯನ್ನು ಕೊಂದಿದ್ದಾನೆ” ಎಂಬ ಗಂಭೀರ ಆರೋಪದೊಂದಿಗೆ ದೂರು ನೀಡಿದರು. ವಿಷಯದ ತೀವ್ರತೆಯನ್ನು ಗಮನಿಸಿದ ಪೊಲೀಸರು ತಕ್ಷಣವೇ ಘಟನೆ ನಡೆದಿದೆಯೆಂದು ಭಾವಿಸಿ ಅವರ ನಿವಾಸದತ್ತ ತೆರಳಿದರು.

ಮಧ್ಯದಾರಿಯಲ್ಲಿ ಅಕ್ಕಪಕ್ಕದ ಮನೆಯವರನ್ನೂ ಸಂಪರ್ಕಿಸಿ ವಿಚಾರಿಸಿದಾಗ, ವೃದ್ಧರು ಪತ್ನಿಯನ್ನು ಕೊಂದಿದ್ದಾರೆ ಎಂದು ಹೇಳಿದ್ದರ ಬಗ್ಗೆ ಅವರು ಕೂಡ ಮಾಹಿತಿ ನೀಡಿದರು. ಈ ಮೂಲಕ ಊರಲ್ಲಿ ಕೊಲೆ ನಡೆದಿರುವ ಅನುಮಾನ ವ್ಯಾಪಿಸಿತು.ಆದರೆ ಸ್ಥಳಕ್ಕೆ ತಲುಪಿದ ಪೊಲೀಸರಿಗೆ ಸಂಭವಿಸಿದ ಅನುಭವ ಅತ್ಯಂತ ವಿಚಿತ್ರವಾಯಿತು. ಮನೆಯ ಬಾಗಿಲು ತಟ್ಟಿದಾಗ, “ಮೃತಳಾದರೆಂದು” ಹೇಳಲಾಗಿದ್ದ ವೃದ್ಧರ ಪತ್ನಿಯೇ ಸ್ವತಃ ಬಾಗಿಲು ತೆರೆಯುತ್ತಾ ಮುಗುಳ್ನಗೆಯಿಂದ ಅವರನ್ನು ಸ್ವಾಗತಿಸಿದರು.

ಇದನ್ನು ಕಂಡ ಪೊಲೀಸರು ಮತ್ತು ಸುತ್ತಮುತ್ತಲವರು ಕೆಲ ಕ್ಷಣಗಳವರೆಗೆ ಮೂಕವಿಸ್ಮಿತರಾದರು. ಬಳಿಕ ವೃದ್ಧರ ಪುತ್ರ ಸ್ಥಳಕ್ಕೆ ಆಗಮಿಸಿ ಎಲ್ಲವನ್ನೂ ಸ್ಪಷ್ಟಪಡಿಸಿದರು. ವೃದ್ಧರು ಒಂದು ಭೀಕರ ಕನಸು ಕಂಡು, ಅದನ್ನು ನಿಜವೆಂದು ನಂಬಿ ಗಾಬರಿಯಿಂದ ದೂರು ದಾಖಲಿಸಿದ್ದಾರೆಂದು ತಿಳಿಸಿದರು.

ಪೊಲೀಸರ ಪ್ರಕಾರ, ಈ ವೃದ್ಧರು ಕಳೆದ ಕೆಲ ತಿಂಗಳಿಂದ ಮಾನಸಿಕ ಖಿನ್ನತೆ ಹಾಗೂ ಆತಂಕದಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಕುಟುಂಬದಿಂದ ಲಭಿಸಿದೆ. ಪ್ರಕರಣದಲ್ಲಿ ಯಾವುದೇ ಅಪರಾಧಾತ್ಮಕ ಅಂಶವಿಲ್ಲದ ಕಾರಣ ಪೊಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಣ ಸಂಸ್ಥೆಗೆ ಉತ್ತಮ ಫಲಿತಾಂಶ

2024-25ನೇ ಶೈಕ್ಷಣಿಕ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದ್ದು , ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ 176 ವಿದ್ಯಾರ್ಥಿಗಳಲ್ಲಿ 153 ವಿದ್ಯಾರ್ಥಿಗಳು ತೇರ್ಗಡೆಯಾಗಿ ಸಂಸ್ಥೆಗೆ 87 % ಫಲಿತಾಂಶ ಬಂದಿರುತ್ತದೆ .

ಹುರುಳಿಕಾಳು: ಆರೋಗ್ಯದ ಕನಸನ್ನು ನನಸು ಮಾಡುವ ಪೌಷ್ಟಿಕ ಧಾನ್ಯ!

ನಮ್ಮ ಅಡುಗೆಮನೆಯಲ್ಲೇ ಇರುವ ಸಾಮಾನ್ಯ ಧಾನ್ಯವಾದ ಹುರುಳಿಕಾಳು ದೇಹಕ್ಕೆ ಪೋಷಣೆಯ ಒಳ್ಳೆಯ ಬಂಡವಾಳವನ್ನು ಒದಗಿಸುವ ಆಹಾರವಾಗಿದೆ.

ವೈಶಾಖ ಮಾಸದ ಪವಿತ್ರ ಸಂದರ್ಭದಲ್ಲಿ ಆರಂಭವಾದ ಚಾರ್‌ಧಾಮ್ ಯಾತ್ರೆ; ಕೇದಾರನಾಥದಲ್ಲಿ ಭಕ್ತರಿಗೆ ದೇವರ ದರ್ಶನ, ಭದ್ರತೆಗೆ ತೀವ್ರ ಕ್ರಮ

ವೈಶಾಖ ಮಾಸದ ಪವಿತ್ರ ಸಂದರ್ಭದಲ್ಲಿ ಪ್ರಪಂಚದ ಅತ್ಯಂತ ಪವಿತ್ರ ಯಾತ್ರೆಗಳಲ್ಲೊಂದು ಎಂದು ಪರಿಗಣಿಸಲಾದ ಚಾರ್‌ಧಾಮ್ ಯಾತ್ರೆಗೆ ಇಂದು ಭಕ್ತಿಭರಿತ ಚಾಲನೆ ದೊರಕಿದೆ.

ಅನೈತಿಕ ಸಂಬಂಧ ಶಂಕೆ: ಪತ್ನಿ ಹಾಗೂ ಪ್ರೇಮಿಯನ್ನು ಕೊಂದ ಪತಿ !

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಪತ್ನಿಯ ಅನೈತಿಕ ಸಂಬಂಧದ ಶಂಕೆಯಿಂದ ಕೋಪಗೊಂಡ ಪತಿಯೊಬ್ಬನು, ಪತ್ನಿ ಹಾಗೂ ಆಕೆಯ ಪ್ರೇಮಿಯನ್ನು ಭೀಕರವಾಗಿ ಕೊಲೆ ಮಾಡಿ, ನಂತರ ತಾನೇ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ನಡೆದಿದೆ.