ಕಾರ್ಕಳ : ಕ್ರಿಯೇಟಿವ್ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಪ್ರೇಕ್ಷಣೀಯ ಸ್ಥಳಗಳ ಸ್ವಚ್ಛತಾ ಕಾರ್ಯಕ್ರಮ

Date:

spot_img

05 ಅಕ್ಟೋಬರ್ 2025 ರಂದು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಕಾರ್ಕಳದ ಆಸುಪಾಸಿನಲ್ಲಿರುವ ಅನೇಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು. ಪ್ಲಾಸ್ಟಿಕ್ ಕಸದ ಸಂಗ್ರಹ, ಕಸ ವಿಂಗಡಣೆ ಹಾಗೂ ಪರಿಸರ ಶುದ್ದೀಕರಣದ ಜೊತೆಗೆ ಸ್ಥಳೀಯ ಜನರಿಗೆ ಸ್ವಚ್ಛತೆಯ ಮಹತ್ವವನ್ನು ಬೋಧಿಸುವ ಜಾಗೃತಿ ಅಭಿಯಾನವೂ ನಡೆಯಿತು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ವಚ್ಛ ಕಾರ್ಕಳ ನಗರದ ಸ್ವಚ್ಛತಾ ರಾಯಭಾರಿಯಾಗಿರುವ ಫೆಲಿಕ್ಸ್ ಜೋಸೆಫ್ ವಾಜ್ ರವರು ಶುಭ ಹಾರೈಸಿದರು. ಕಾರ್ಕಳ ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ‘ ಸ್ವಚ್ಛತೆ ಎನ್ನುವುದು ಕೇವಲ ದೈಹಿಕ ಶುದ್ಧತೆಗೆ ಸೀಮಿತವಲ್ಲ. ನಮ್ಮ ಮನಸ್ಸಿನ, ಸಮಾಜದ ಮತ್ತು ಸಂಸ್ಕೃತಿಯ ಶುದ್ಧತೆಯ ಪ್ರತೀಕವೂ ಹೌದು. ಯುವಕರು ಇಂತಹ ಚಟುವಟಿಕೆಗಳ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರೇರಣೆಯಾಗುತ್ತಾರೆ ‘ ಎಂದು ಹೇಳಿದರು.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಬಿ. ಗಣನಾಥ ಶೆಟ್ಟಿ ರವರು ಮಾತನಾಡಿ ‘ ಸ್ವಚ್ಛತೆಯು ಕೇವಲ ಕಾರ್ಯವಲ್ಲ. ಅದು ಜೀವನಶೈಲಿ ಆಗಬೇಕು. ಯುವಕರು ಇಂತಹ ಸಾಮಾಜಿಕ ಜವಾಬ್ದಾರಿಗಳಲ್ಲಿ ತೊಡಗಿದಾಗ ಸಮಾಜದ ಬೆಳವಣಿಗೆ ಖಚಿತ ‘ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕರಲ್ಲಿ ಓರ್ವರಾದ ಅಶ್ವತ್ ಎಸ್.ಎಲ್, ಎನ್.ಎಸ್.ಎಸ್ ಶಿಬಿರಾಧಿಕಾರಿ ಉಮೇಶ್, ಉಪನ್ಯಾಸಕ – ಉಪನ್ಯಾಸಕೇತರ ವರ್ಗದವರು, ಸುಮಾರು 150ಕ್ಕಿಂತಲೂ ಹೆಚ್ಚು ವಿದ್ಯಾರ್ಥಿ -ವಿದ್ಯಾರ್ಥಿನಿಯರು ಪಾಲ್ಗೊಂಡು, ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಿದರು. ಈ ಸ್ವಚ್ಛತಾ ಆಂದೋಲನಕ್ಕೆ ಕಾರ್ಕಳ ಪುರಸಭೆಯ ಸಂಪೂರ್ಣ ಸಹಕಾರ ದೊರಕಿತು.
ಸಭಾ ಕಾರ್ಯಕ್ರಮವನ್ನು ಜೀವಶಾಸ್ತ್ರ ಉಪನ್ಯಾಸಕರಾದ ಲೋಹಿತ್ ಎಸ್.ಕೆ ರವರು ನಿರೂಪಿಸಿ ವಂದಿಸಿದರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಭಾಗವಹಿಸಿದ ಎಲ್ಲರನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ರಕ್ತದಾನಿಗಳ ದಿನ

ವಿಶ್ವ ರಕ್ತದಾನಿಗಳ ದಿನದ ಮಹತ್ವ ಮತ್ತು ಜೂನ್ 14 ರಂದೇ ಇದನ್ನು ಏಕೆ ಆಚರಿಸಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. ರಕ್ತದಾನ ಮಾಡಿ ಜೀವ ಉಳಿಸಿ!

ಮಹಿಳೆಯರೇ ಎಚ್ಚರ..! ರಾತ್ರಿ 11 ದಾಟಿದ್ರೂ ನಿದ್ರೆ ಮಾಡಲ್ವಾ? ನಿಮಗಾಗಿ ಕಾಯ್ತಿದೆ ಈ ದೊಡ್ಡ ಕಾಯಿಲೆ

ಮಹಿಳೆಯರು ರಾತ್ರಿ 11 ಗಂಟೆಯೊಳಗೆ ಮಲಗುವುದು ಏಕೆ ಮುಖ್ಯ? ತಡವಾಗಿ ನಿದ್ರಿಸುವುದರಿಂದ ಹಾರ್ಮೋನ್ ಅಸಮತೋಲನ ಮತ್ತು ಸಂತಾನೋತ್ಪತ್ತಿ ಸಮಸ್ಯೆ ಹೇಗೆ ಕಾಡುತ್ತದೆ ಎಂದು ತಿಳಿಯಿರಿ.

ಹೈದರಾಬಾದ್ ಮೀನು ಪ್ರಸಾದಕ್ಕೆ ಹರಿದುಬಂದ ಜನಸಾಗರ

ಹೈದರಾಬಾದ್‌ನಲ್ಲಿ ಅಸ್ತಮಾ ನಿವಾರಣೆಯ ಸಾಂಪ್ರದಾಯಿಕ ಮೀನು ಪ್ರಸಾದ ವಿತರಣೆಗೆ ಲಕ್ಷಾಂತರ ಜನರು ಆಗಮಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನಟ ಗಗನ್ ಚಿನ್ನಪ್ಪ ಲವ್ ಸ್ಟೋರಿ ಬ್ರೇಕಪ್ ಸೀಕ್ರೆಟ್ಸ್

ನಟ ಗಗನ್ ಚಿನ್ನಪ್ಪ ತಮ್ಮ ಮೊದಲ ಪ್ರೀತಿಯಲ್ಲಿ ಎದುರಿಸಿದ ವಂಚನೆ ಹಾಗೂ ಆರ್ಥಿಕ ನಷ್ಟದ ಕಹಿಸತ್ಯ ಬಿಚ್ಚಿಟ್ಟಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ