spot_img

ಪೌಷ್ಟಿಕತೆಯ ಮಹಾಸಾಗರ: ಮಖಾನಾದ ಆರೋಗ್ಯಕರ ಗುಣಗಳು

Date:

ಬೆಂಗಳೂರು: ಭಾರತೀಯ ಆಹಾರ ಪದ್ದತಿಯಲ್ಲಿ ಪೌಷ್ಟಿಕತೆಯಿಂದ ತುಂಬಿದ ಅನೇಕ ತರಹದ ಆಹಾರಗಳಿವೆ. ಅದರಲ್ಲಿ ಇದೀಗ ಪ್ರಖ್ಯಾತಿ ಪಡೆದಿರುವುದು ಮಖಾನಾ ಅಥವಾ ಕಮಲದ ಬೀಜ. ಭಾರತದಲ್ಲಿ ಇದನ್ನು “ಮಖಾನಾ” ಅಥವಾ “ಫಾಕ್ಸ್ ನಟ್ಸ್” ಎಂದೇ ಕರೆಯುತ್ತಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮಾರಿಷಸ್ ಪ್ರವಾಸದ ವೇಳೆ ಅಲ್ಲಿನ ಅಧ್ಯಕ್ಷರಿಂದ ಉಡುಗೊರೆಯಾಗಿ ಮಖಾನಾ ಪಡೆದಿದ್ದು, ಇದಕ್ಕೆ ಮತ್ತಷ್ಟು ಪ್ರಚಾರ ನೀಡಿದೆ.

ಮಖಾನಾದ ಪೌಷ್ಟಿಕತೆ ಮತ್ತು ಆರೋಗ್ಯ ಲಾಭಗಳು
ಮಖಾನಾದಲ್ಲಿ ಮ್ಯಾಗ್ನೆಶಿಯಂ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್, ಝಿಂಕ್, ಕಬ್ಬಿಣಾಂಶಗಳಿದ್ದು, ಇದು ಶಕ್ತಿದಾಯಕ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ. ಇದರ ಸೇವನೆಯಿಂದ ರಕ್ತಸಂಚಾರ ಸುಧಾರಣೆಯಾಗುವುದರೊಂದಿಗೆ ಹೃದಯ ಆರೋಗ್ಯ ಸುಧಾರಿಸುತ್ತದೆ. ಮಖಾನಾದಲ್ಲಿರುವ ಕಡಿಮೆ ಕೊಬ್ಬಿನಾಂಶ, ಕಡಿಮೆ ಕ್ಯಾಲರಿ ಶರೀರದ ತೂಕವನ್ನು ಸಮತೋಲನದಲ್ಲಿ ಇಡಲು ಸಹಕಾರಿ. ಇದನ್ನು “ಸೂಪರ್ ಫುಡ್” ಎಂದು ಕರೆಯಲಾಗಿದೆ.

ಮಖಾನಾ ಕೃಷಿ ಮತ್ತು ಉತ್ಪಾದನೆ
ಭಾರತದಲ್ಲಿ ಶೇ.90ರಷ್ಟು ಮಖಾನಾ ಬಿಹಾರದಲ್ಲಿ ಉತ್ಪತ್ತಿಯಾಗುತ್ತದೆ. ಬಿಹಾರದ ಮಿಥಿಲಾಂಚಲ ಪ್ರದೇಶದ ಮಧುಬನಿ, ದರ್ಭಾಂಗಾ, ಸೀತಾಮರಿ, ಸಹಸ್ರಾ, ಕಟಿಹಾರ್, ಪೂರ್ಣಿಯಾ, ಸುಪೌಲ್, ಅರರಿಯಾ, ಕಿಶನ್‌ಗಂಜ್ ಜಿಲ್ಲೆಗಳು ಮಖಾನಾ ಕೃಷಿಗೆ ಪ್ರಸಿದ್ಧ. 2022ರಲ್ಲಿ “ಮಿಥಿಲಾ ಮಖಾನಾ” ಎಂಬ ಜೀಯೋಗ್ರಾಫಿಕಲ್ ಇಂಡಿಕೇಶನ್ (GI) ಟ್ಯಾಗ್ ಅನ್ನು ಕೂಡ ಪಡೆದಿದೆ. ಭಾರತದಿಂದ ಅಮೆರಿಕಾ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ಯುಎಇ ಸೇರಿ ಹಲವು ದೇಶಗಳಿಗೆ ಮಖಾನಾ ರಫ್ತಾಗುತ್ತಿದೆ.

ಮಖಾನಾ ಮಂಡಳಿ ಸ್ಥಾಪನೆ
2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ “ಮಖಾನಾ ಮಂಡಳಿ” ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ಇದರಿಂದ ಮಖಾನಾ ಕೃಷಿಕರಿಗೆ ಸಹಾಯ, ಮಖಾನಾ ಸಂಸ್ಕರಣಾ ಘಟಕಗಳ ಅಭಿವೃದ್ಧಿ, ಮಾರುಕಟ್ಟೆ ವಿಸ್ತರಣೆ ಹಾಗೂ ಹೊಸ ತಂತ್ರಜ್ಞಾನಗಳ ಬಳಕೆ ಸಾಧ್ಯವಾಗಲಿದೆ.

ಮಖಾನಾದ ವಿವಿಧ ಉಪಯೋಗಗಳು
ಮಖಾನಾವನ್ನು ಪಾಪ್‌ಕಾರ್ನ್ ರೀತಿಯಲ್ಲಿ ಹುರಿದು, ಹಾಲು ಹಾಗೂ ಸಿಹಿಪದಾರ್ಥಗಳ ಜತೆ ಸೇವಿಸಬಹುದು. ಜೊತೆಗೆ ಪಲ್ಯ, ಪಾಯಸ, ಗ್ರೇವಿ, ಖಾರ ತಿಂಡಿಗಳಿಗೆ ಬಳಸಬಹುದು. ಉತ್ತರ ಭಾರತದಲ್ಲಿ ಪ್ರತಿದಿನ ಬಳಕೆಯಲ್ಲಿರುವ ಮಖಾನಾ ದಕ್ಷಿಣ ಭಾರತದಲ್ಲೂ ಜನಪ್ರಿಯಗೊಳ್ಳುತ್ತಿದೆ.

ಮಖಾನಾ ಕೃಷಿಯ ಸವಾಲುಗಳು

ನೀರಿನಲ್ಲಿ ಬೆಳೆಯುವ ಈ ಸಸ್ಯದ ಸಂಗ್ರಹಣೆ ಕಷ್ಟ
ಕೀಟನಾಶಕ ಬಳಸಲು ಸಾದ್ಯವಿಲ್ಲ
ಸಂಸ್ಕರಣಾ ಘಟಕಗಳ ಕೊರತೆ
ಕೃಷಿಕರಿಗೆ ಜಾಗೃತಿ ಮತ್ತು ಯಾಂತ್ರೀಕೃತ ಸಾಧನಗಳ ಅವಶ್ಯಕತೆ

ಮಖಾನಾ ಕೃಷಿ, ಆಹಾರ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಭಾರತದ ಪೌಷ್ಟಿಕ ಆಹಾರದ ಪರಂಪರೆಯನ್ನು ಮಖಾನಾ ಮತ್ತಷ್ಟು ಸದೃಢಗೊಳಿಸುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸುದ್ದಿ ವಾಹಿನಿಯ ಕ್ಯಾಮರಾ ಮ್ಯಾನ್ ಸಂದೀಪ್ ಪೂಜಾರಿ ನಿಧನ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಮತ್ತು ಈಟಿವಿ ಭಾರತ್‌ನ ಜಿಲ್ಲಾ ವರದಿಗಾರರಾದ ಸಂದೀಪ್ ಪೂಜಾರಿ (37) ಅವರು ಏಪ್ರಿಲ್ 20ರಂದು ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

ಹವಾಮಾನ ವೈಪರೀತ್ಯದಿಂದ ಕರಿಮೆಣಸಿನ ಬೆಲೆ ಗಗನಕ್ಕೆ! ಕೆಜಿಗೆ ₹1100 ತಲುಪುವ ಅಂದಾಜು!

ಕರಿಮೆಣಸು (Black Pepper) ದರ ಕಳೆದ ಎರಡು ವರ್ಷಗಳಲ್ಲಿ ಶೇ. 40ರಷ್ಟು ಏರಿಕೆಯಾಗಿದೆ. ಪೂರೈಕೆ ಕೊರತೆ ಹಾಗೂ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಇದರ ದರ ಮತ್ತಷ್ಟು ಏರಬಹುದು ಎಂದು ವರದಿಯಾಗಿದೆ.

ಹಿಂದೂಗಳೇ “ಒಂದೇ ದೇಗುಲ, ಒಂದೇ ಬಾವಿ, ಒಂದೇ ಸ್ಮಶಾನ” ತತ್ವದೊಂದಿಗೆ ಜಾತಿ ಭೇದಕ್ಕೆ ತೆರೆ ಹಾಕೋಣ: ಭಾಗವತ್ ಕರೆ

ಅಲಿಗಢದಲ್ಲಿ ಮೋಹನ್ ಭಾಗವತ್ ರವರು , “ಒಂದೇ ದೇಗುಲ, ಒಂದೇ ಬಾವಿ, ಒಂದೇ ಸ್ಮಶಾನ” ತತ್ವದಿಂದ ಜಾತಿ ಭೇದ ನಿವಾರಿಸೋಣ” ಎಂದರು.

“ಮುಂದಿನ ಚುನಾವಣೆಯಲ್ಲಿ ತುಳುನಾಡಿನಿಂದ ಕನಿಷ್ಠ ಹತ್ತು ಕಾಂಗ್ರೆಸ್ ಶಾಸಕರು ಆಯ್ಕೆಯಾಗಲಿದ್ದಾರೆ.” : ಡಿಕೆ ಶಿವಕುಮಾರ್

ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಭಾನುವಾರ ನಡೆದ "ಸರಕಾರದ ನಡೆ, ಕಾರ್ಯಕರ್ತರ ಕಡೆ" ಎಂಬ ಕಾರ್ಯಕರ್ತರ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿದರು.