spot_img

ಲಯನ್ಸ್ ಕ್ಲಬ್ ಹಿರಿಯಡ್ಕ ಕ್ಕೆ ಲಯನ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ

Date:

ದಿನಾಂಕ 30-03-2025ನೇ ಆದಿತ್ಯವಾರದಂದು ಲಯನ್ಸ್ ಕ್ಲಬ್ ಹಿರಿಯಡ್ಕದವರ ಕ್ಲಬ್ ಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮವು ಹಿರಿಯಡ್ಕ ಅಂಜಾರಿನ ನಾರಾಯಣಗುರು ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಹಿರಿಯಡ್ಕದ ಅಧ್ಯಕ್ಷರಾದ ಲಯನ್ ಸುಧೀರ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಲಯನ್ಸ್ ಕ್ಲಬ್ ಹಿರಿಯಡ್ಕದವರು ಮಾಡಿದ್ದ ಸೇವಾ ಚಟುವಟಿಕೆಗಳನ್ನು ವೀಕ್ಷಿಸಲು ಆಗಮಿಸಿದ್ದ ಜಿಲ್ಲಾ ರಾಜ್ಯಪಾಲರಾದ ಲಯನ್ ಮೊಹಮ್ಮದ್ ಹನೀಫ್ ರವನ್ನು ಬೆಳಿಗ್ಗೆ 10 ಗಂಟೆಗೆ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರು ಹಿರಿಯಡ್ಕ ದೇವಸ್ಥಾನದಲ್ಲಿ ಸ್ವಾಗತಿಸಿದರು. ವೀರಭದ್ರ ದೇವರನ್ನು ಪ್ರಾರ್ಥಿಸಿ ಬಳಿಕ ಮುತ್ತೂರಿನ ಒಬ್ಬರು ಅನಾರೋಗ್ಯ ಪೀಡಿತ ಮಹಿಳೆಗೆ ಕ್ಲಬ್ ವತಿಯಿಂದ ಧನಸಹಾಯ ಮಾಡಿ ಮುಂದೆ ಲಯನ್ ಕ್ಲಬ್ ಹಿರಿಯಡ್ಕದವರಿಂದ ನಿರ್ಮಿಸಲ್ಪಟ್ಟು ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಅಂಜಾರಿನ ಹೊಸ ಪ್ರಯಾಣಿಕರ ತಂಗುದಾನವನ್ನು ಜಿಲ್ಲಾ ರಾಜ್ಯಪಾಲರು ಉದ್ಘಾಟಿಸಿದರು.

ಮುಂದೆ ಲಯನ್ಸ್ ಕ್ಲಬ್ ಹಿರಿಯಡ್ಕದವರು ನಿರ್ಮಿಸಿದ್ದ 2 ದಾರಿ ಫಲಕಗಳನ್ನು ಜಿಲ್ಲಾ ರಾಜ್ಯಪಾಲರು ವೀಕ್ಷಿಸಿ ನಂತರ ಅತ್ರಾಡಿಯಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವ ಒಂದು ಕುಟುಂಬಕ್ಕೆ ಹೋಮ್ ಫಾರ್ ಹೋಮ್ ಲೆಸ್ ಕಾರ್ಯಕ್ರಮದಡಿ ಮನೆ ನವೀಕರಣಕ್ಕೆ ಧನ ಸಹಾಯವನ್ನು ಕ್ಲಬ್ ವತಿಯಿಂದ ನೀಡಲಾಯಿತು. ನಂತರ ಮಣಿಪಾಲದ ರಾಜಥಾದ್ರಿಯಲ್ಲಿರುವ ಲಯನ್ಸ್ ಕ್ಲಬ್ ಹಿರಿಯಡ್ಕ ದವರು ನಿರ್ಮಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದ ಪ್ರಯಾಣಿಕರ ತಂಗುದಾನವನ್ನು ಜಿಲ್ಲಾ ರಾಜ್ಯಪಾಲರು ವೀಕ್ಷಿಸಿದರು, ಮಧ್ಯಾಹ್ನ ಕ್ಲಬ್ ಅಧ್ಯಕ್ಷರ ಮನೆಯಲ್ಲಿ BOD ಮೀಟಿಂಗ್ ನ್ನು ನಡೆಸಿ ಬೆಳಿಗ್ಗಿನ ಕಾರ್ಯಕ್ರಮವನ್ನು ಮುಕ್ತಯಗೊಳಿಸಲಾಯಿತು.

ಸಂಜೆ 7-00 ಗಂಟೆಗೆ ಕ್ಲಬ್ ಅಧ್ಯಕ್ಷರಾದ ಲಯನ್ ಸುಧೀರ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಾರಾಯಣಗುರು ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಹಿರಿಯಡ್ಕಕ್ಕೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮವು ನಡೆಯಿತು, ಜಿಲ್ಲಾ ರಾಜ್ಯಪಾಲರಾದ ಲಯನ್ ಮೊಹಮ್ಮದ್ ಹನೀಫ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು, ಪ್ರಥಮ ಉಪ ಜಿಲ್ಲಾ ರಾಜ್ಯಪಾಲರಾದ ಲಯನ್ ಸಪ್ನಾ ಸುರೇಶ್, ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಗಿರೀಶ್ ರಾವ್, ಜಿಲ್ಲಾ ಸಂಪುಟ ಕೋಶಾಧಿಕಾರಿ ಲಯನ್ ಶ್ರೀನಿವಾಸ್ ಪೈ, ಮಾಜಿ ಜಿಲ್ಲಾ ರಾಜ್ಯಪಾಲರಾದ ಲಯನ್ ವಿಶ್ವನಾಥ ಶೆಟ್ಟಿ ಪ್ರಾಂತ್ಯ ಅಧ್ಯಕ್ಷರಾದ ಲಯನ್ ಹರೀಶ್ ಪೂಜಾರಿ, ವಲಯ ಅಧ್ಯಕ್ಷರಾದ ಲಯನ್ ಪ್ರಕಾಶ್ ಶೆಟ್ಟಿ, ಲಯನ್ಸ್ ಕ್ಲಬ್ ಹಿರಿಯಡ್ಕದ ಕಾರ್ಯದರ್ಶಿ ಲಯನ್ ವಸಂತ ಶೆಟ್ಟಿ, ಕೋಶಾಧಿಕಾರಿ ಲಯನ್ ಬಾಲಕೃಷ್ಣ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಲಯನ್ ಅನುಷಾ ಪ್ರಾರ್ಥನೆಯನ್ನು ಮಾಡಿದರು,
ಅಧ್ಯಕ್ಷರಾದ ಲಯನ್ ಸುಧೀರ್ ಹೆಗ್ಡೆಯವರು ಅತಿಥಿಗಳನ್ನು ಸ್ವಾಗತಿಸಿದರು, ಕಾರ್ಯದರ್ಶಿ ಲಯನ್ ವಸಂತ ಶೆಟ್ಟಿಯವರು ಕ್ಲಬ್ ಸೇವಾ ಚಟುವಟಿಕೆಗಳ ವರದಿಯನ್ನು ಓದಿದರು, ಜಿಲ್ಲಾ ರಾಜ್ಯಪಾಲರು ಲಯನ್ಸ್ ಕ್ಲಬ್ ಹಿರಿಯಡ್ಕದ ಸೇವಾ ಚಟುವಟಿಗಳಿಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು, ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ಲಯನ್ಸ್ ಕ್ಲಬ್ ಹಿರಿಯಡ್ಕಕ್ಕೆ ಶುಭ ಹಾರೈಸಿದರು, ಕಾರ್ಯದರ್ಶಿ ಲಯನ್ ವಸಂತ ಶೆಟ್ಟಿಯವರು ಆಗಮಿಸಿದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದರು. ಕ್ಲಬ್ ನ ಹಿರಿಯ ಸದಸ್ಯ ಲಯನ್ ಬಾಲಕೃಷ್ಣ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕಲರ್ಸ್ ಕನ್ನಡದಲ್ಲಿ ಹೊಸ ಕೌಟುಂಬಿಕ ಧಾರಾವಾಹಿ ‘ಮುದ್ದು ಸೊಸೆ’

'ಮುದ್ದು ಸೊಸೆ' ಕಲರ್ಸ್ ಕನ್ನಡದಲ್ಲಿ ವಿದ್ಯಾಗೆ ವಿದ್ಯೆ ಬೇಕು, ಮನೆಯವರಿಗೆ ಮದುವೆ ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆ ಕಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ, ಮನಮಿಡಿಯುವ ಧಾರಾವಾಹಿಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ.

ಅಪರೂಪದ ನಾಯಿ ಖರೀದಿಗೆ 50 ಕೋಟಿ? ಬೆಂಗಳೂರು ಶ್ವಾನ ಪ್ರೇಮಿಯ ಮನೆಗೆ ಇಡಿ ದಾಳಿ!

ಬೆಂಗಳೂರು ಶ್ವಾನ ಪ್ರೇಮಿ ಎಸ್. ಸತೀಶ್ ತನ್ನಿಂದ 50 ಕೋಟಿ ರೂ. ಮೊತ್ತದಲ್ಲಿ ನಾಯಿ ಖರೀದನೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಹೇಳಿಕೆ ಇದೀಗ ಇಡಿ (ಅನ್ವೇಷಣಾ ನಿರ್ದೇಶನಾಲಯ) ತನಿಖೆಗೆ ಕಾರಣವಾಗಿದೆ.

ಪ್ರೊಸೆಸ್ಡ್ ಆಹಾರದ ನಿಗೂಢ ನಂಟು: ಆರೋಗ್ಯಕ್ಕೆ ರುಚಿಯೇ ವಿಷವಾಗುತ್ತಿದೆ !

ಇತ್ತೀಚಿನ ದಿನಗಳಲ್ಲಿ ಪ್ಯಾಕ್ಟ್ ಫುಡ್ಸ್, ಇನ್‌ಸ್ಟಂಟ್ ಆಹಾರಗಳು, ಬೀದಿ ಬದಿಯ ಜಂಕ್‌ಫುಡ್ಸ್ ಮತ್ತು ಇತರ ಸಂಸ್ಕರಿಸಿದ ಆಹಾರಗಳ ಬಳಕೆಯು ಗಣನೀಯವಾಗಿ ಹೆಚ್ಚಾಗಿದೆ.

ಕಾರ್ಕಳದಲ್ಲಿ ಮಕ್ಕಳ ರಂಗಶಿಬಿರ ಆರಂಭ: ಪ್ರತಿಭೆಗಳ ಅನಾವರಣಕ್ಕೆ ವೇದಿಕೆ – ಶಾಸಕರಿಂದ ಪ್ರೋತ್ಸಾಹ

ಬುಧವಾರ ಕಾರ್ಕಳದ ಯಕ್ಷ ರಂಗಾಯಣ ಸಭಾಂಗಣದಲ್ಲಿ ನಡೆದ ಬಾಲಲೀಲೆ ಮಕ್ಕಳ ರಂಗ ಶಿಬಿರವನ್ನು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಉದ್ಘಾಟಿಸಿದರು.