spot_img

ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಸೈಬರ್ ಸೆಕ್ಯೂರಿಟಿ ಬಗೆಗಿನ ಸೆಂಟರ್ ಆಫ್ ಎಕ್ಸಲೆನ್ಸ್

Date:

ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಅತ್ಯಾಧುನಿಕ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ಜಪಾನ್ ನ ವಿಲ್ ಡಿಸೈನ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ನಿಟ್ಟೆ ತಾಂತ್ರಿಕ ಕಾಲೇಜಿನ ಸೈಬರ್ ಸೆಕ್ಯೂರಿಟಿ ವಿಭಾಗದ ಮುಖ್ಯಸ್ಥ ಡಾ.ರೋಷನ್ ಫರ್ನಾಂಡಿಸ್ ಮತ್ತು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಹಯೋಗಗಳ ನಿರ್ದೇಶಕ ಪ್ರೊ.ಹರಿಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ಈ ಕೇಂದ್ರವು ಜಾಗತಿಕ ಜ್ಞಾನ ವಿನಿಮಯ, ವಿಶೇಷ ತರಬೇತಿ ಮತ್ತು ಅಂತರರಾಷ್ಟ್ರೀಯ ವೃತ್ತಿ ಅವಕಾಶಗಳನ್ನು ಉತ್ತೇಜಿಸುತ್ತಿದೆ.

ವಿದ್ಯಾರ್ಥಿಗಳು ಈಗಾಗಲೇ ಜಪಾನ್ ನಲ್ಲಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ, ಇನ್ನೂ ಹಲವರು ಸ್ಟೈಫಂಡ್ ನೊಂದಿಗೆ ಇಂಟರ್ನ್ ಶಿಪ್ ಗೆ ಆಯ್ಕೆಯಾಗಿರುತ್ತಾರೆ. ಈ ಉಪಕ್ರಮವು ಶೀಘ್ರದಲ್ಲೇ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮಗಳಾಗಿ ಮತ್ತು ಡಿಜಿಟಲ್ ವಿಧಿವಿಜ್ಞಾನ ಸುಧಾರಿತ ಸೌಲಭ್ಯಗಳಾಗಿ ವಿಸ್ತರಿಸಲಿದೆ. ಸಂಶೋಧನೆ ಮತ್ತು ಅಂತರರಾಷ್ಟ್ರೀಯ ಸಹಯೋಗದ ಬಲದೊಂದಿಗೆ ಕೇಂದ್ರವು ಡಿಜಿಟಲ್ ಬೆದರಿಕೆಗಳನ್ನು ಪರಿಹರಿಸಲು ಕಾರ್ಯಪ್ರವೃತ್ತವಾಗಲಿದೆ. ಈ ಉತ್ಕೃಷ್ಟತಾ ಕೇಂದ್ರವನ್ನು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಶ್ರೀ ಎನ್ ವಿನಯಾ ಹೆಗ್ಡೆ ಅವರು ವಿಲ್ ಡಿಸೈನ್ ಜಪಾನ್ ನ ಅಧಿಕಾರಿಗಳಾದ ಶ್ರೀ ನವೋಟಕಾ ತಗುಚಿ, ಶ್ರೀ ಹಿರೋಶಿ ನಕಯಾಮಾ ಮತ್ತು ಶ್ರೀ ತಕಾಶಿ ತ್ಸುಜಿಯುಚಿ ಅವರ ಸಮ್ಮುಖದಲ್ಲಿ ಸೆ.15 ರಂದು ಸೋಮವಾರ ಉದ್ಘಾಟಿಸಲಿರುವರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪಾಸ್‌ವರ್ಡ್ ಇಲ್ಲದೆ ಇನ್​ಸ್ಟಾಗ್ರಾಮ್‌ಗೆ ಲಾಗಿನ್ ಆಗುವುದು ಹೇಗೆ? ಇಲ್ಲಿದೆ ಸುಲಭ ಟ್ರಿಕ್

ಪದೇ ಪದೇ ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗುವ ತಾಪತ್ರಯದಿಂದ ಮುಕ್ತಿ ನೀಡಲು, ಇನ್​ಸ್ಟಾಗ್ರಾಮ್ ಒಂದು ಉಪಯುಕ್ತ ಆಯ್ಕೆಯನ್ನು ಹೊಂದಿದೆ.

ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘದ ರಜತ ಪೂರ್ತಿ: ಲೋಕ ಕಲ್ಯಾಣಾರ್ಥ ದಶಾವತಾರ ಮಂತ್ರ ಹೋಮದ ಆಯೋಜನೆ

ಶಿವಳ್ಳಿ ಬ್ರಾಹ್ಮಣ ಪುರೋಹಿತ ಸಂಘ ಉಡುಪಿ ಇವರ ರಜತ ಪೂರ್ತಿ ಸಂಭ್ರಮದ ಸಂದರ್ಭದಲ್ಲಿ ಮನೆ , ಮಠ , ಮಂದಿರ , ದೇವಸ್ಥಾನದಲ್ಲಿ ನಮ್ಮ ಮನೆ , ಗೋವು , ನಮ್ಮ ಗ್ರಾಮ , ನಮ್ಮ ರಾಜ್ಯ , ರಾಷ್ಟ್ರದ ರಕ್ಷಣೆಗಾಗಿ ದಶಾವತಾರ ಮಂತ್ರ ಹೋಮವನ್ನು ಹಮ್ಮಿಕೊಳ್ಳಲಾಗಿದೆ.

ಹಿರಿಯಡ್ಕದ ಕೆಪಿಎಸ್ ತಂಡಕ್ಕೆ ಥ್ರೋ ಬಾಲ್‌ನಲ್ಲಿ ಪ್ರಥಮ ಸ್ಥಾನ: ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕ್ರೀಡಾ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ತೋರಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಹಿರಿಯಡ್ಕದ ವಿದ್ಯಾರ್ಥಿಗಳು, ಉಡುಪಿ ತಾಲ್ಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

ಪೂಜಾ ಹೆಗ್ಡೆ ಟಾಲಿವುಡ್‌ಗೆ ಕಂಬ್ಯಾಕ್‌: ದುಲ್ಕರ್ ಸಲ್ಮಾನ್ ಜೊತೆ ಹೊಸ ಸಿನಿಮಾ

ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರು ಮಾಲಿವುಡ್ ನಟ ದುಲ್ಕರ್ ಸಲ್ಮಾನ್ ಜೊತೆ ಹೊಸ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.