ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ‘ಶೀ ಲೀಡ್ಸ್: ಮಹಿಳಾ ಶಿಕ್ಷಕಿಯರಿಗಾಗಿ ನಾಯಕತ್ವ ಸಾಮರ್ಥ್ಯಗಳ ಅಭಿವೃದ್ಧಿ’ ಕುರಿತು ಮೂರು ದಿನಗಳ ಎಫ್‌ಡಿಪಿ ಉದ್ಘಾಟನೆ

Date:

spot_img

ಕಾರ್ಕಳ: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಿಬ್ಬಂದಿ ಅಭಿವೃದ್ಧಿ ಕೇಂದ್ರ (ಎಸ್.ಡಿ.ಸಿ), ಐಇಇಇ ಬೆಂಗಳೂರು ಸೆಕ್ಷನ್ ಹಾಗೂ ವುಮನ್ ಇನ್ ಎಂಜಿನಿಯರಿಂಗ್ (WIE) ಮಂಗಳೂರು ಉಪವಿಭಾಗದ ಸಹಯೋಗದಲ್ಲಿ ಹಾಗೂ ಕೆನರಾ ಬ್ಯಾಂಕ್, ನಿಟ್ಟೆಯ ಸಹಪ್ರಾಯೋಜಕತ್ವದಲ್ಲಿ, ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗವು ‘ಶೀ ಲೀಡ್ಸ್: ಡೆವಲಪಿಂಗ್ ಲೀಡರ್‌ಶಿಪ್ ಕಾಂಪಿಟೆನ್ಸೀಸ್ ಫಾರ್ ವುಮನ್ ಅಕಾಡೆಮಿಷಿಯನ್ಸ್’ ಎಂಬ ಶೀರ್ಷಿಕೆಯಡಿಯಲ್ಲಿ ನವೆಂಬರ್ 10ರಿಂದ ಮೂರು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ (FDP)ವನ್ನು ಆಯೋಜಿಸಿತು.

ಕಾರ್ಯಕ್ರಮವನ್ನು ಸಿಂಬಯೋಸಿಸ್ ತಾಂತ್ರಿಕ ಸಂಸ್ಥೆ, ಪುಣೆಯ ಸಹಪ್ರಾಧ್ಯಾಪಕಿ ಡಾ. ರಾಹೀ ವಾಲಾಂಬೆ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ಭಾಷಣದಲ್ಲಿ ಅವರು ಅಕಾಡೆಮಿಕ್ ಕ್ಷೇತ್ರದಲ್ಲಿ ನಾಯಕತ್ವದ ಮಹತ್ವವನ್ನು ವಿವರಿಸಿ, ಮಹಿಳಾ ಅಧ್ಯಾಪಕರನ್ನು ಹೊಸತನ ಹಾಗೂ ಮಾರ್ಗದರ್ಶನವನ್ನು ಸ್ವೀಕರಿಸಲು ಪ್ರೇರೇಪಿಸಿದರು. ಗೌರವ ಅತಿಥಿಯಾಗಿ ಭಾಗವಹಿಸಿದ್ದ ಐಇಇಇ ಮಂಗಳೂರು ಉಪವಿಭಾಗದ ಚೇರ್ ಎಲೆಕ್ಟ್ ಡಾ. ವೇಣುಗೋಪಾಲ ಪಿ.ಎಸ್. ಮಾತನಾಡಿ ಈ ಉಪಕ್ರಮವನ್ನು ಮೆಚ್ಚಿ, ಸಹಕಾರ ಮತ್ತು ನಾಯಕತ್ವ ವೃದ್ಧಿಯಲ್ಲಿ ಐಇಇಇಯ ಪಾತ್ರವನ್ನು ವಿವರಿಸಿದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸಿಬ್ಬಂದಿ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಸಾಧನಾ ದೇಶ್ಮುಖ ಅವರು ಉಪಸ್ಥಿತರಿದ್ದರು. ಸುಮಾರು 60 ಮಂದಿ ಈ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ. ಅಶ್ವಿನಿ ಬಿ ಸ್ವಾಗತಿಸಿ, ಎಫ್‌ಡಿಪಿಯ ಉದ್ದೇಶಗಳನ್ನು ವಿವರಿಸಿದರು. ವಿಭಾಗದ ಪ್ರಾಧ್ಯಾಪಕಿ ಡಾ. ಮಂಜುಳಾ ಗುರುರಾಜ್ ರಾವ್ ಅವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ರಶ್ಮಿ ನವೀನ್ ಅವರು ಗೌರವ ಅತಿಥಿಯನ್ನು ಪರಿಚಯಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಚಿನ್ಮಯಿ ಶೆಟ್ಟಿ ವಂದಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ದೀಪಾ ಕಾರ್ಯಕ್ರಮ ನಿರೂಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತೀಯ ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಡೆಲ್‌ನ ಶಕ್ತಿಶಾಲಿ ಏಲಿಯನ್‌ವೇರ್ ಲ್ಯಾಪ್‌ಟಾಪ್‌ಗಳು

ಡೆಲ್ ಭಾರತದಲ್ಲಿ ಹೊಸ ಏಲಿಯನ್‌ವೇರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ನೂತನ ಬೆಲೆ, ಡಿಸ್ಪ್ಲೇ ಮತ್ತು ಪ್ರೊಸೆಸರ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಧ್ವಜ ದತ್ತು ದಿನ

ಪ್ರತಿ ವರ್ಷ ಜುಲೈ 22 ರಂದು ಭಾರತದ ರಾಷ್ಟ್ರೀಯ ಧ್ವಜ ದತ್ತು ದಿನವನ್ನು ಆಚರಿಸಲಾಗುತ್ತದೆ. ತಿರಂಗಾ ಧ್ವಜದ ಇತಿಹಾಸ, ವಿನ್ಯಾಸ ಮತ್ತು ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

ಸೂಪರ್‌ಫುಡ್ ಪೀಚ್: ಪ್ರತಿದಿನ ಈ ಒಂದು ಹಣ್ಣು ತಿಂದರೆ ಹೃದಯ, ಕಣ್ಣುಗಳಿಗೆ ಎಷ್ಟು ಲಾಭ ಗೊತ್ತಾ?

ನಿತ್ಯ ಪೀಚ್ ಹಣ್ಣು ಸೇವಿಸುವುದರಿಂದ ಲಭಿಸುವ ಆರೋಗ್ಯಕಾರಿ ಲಾಭಗಳು, ರೋಗನಿರೋಧಕ ಶಕ್ತಿ, ಹೃದಯದ ಭದ್ರತೆ ಹಾಗೂ ಕಣ್ಣಿನ ದೃಷ್ಟಿ ಹೆಚ್ಚಿಸುವ ವಿವರ ಇಲ್ಲಿದೆ.

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ