
ನಿಟ್ಟೂರು: ನಿಟ್ಟೂರು ಯುವಕ ಮಂಡಲ (ರಿ.) ಇದರ 2024-2025ನೇ ಸಾಲಿನ ವಾರ್ಷಿಕ ಮಹಾಸಭೆಯು ಆಗಸ್ಟ್ 3, 2025 ರಂದು ಅಧ್ಯಕ್ಷ ನವೀನ್ ಸನಿಲ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಹಿಂದಿನ ವರ್ಷದ ವರದಿ ಮತ್ತು ಲೆಕ್ಕಪತ್ರವನ್ನು ಅನುಮೋದಿಸಿ, ಮುಂದಿನ ಸಾಲಿಗಾಗಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಕಾರ್ಯದರ್ಶಿ ಸುರೇಂದ್ರ ಜತ್ತನ್ ಅವರು 2024-2025ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರೆ, ಕೋಶಾಧಿಕಾರಿ ದಿನೇಶ್ ಎಸ್. ಜತ್ತನ್ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
2025-2026ನೇ ಸಾಲಿನ ನೂತನ ಪದಾಧಿಕಾರಿಗಳು
- ಅಧ್ಯಕ್ಷರು: ನವೀನ್ ಸನಿಲ್
- ಉಪಾಧ್ಯಕ್ಷರು: ಅನಿಲ್ ಶೆಟ್ಟಿ
- ಕಾರ್ಯದರ್ಶಿ: ಸುರೇಂದ್ರ ಜತ್ತನ್
- ಜೊತೆ ಕಾರ್ಯದರ್ಶಿ: ನಾರಾಯಣ ಜತ್ತನ್
- ಕೋಶಾಧಿಕಾರಿ: ದಿನೇಶ್ ಎಸ್. ಜತ್ತನ್
- ಕ್ರೀಡಾ ಕಾರ್ಯದರ್ಶಿ: ಶಿವರಾಮ್ ಸುವರ್ಣ
- ಜೊತೆ ಕ್ರೀಡಾ ಕಾರ್ಯದರ್ಶಿ: ಸುಧೀರ್ ಕುಂದರ್
- ಕಲಾ ಕಾರ್ಯದರ್ಶಿ: ಅಶೋಕ್ ಸನಿಲ್
- ಜೊತೆ ಕಲಾ ಕಾರ್ಯದರ್ಶಿ: ಮಹೇಶ್ ಎಂ. ಪೂಜಾರಿ
- ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಈ ಸಭೆಯಲ್ಲಿ ಯುವಕ ಮಂಡಲದ ಸಲಹೆಗಾರರಾದ ರಂಗ ಸನಿಲ್, ನಾರಾಯಣ ಪಿ. ಜತ್ತನ್, ಎನ್. ಮನೋಹರ್ ಸನಿಲ್, ವಿಠ್ಠಲ್ ಮಾಬಿಯನ್ ಮತ್ತು ಸತೀಶ್ ಎಸ್. ಜತ್ತನ್ ಉಪಸ್ಥಿತರಿದ್ದರು.