
ಬಿಜೆಪಿ ಕ್ಷೇತ್ರಾದ್ಯಕ್ಷರು ಮೂರ್ಖತನದ ಹೇಳಿಕೆ ನೀಡುವ ಬದಲು ಶಾಸಕರ ಮೌನವನ್ನು ಪ್ರಶ್ನಿಸಲಿ
-ಶುಭದರಾವ್ ಅದ್ಯಕ್ಷರು ಬ್ಲಾಕ್ ಕಾಂಗ್ರೆಸ್ ಕಾರ್ಕಳ
ನಿಟ್ಟೆ ವಿದ್ಯಾ ಸಂಸ್ಥೆಯ ಹಾಸ್ಟೆಲ್ ಗೋಡೆಯಲ್ಲಿ ದೇಶ ದ್ರೋಹದ ಬರಹ ಪ್ರಕರಣವನ್ನು ಸರಕಾರ ಗಂಬೀರವಾಗಿ ಪರಿಗಣಿಸಿದೆ, ಪೋಲೀಸ್ ಇಲಾಖೆಯು ಉಡುಪಿ ಎಸ್ಪಿಯವರ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆಯನ್ನು ಪ್ರಾರಂಭಿಸಿದ್ದು ಶೀಘ್ರದಲ್ಲೇ ಅರೋಪಿಯನ್ನು ಬಂದಿಸುವಲ್ಲಿ ಯಶಸ್ಸಿಯಾಗುತ್ತಾರೆ ಎನ್ನುವ ಭರವಸೆ ನಮಗಿದೆ. ಪಕ್ಷದ ವಿದ್ಯಾರ್ಥಿ ಸಂಘಟಣೆಯ ಪ್ರಮುಖರು ಸಂಸ್ಥೆಗೆ ಬೇಟಿ ನೀಡಿ ಅಕ್ರೋಶವನ್ನು ವ್ಯಕ್ತಪಡಿಸಿದ್ದು ಪೋಲೀಸ್ ಅಧಿಕಾರಿಗಳನ್ನು ಬೇಟಿ ಮಾಡಿ ತನಿಖೆ ನಡೆಸುವಂತೆ ಮನವಿಯನ್ನೂ ಮಾಡಿದ್ದಾರೆ. ಹಾಗಾಗಿ ಇಂತಹ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿಯನ್ನು ಅರಿತು ಪ್ರಚೋದನೆಯ ಹೇಳಿಕೆಯನ್ನು ನೀಡಿ ಶಾಂತಿ ಕದಡಿ ಭಯದ ವಾತಾವರಣ ಸೃಷ್ಟಿ ಮಾಡುವ ಯಾವುದೇ ಪ್ರಯತ್ನಕ್ಕೆ ಕಾಂಗ್ರೆಸ್ ಕೈ ಹಾಕಲಿಲ್ಲ.
ಆದರೆ ಈ ಬಗ್ಗೆ ಕ್ಷೇತ್ರ ಬಿಜೆಪಿ ಅಧ್ಯಕ್ಷರು ನೀಡಿದ ಹೇಳಿಕೆಯಿಂದ ಅನೇಕ ಅನುಮಾನಗಳು ಹುಟ್ಟುತ್ತವೆ, ಗೋಡೆ ಬರಹದ ಮೇಲೆ ಬಣ್ಣ ಹಚ್ಚಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದಲ್ಲಿ ಇವರ ನಾಯಕರು ಪ್ರಯತ್ನಿಸುತಿದ್ದಾರೆಯೆ ಎನ್ನುವ ಸಂಶಯ ಮೂಡುತ್ತದೆ. ತಮ್ಮ ಕ್ಷೇತ್ರದಲ್ಲಿ ಆಗಿರುವ ಈ ಗಂಬೀರ ಪ್ರಕರಣದ ಬಗ್ಗೆ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಹಿಸಲು ಕಾರಣವೇನು ಎನ್ನುವುದು ಅನೇಕ ಸಂಶಯಗಳಿಗೆ ಅವಕಾಶ ಮಾಡಿಕೊಟ್ಟಿದೆ. ಒಂದು ವೇಳೆ ಒತ್ತಡ ಹಾಕಿ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದರೆ ವಿದ್ಯಾ ಸಂಸ್ಥೆ ಎದುರು ಧರಣಿ, ಪ್ರತಿಭಟನೆ ಅನಿವಾರ್ಯವಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡುತ್ತೇವೆ.
ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಬಿಜೆಪಿ ಅಧ್ಯಕ್ಷರು ಮೂರ್ಖತನದ ಹೇಳಿಕೆ ನೀಡುವುದನ್ನು ಬಿಟ್ಟು ಸ್ಥಳಿಯ ಶಾಸಕರಿಂದ ಪ್ರತಿಕಿಯೆ ನೀಡಲು ಪ್ರಯತ್ನಿಸಲಿ ಮತ್ತು ತನಿಖೆಗೆ ಸಹಕರಿಸಲಿ ಎಂದು ಬ್ಲಾಕ್ ಅದ್ಯಕ್ಷ ಶುಭದರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.